ಪ್ರಧಾನಿ ಮೋದಿಯವರದು ಸಂಘರ್ಷದ ಮನಸ್ಥಿತಿ: ಕಾಂಗ್ರೆಸ್
Recommended Video

ನವದೆಹಲಿ, ಜುಲೈ 04: 'ಮೋದಿಯವರು ಸಂಘರ್ಷದ ಮನಸ್ಥಿತಿ ಹೊಂದಿದ್ದಾರೆ. ದೇಶದ ಜನರ ಹಿತಾಸಕ್ತಿಯಿಂದಾಗಿ ಬಿಜೆಪಿ ಸರ್ಕಾರವನ್ನು ದೇಶದಿಂದ ಕಿತ್ತೆಸಯಬೇಕಿದೆ' ಎಂದು ಕಾಂಗ್ರೆಸ್ ದೂರಿದೆ.
ಮೈತ್ರಿಕೂಟ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಆನಂದ ಶರ್ಮಾ, 'ಮೈತ್ರಿಕೂಟ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮಗೆ ಅವರ ಸರ್ಟಿಫಿಕೇಟಿನ ಅಗತ್ಯವಿಲ್ಲ. ಆದರೆ ದೇಶದ ಹಿತಾಸಕ್ತಿಗಾಗಿಯೇ ಅವರ ಸರ್ಕಾರವನ್ನು ಕಿತ್ತೆಸಯಬೇಕಿದೆ. ನಾವು ಈ ಬಗ್ಗೆ ಯೋಚಿಸುತ್ತಿದ್ದೇವೆ, ನಮಗೆ ಮೋದಿಯವರ ಸಲಹೆಯ ಅಗತ್ಯವಿಲ್ಲ' ಎಂದಿದ್ದಾರೆ.
'ಮೋದಿ ದುರಹಂಕಾರ ಮತ್ತು ಮನಸ್ಸಿನಲ್ಲಿ ಕಹಿ ಇಟ್ತುಕೊಂಡು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ವೈಯಕ್ತಿಕ ದ್ವೇಷಗಳನ್ನಿಟ್ಟುಕೊಂಡಿದ್ದಾರೆ. ಇದು ಸರಿಯಲ್ಲ' ಎಂದು ಅವರು ಹೇಳಿದರು.

'ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ, ಕಲ್ಲು ಹೊಡೆದು ಸಾಯಿಸುವುದು, ಹತ್ಯೆಯ ಪ್ರಕರಣಗಳು ನಡೆಯುತ್ತಿವೆ. ಇದೇ ಉತ್ತಮ ಸರ್ಕಾರ ಎನ್ನುವುದಾದರೆ ಕೆಟ್ಟ ಸರ್ಕಾರ ಯಾವುದು?' ಹಾಗಾದರೆ ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications