ಪ್ರಧಾನಿ ಮೋದಿಗೆ ಮಾತಿನ ಮೊನಚಿನಲ್ಲೇ ಚುಚ್ಚಿದ ರಾಹುಲ್ ಗಾಂಧಿ!

ನವದೆಹಲಿ, ಜುಲೈ 21: 'ಈ ದೇಶ ಕಟ್ಟಲು ಪ್ರೀತಿ ಮತ್ತು ಅಕ್ಕರೆ ಮುಖ್ಯವೇ ಹೊರತು ಭಯ ಮತ್ತು ಸಿಟ್ಟಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತಿನ ಮೊನಿಚಿನಲ್ಲೇ ಚುಚ್ಚಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.

ಸಂಸತ್ತಿನಲ್ಲಿ ನಿನ್ನೆ(ಜುಲೈ 20) ನಡೆದ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯಕ್ಕೂ ಮುನ್ನ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಬಿಜೆಪಿ ಮತ್ತು ಮೋದಿ ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟ ರಾಹುಲ್ ಗಾಂಧಿ, ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಂಡು ಸುದ್ದಿಯಾಗಿದ್ದರು.

ಆದರೆ ನಂತರ ನರೇಂದ್ರ ಮೋದಿಯವರು ಭಾಷಣ ಮಾಡುವ ಸಮಯದಲ್ಲಿ ರಾಹುಲ್ ಗಾಂಧಿ ವರ್ತನೆಯನ್ನು ಬಾಲಿಶ ಎಂದು ಕರೆದಿದ್ದರು. ಇದಕ್ಕೆ ಟ್ವೀಟ್ ಮೂಲಕ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ.

Monsoon session: Rahul Gandhi responds PM Narendra Modi

"ನಿನ್ನೆಯ ಸಂಸತ್ತಿನ ಚರ್ಚೆಯ ಮುಖ್ಯಾಂಶ:
ಪ್ರಧಾನಿ ಮೋದಿಯವರು ಭಯ ಮತ್ತು ಸಿಟ್ಟಿನ ಮೂಲಕ ತಮ್ಮನ್ನು ಸಮರ್ಥಿಸಿಕೊಳ್ಳಲು ತೊಡಗುತ್ತಾರೆ. ಆದರೆ ನಾವು ಪ್ರೀತಿ ಮತ್ತು ಅಕ್ಕರೆಯಿಂದ ಮಾತ್ರ ಈ ದೇಶವನ್ನು ಕಟ್ಟುವುದಕ್ಕೆ ಸಾಧ್ಯ ಎನ್ನುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+