ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಪಾಸ್ ಪೋರ್ಟಿಗೆ ತಾಯಿ ಹೆಸರಿದ್ದರೆ ಸಾಕು!

By Mahesh
|
Google Oneindia Kannada News

ನವದೆಹಲಿ, ಮೇ 21 : ತಂದೆಯ ಹೆಸರು ಉಲ್ಲೇಖಿಸದೆ ಕೇವಲ ತಾಯಿಯ ಹೆಸರು ಇರುವ ಪಾಸ್ ಪೋರ್ಟ್ ಗೂ ಮಾನ್ಯತೆ ಇದೆ ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯುವಾಗ ಕೂಡಾ ತಂದೆಯ ಹೆಸರು ಬೇಕು ಎಂದು ಅಧಿಕಾರಿಗಳು ಒತ್ತಡ ಹೇರುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.

ತಂದೆಯ ಹೆಸರು ಉಲ್ಲೇಖಿಸದೆ ಕೇವಲ ತಾಯಿಯ ಹೆಸರು ತಿಳಿಸಲಾಗಿರುವ ಮಗುವೊಂದರ ಪಾಸ್‌ಪೋರ್ಟ್ ಅರ್ಜಿಯನ್ನು ಸ್ವೀಕರಿಸಬಹುದು ಎಂದು ಹೈಕೋರ್ಟ್ ಜಸ್ಟೀಸ್ ಮನ್ ಮೋಹನ್ ಅವರು ಪ್ರಾದೇಶಿಕ ಪಾಸ್ ಪೋರ್ಟ್‌ಕಚೇರಿಗೆ ನಿರ್ದೇಶನ ನೀಡಿದ್ದಾರೆ.[ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

Mother's name sufficient for passport: Delhi High Court

'ಕಾನೂನಿನ ಪ್ರಕಾರ ತಂದೆಯ ಹೆಸರು ಉಲ್ಲೇಖಿಸಲೇ ಬೇಕಾದ ಸಂದರ್ಭಗಳನ್ನು ಹೊರತು ಪಡಿಸಿ ಇತರೆ ಪ್ರಕರಣಗಳಲ್ಲಿ ಅದನ್ನು ಕಡ್ಡಾಯಗೊಳಿಸುವಂತಿಲ್ಲ.ತಂದೆ ಇಲ್ಲದ ಸಂದರ್ಭಗಳಲ್ಲಿ ತಾಯಿಯೇ ಮಗುವಿನ ಸಹಜ ಪೋಷಕಿಯಾಗಿರುವುದರಿಂದ ಅರ್ಜಿಯಲ್ಲಿ ಆಕೆಯ ಹೆಸರಿದ್ದರಷ್ಟೇ ಸಾಕು ಎಂದು ಕೋರ್ಟ್ ತಿಳಿಸಿದೆ.[ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!]

ಈಗಿನ ದಿನಗಳಲ್ಲಿ ಒಂಟಿ ತಾಯಂದಿರ ಸಂಖ್ಯೆ ಅನೇಕ ಕಾರಣಗಳಿಂದ ಹೆಚ್ಚುತ್ತಿದೆ-ಅವಿವಾಹಿತ ತಾಯಂದಿರು, ಲೈಂಗಿಕ ಕಾರ್ಯಕರ್ತರು, ಬಾಡಿಗೆ ತಾಯಂದಿರು, ರೇಪ್ ಸಂತ್ರಸ್ತರು, ತಂದೆಯಿಂದ ತ್ಯಜಿಸಲ್ಪಟ್ಟ ಮಕ್ಕಳ ಕಾರಣಗಳಿಂದ ಒಂಟಿ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಕೋರ್ಟ್ ಪರಿಗಣಿಸಿದೆ.[ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]

ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿ, ತಾನು ಹೆತ್ತ ಮಗುವಿಗೆ ತಂದೆ ಹೆಸರಿಲ್ಲದೆ ಪಾಸ್ ಪೋರ್ಟ್ ನೀಡುವಂತೆ ಅರ್ಜಿ ಹಾಕಿದ್ದರು. ಈ ಪ್ರಕರಣದಲ್ಲಿ ಮಗುವಿಗೆ 2005 ಹಾಗೂ 2011ರಲ್ಲಿ ತಂದೆಯ ಹೆಸರಿಲ್ಲದ ಅರ್ಜಿಯ ಮುಖಾಂತರವೇ ಪಾಸ್‌ಪೋರ್ಟ್ ನೀಡಲಾಗಿದ್ದರಿಂದ ತಂದೆಯ ಹೆಸರು ಕಾನೂನಾತ್ಮಕವಾಗಿ ಅಗತ್ಯವಿಲ್ಲ ಬದಲಾಗಿ ಪ್ರಕ್ರಿಯೆ ಪೂರೈಸುವ ಭಾಗವಷ್ಟೇ ಆಗಿದೆ ಹೀಗಾಗಿ ತಿರಸ್ಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.(ಪಿಟಿಐ)

English summary
Authorities cannot insist upon mentioning the name of one's biological father in passport as mother's name is sufficient in certain cases where she is a single parent, the Delhi High Court has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X