ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಬರ್ಟ್ ವಾದ್ರಾಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಎಂಥ ಸಂಬಂಧ?

|
Google Oneindia Kannada News

ನವದೆಹಲಿ, ಫೆಬ್ರವರಿ 9 : ವಿದೇಶದಲ್ಲಿ ಸರಕಾರದ ಕಣ್ಣಿಗೆ ಮಣ್ಣೆರಚಿ, ಅಕ್ರಮವಾಗಿ ಆಸ್ತಿಪಾಸ್ತಿ ಮಾಡಿಕೊಂಡ ಆರೋಪ ಹೊತ್ತಿರುವ ರಾಬರ್ಟ್ ವಾದ್ರಾ ಅವರಿಗೆ ಶಸ್ತ್ರಾಸ್ತ್ರ ಪೂರೈಕೆದಾರನೊಂದಿಗೆ ಮತ್ತು ಅವರ ಸಂಬಂಧಿಗಳೊಂದಿಗೆ ಇರುವ ಸಂಬಂಧವಾದರೂ ಏನು, ಅವರಿಗೆ ಫ್ರಾನ್ಸ್ ನಿಂದ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದವರು ಯಾರು?

ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯ, ರಾಹುಲ್ ಗಾಂಧಿ ಅವರ ಜೀಜಾಜಿ, ಪ್ರಿಯಾಂಕಾ ವಾದ್ರಾ ಅವರ ಗಂಡ ಮತ್ತು ಸೋನಿಯಾ ಗಾಂಧಿ ಅವರ ಅಳಿಯ, ರಿಯಲ್ ಎಸ್ಟೇಟ್ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ಮೂರನೇ ದಿನ ತೀವ್ರವಾಗಿ ವಿಚಾರಿಸುತ್ತಿದೆ. ಬುಧವಾರ ಮತ್ತು ಗುರುವಾರ ಗಂಡನನ್ನು ಬಿಡಲು ಬಂದಿದ್ದ ಪ್ರಿಯಾಂಕಾ ಶನಿವಾರ ಬಂದಿಲ್ಲ.

ಬುಧವಾರ ಮತ್ತು ಗುರುವಾರ ಸುಮಾರು 11 ಗಂಟೆಗಳ ಕಾಲ ರಾಬರ್ಟ್ ಅವರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ ಶನಿವಾರವೂ ವಿಚಾರಣೆಯನ್ನು ಮುಂದುವರಿಸಿದ್ದು, ವಿವಾದಾತ್ಮಕ ಶಸ್ತ್ರಾಸ್ತ್ರ ಪೂರೈಕೆದಾರ ಸಂಜಯ್ ಭಂಡಾರಿ ಅವರೊಂದಿಗೆ ರಾಬರ್ಟ್ ವಾದ್ರಾ ಎಂಥ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಸತ್ಯಾಂಶ ತಿಳಿಯಲು ಯತ್ನಿಸುತ್ತಿದೆ.

ಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿ

ಯುನೈಟೆಡ್ ಕಿಂಗಡಂನಲ್ಲಿ ಆಸ್ತಿಪಾಸ್ತಿ ಕೊಳ್ಳಲು ಅಕ್ರಮವಾಗಿ ಹಣ ಹೊಂದಿಸಲು ಸಹಾಯ ಮಾಡಿದ, ಅವರ ಎಲ್ಲ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ, ಎಲ್ಲ ಪತ್ರ ವ್ಯವಹಾರಗಳನ್ನೂ ಮಾಡಿದ ಮನೋಜ್ ತಿವಾರಿ ಎಂಬುವವರೊಂದಿಗೆ ಕೂಡ ರಾಬರ್ಟ್ ಯಾವ ರೀತಿಯ ಸಂಬಂಧ ಹೊಂದಿದ್ದರು ಎಂಬುದನ್ನು ಕೂಡ ತಿಳಿಯಲು ವಾದ್ರಾರನ್ನು ಇಡಿ ಕರೆಸಿದೆ.

ಸಂಜಯ್ ಭಂಡಾರಿ ಯಾರೆಂದೇ ಗೊತ್ತಿಲ್ಲ

ಸಂಜಯ್ ಭಂಡಾರಿ ಯಾರೆಂದೇ ಗೊತ್ತಿಲ್ಲ

ಲಂಡನ್ನಿನಲ್ಲಿ 12 ಮಿಲಿಯನ್ ಪೌಂಡ್ಸ್ ಮೌಲ್ಯದ ಆಸ್ತಿಪಾಸ್ತಿಯನ್ನು ರಾಬರ್ಟ್ ವಾದ್ರಾ ಅವರು ಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಇದೆಲ್ಲದಕ್ಕೆ ಹಣಕಾಸಿನ ಪೂರೈಕೆ ಮಾಡಿದ್ದು ಯಾರು? ವಾದ್ರಾಗೂ ಸಂಜಯ್ ಭಂಡಾರಿಗೂ ಎಂಥ ಪತ್ರ ವ್ಯವಹಾರವಿತ್ತು? ಎಂದು ಇಡಿ ಪ್ರಶ್ನಿಸುತ್ತಿದೆ. ಆದರೆ, ತಮಗೆ ಸಂಜಯ್ ಭಂಡಾರಿ ಯಾರೆಂದೇ ಗೊತ್ತಿಲ್ಲ ಎಂದು ರಾಬರ್ಟ್ ವಾದ್ರಾ ಕೈಝಾಡಿಸಿಕೊಂಡಿದ್ದಾರೆ. ತಮ್ಮ ಮೇಲೆ ರಾಜಕೀಯ ದುರುದ್ದೇಶದಿಂದ ಆರೋಪ ಹೊರಿಸಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ?ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ?

ದಾಖಲೆಗಳು ಜಾರಿ ನಿರ್ದೇಶನಾಲಯದ ಬಳಿ ಇವೆ

ದಾಖಲೆಗಳು ಜಾರಿ ನಿರ್ದೇಶನಾಲಯದ ಬಳಿ ಇವೆ

ಆದರೆ, ಮೂಲಗಳ ಪ್ರಕಾರ, ರಾಬರ್ಟ್ ವಾದ್ರಾ ಅವರಿಗೂ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ಸಂಜಯ್ ಭಂಡಾರಿ ಅವರಿಗೂ ಸಂಪರ್ಕವಿತ್ತು ಎಂಬುದನ್ನು ಸೂಚಿಸುವ ಕೆಲವಾರು ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಅವರಿಗೆ ತೋರಿಸಿದೆ. 2012ರ ಆಗಸ್ಟ್ ನಲ್ಲಿ ಫ್ರಾನ್ಸ್ ನ ನೈಸ್ ನಿಂದ ದೆಹಲಿಗೆ ವಿಮಾನ ಟಿಕೆಟ್ ಅನ್ನು ಸಂಜಯ್ ಭಂಡಾರಿಯೇ ಖರೀದಿಸಿದ್ದ ಎಂಬುದಕ್ಕೆ ಜಾರಿ ನಿರ್ದೇಶನಾಲಯದ ಬಳಿ ಸಾಕ್ಷಿಯಿದೆ.

ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ

ಮಾಡಿದ ಖರ್ಚಿಗೆ ದುಡ್ಡು ಇಕ್ಕೆಂದ ಭಂಡಾರಿ

ಮಾಡಿದ ಖರ್ಚಿಗೆ ದುಡ್ಡು ಇಕ್ಕೆಂದ ಭಂಡಾರಿ

ಗುರುವಾರ ನಡೆಸಿದ ವಿಚಾರಣೆಯ ಸಂದರ್ಭದಲ್ಲಿ, ಸಂಜಯ್ ಭಂಡಾರಿ ಅವರ ಸಂಬಂಧಿ ಸುಮಿತ್ ಛಡ್ಡಾ ಅವರಿಗೂ ಮತ್ತು ರಾಬರ್ಟ್ ವಾದ್ರಾ ಅವರ ನಡುವೆ ನಡೆದ ಈಮೇಲ್ ವ್ಯವಹಾರದ ಬಗ್ಗೆ ಕೆಲ ದಾಖಲೆಗಳನ್ನು ಇಡಿ ಅಧಿಕಾರಿಗಳು ತೋರಿದ್ದರು. ಅದರಲ್ಲಿ ಲಂಡನ್ನಿನ 12 ಬ್ರಯನ್‌ಸ್ಟನ್ ಸ್ಕ್ವೇರ್ ನಲ್ಲಿ ಇರುವ ಮ್ಯಾನ್ಶನ್ ನಲ್ಲಿ ಮಾಡಿದ ಪುನರ್ ನಿರ್ಮಾಣ ಕಾಮಗಾರಿಯ ಖರ್ಚುವೆಚ್ಚವನ್ನು ನೀಡಬೇಕೆಂದು ಸುಮಿತ್ ಮೇಲ್ ಮಾಡಿದ್ದರು. ಈ ಆಸ್ತಿಯ ಮೊತ್ತವೇ 1.9 ಮಿಲಿಯನ್ ಪೌಂಡ್ಸ್. ಅದರ ಬೆಲೆ ರುಪಾಯಿಗಳಲ್ಲಿ 17 ಕೋಟಿ 51 ಲಕ್ಷ.

ತಿವಾರಿಗೂ ವಾದ್ರಾಗೂ ಎಲ್ಲಿಯ ಲಿಂಕು?

ತಿವಾರಿಗೂ ವಾದ್ರಾಗೂ ಎಲ್ಲಿಯ ಲಿಂಕು?

ಇದಕ್ಕೆ ಪ್ರತಿಯಾಗಿ, ಈ ಪ್ರಶ್ನೆಗೆ ಉತ್ತರವನ್ನು ಮನೋಜ್ ಅವರನ್ನು ಕೇಳಿ ತಿಳಿಸುತ್ತೇನೆ ಎಂದು ರಾಬರ್ಟ್ ವಾದ್ರಾ ತಿಳಿಸಿದ್ದರು. ಇಲ್ಲಿ ಪ್ರಸ್ತಾಪಿಸಿರುವ ಮನೋಜ್ ಅಂದ್ರೆ ಮನೋಜ್ ತಿವಾರಿ ಅವರು, ರಾಬರ್ಟ್ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪನಿಯ ಮಾಜಿ ಉದ್ಯೋಗಿ. ಹಣ ದುರ್ವ್ಯವಹಾರ ಮಾಡಿದ ಕೇಸನ್ನು ಮೊದಲಿಗೆ ಇದೇ ಮನೋಜ್ ತಿವಾರಿ ವಿರುದ್ಧ ಹಾಕಲಾಗಿತ್ತು. ಶನಿವಾರ ರಾಬರ್ಟ್ ವಾದ್ರಾ ಅವರು ಜಾರಿ ನಿರ್ದೇಶನಾಲಯಕ್ಕೆ ತೆರಳುವ ಮೊದಲು ಪಂಜಾಬ್ ನ ಸಚಿವ, ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ಅವರು ರಾಬರ್ಟ್ ಅವರನ್ನು ಭೇಟಿಯಾಗಿದ್ದಾರೆ.

ನಾನು ಗಂಡನ ಪರವಾಗಿದ್ದೇನೆ

ನಾನು ಗಂಡನ ಪರವಾಗಿದ್ದೇನೆ

ಬುಧವಾರ ಮತ್ತು ಗುರುವಾರ ತಮ್ಮ ಗಂಡನನ್ನು ಜಾರಿ ನಿರ್ದೇಶನಾಲಯಕ್ಕೆ ಕಾರಿನಲ್ಲಿ ಬಿಡಲು ಬಂದಿದ್ದ ಪತ್ನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು, ತಾವು ತಮ್ಮ ಗಂಡ ಮತ್ತು ಕುಟುಂಬದ ಪರವಾಗಿದ್ದು, ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದರು. ಅವರ ಮಾತಿಗಿಂತ ಅವರ ಪ್ರಸ್ತುತಿಯೇ ಹೆಚ್ಚು ಸುದ್ದಿಯಾಗಿತ್ತು. ಪ್ರಿಯಾಂಕಾ ವಾದ್ರಾ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣದಿಂದಲೇ ಅವರ ಪತಿಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಲಂಡನ್ನಿನಲ್ಲಿ ರಾಬರ್ಟ್ ಆಸ್ತಿ ಮೌಲ್ಯವೆಷ್ಟು?

ಲಂಡನ್ನಿನಲ್ಲಿ ರಾಬರ್ಟ್ ಆಸ್ತಿ ಮೌಲ್ಯವೆಷ್ಟು?

ಯುಕೆಯಲ್ಲಿ ಹಲವಾರು ಆಸ್ತಿಯನ್ನು ಅನೈತಿಕವಾಗಿ ಮಾಡಿಕೊಂಡಿದ್ದಾರೆ ಮತ್ತು ಅವುಗಳನ್ನು ಘೋಷಣೆ ಮಾಡಿಲ್ಲ ಎಂಬ ಆರೋಪ ರಾಬರ್ಟ್ ಮೇಲಿದೆ. ಅಲ್ಲಿ ಮೂರು ವಿಲ್ಲಾಗಳಾಗಿದ್ದು, ಉಳಿದವು ಐಷಾರಾಮಿ ಫ್ಲಾಟ್ ಗಳಾಗಿವೆ. ಇವುಗಳಲ್ಲಿನ ಎರಡು ಮನೆಗಳ ಬೆಲೆಯೇ 83 ಕೋಟಿ ರುಪಾಯಿನಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ. ಇವೆಲ್ಲವನ್ನು 2005ರಿಂದ 2010ರೊಳಗೆ ಅವರು ಖರೀದಿಸಿದ್ದಾರೆಂದು ಆರೋಪಿಸಲಾಗಿದೆ. ಅವರು ಆಸ್ತಿಗಳನ್ನು ಖರೀದಿಸಿದ ಸಮಯದಲ್ಲಿ ಯುಪಿಎ ಕೇಂದ್ರದಲ್ಲಿ ಸರಕಾರ ನಡೆಸುತ್ತಿತ್ತು. ಈ ಆಸ್ತಿಗಳ ಬಗ್ಗೆ ವಿವರ ನೀಡಬೇಕೆಂದು ಅವರನ್ನು ಕರೆಸಲಾಗಿದೆ. ಅವರ ಈ ಎಲ್ಲ ವ್ಯವಹಾರಗಳನ್ನು ಮನೋಜ್ ತಿವಾರಿಯೇ ನೋಡಿಕೊಳುತ್ತಿದ್ದ.

English summary
Money laundering, arms dealer link : Enforcement Directorate continues to question Robert Vadra, businessman and husband of Priyanka Gandhi Vadra, for the third day. ED wants to know what is his connection with arms dealder Sanjay Bhandari and Manoj Arora, who looked after his dealings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X