ಬಹಿರಂಗ ಮಾತುಕತೆಯಿಂದ ಉತ್ತಮ ನಿರ್ಧಾರ ಸಾಧ್ಯ: ಮೋದಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ತೆರಳುವ ಮುನ್ನ ಮಾತನಾಡಿ ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದರಲ್ಲಿ ಸರ್ಕಾರಕ್ಕೆ ನಂಬಿಕೆಯಿದೆ. ಇದರಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಬುಧವಾರ ಸಂಸತ್ತಿನ ಹೊರಭಾಗದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮುನ್ನ ಮಾತನಾಡಿದ್ದಾರೆ. ಈ ಬಾರಿ ಉತ್ತಮ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಎಲ್ಲ ಪಕ್ಷಗಳು ಇದರಲ್ಲಿ ಸಹಭಾಗಿಗಳಾಗಲಿದ್ದಾರೆ. ಜನರ ಆಶೋತ್ತರಗಳಿಗೆ ಉತ್ತಮ ರೀತಿಯ ಚರ್ಚೆ ನಿರ್ಧಾರಗಳು ಹೊರ ಬರಲಿವೆ ಎಂದು ಹೇಳಿದ್ದಾರೆ.[ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ]

modi: Govt believes in debating every issue in open manner

ಇಂದಿನ ಸಂಸತ್ತಿನಲ್ಲಿ ಮೊದಲು ಜಿಎಸ್ ಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಒಂದು ದೇಶದಲ್ಲಿ ಒಂದೇ ತೆರಿಗೆ ಬಗ್ಗೆ ಹಿಂದಿನ ಸಂಸತ್ತಿನಲ್ಲಿ ನಿರ್ದಾರಗಳನ್ನು ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ.

ಇನ್ನು ನೋಟಿನ ವಿಷಯಕ್ಕೆ ಸಂಬಂಧಿಸಿದಂತೆ ಸಂತ್ತಿನಲ್ಲಿಯೇ ವಿಪಕ್ಷಗಳು ಈಗಾಗಲೇ ಎಲ್ಲ ರೀತಿಯ ವಾದಗಳು ನಡೆಯುತ್ತಿದ್ದು, ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರವೇ ಶುರುವಾಗಿದೆ.

ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟೈಕ್ ನಡೆಸಿರುವ ಸರ್ಕಾರ ಸಾಮಾನ್ಯ ಜನರಿಗೆ ತೀವ್ರ ತೊಂದರೆ ನೀಡುತ್ತಿದೆ ಎಂಬುದು ವಿಪಕ್ಷಗಳ ವಾದವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime Minister Narendra Modi on Wednesday said that the government believes in debating every issue in an open manner, as it sets the stage for very good decisions.
Please Wait while comments are loading...