'ಮುಸ್ಲೀಮರೇ ಗೋ ಸಾಕಣೆ ಮಾಡಬೇಡಿ, ಗೋರಕ್ಷಕರು ನಿಮ್ಮನ್ನು ಕೊಲ್ಲಬಹುದು'
ನವದೆಹಲಿ, ಜುಲೈ 25: ಇತ್ತೀಚೆಗೆ ರಾಜಸ್ತಾನದ ಅಲ್ವಾರ್‌ನಲ್ಲಿ ಗೋರಕ್ಷಕರು ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದಿರುವ ವಿಷಯ ರಾಜ್ಯಸಭೆಯಲ್ಲಿ ಚರ್ಚೆಯಾಯಿತು.
ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರ ಪತ್ನಿ ರಾಜ್ಯಸಭಾ ಸದಸ್ಯೆ ತಜೀಮ್ ಫಾತಿಮಾ ಈ ವಿಷಯದ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿ ಮುಸ್ಲಿಮರು ಗೋ ಸಾಕಣೆ ಮಾಡಬೇಡಿ ಗೋರಕ್ಷಕರು ನಿಮ್ಮನ್ನು ಕೊಂದು ಬಿಡುಬಹುದು ಎಂದು ಎಚ್ಚರಿಸಿದ್ದಾರೆ.
ರಾಜಸ್ತಾನದ ಅಲ್ವಾರ್ ಘಟನೆ ಬಳಿಕ ತಮ್ಮ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಗಿದ್ದ ಗೋವನ್ನು ಗೋಶಾಲೆಗೆ ಕೊಟ್ಟಿದ್ದಾಗಿ ಹೇಳಿದ ಫಾತಿಮಾ ಅವರು, ತಮ್ಮನ್ನೂ ಗೋರಕ್ಷಕರು ಕೊಲ್ಲಬಹುದೆಂಬ ಭಯಕ್ಕೆ ಹೀಗೆ ಮಾಡಿದೆವು ಎಂದಿದ್ದಾರೆ.

ಈ ಹಿಂದೆ ಗಂಗಾ ಶುದ್ಧೀಕರಣಕ್ಕೆ ಮತ್ತು ಗೋರಕ್ಷಣೆಗೆ ಬೆಂಬಲ ಸೂಚಿಸಿದ್ದ ಫಾತಿಮಾ ಅವರು ಗೋಶಾಲೆಗೆ 25 ಲಕ್ಷ ಕೊಡುವುದಾಗಿ ಹೇಳಿದ್ದರು. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಘೋಷಿಸಿದರು.












Click it and Unblock the Notifications