ಮೋದಿ ಸರ್ಕಾರ ಇಂದಿನಿಂದ ದೇಶಾದ್ಯಂತ 'ಉತ್ತಮ ಆಡಳಿತ ಸಪ್ತಾಹ' ಆರಂಭ
ನವದೆಹಲಿ ಡಿಸೆಂಬರ್ 20: ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸೋಮವಾರದಿಂದ (ಡಿಸೆಂಬರ್ 20) ದೇಶಾದ್ಯಂತ 'ಉತ್ತಮ ಆಡಳಿತ ಸಪ್ತಾಹ' ಅಭಿಯಾನವನ್ನು ಆರಂಭಿಸಿದೆ. ಇದು ಭಾರತದ ಹಳ್ಳಿಗಳ ಕುಂದು ಕೊರತೆ ಪರಿಹಾರದ ಗುರಿಯನ್ನು ಹೊಂದಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯೇ ಮಾಹಿತಿ ನೀಡಿದ್ದಾರೆ. ಜನಪರ ಉತ್ತಮ ಆಡಳಿತವನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಮತ್ತು ನಾಗರಿಕರಿಗೆ ಮೊದಲ ಸ್ಥಾನ ನೀಡುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಚಿವಾಲಯದ ಸಿಬ್ಬಂದಿಗಳು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಕೇಳುವ ಮೂಲಕ ಮತ್ತು ಪಿಂಚಣಿಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಮೇಲ್ವಿಚಾರಣೆ ಮಾಡುವ ಮೂಲಕ ಡಿಸೆಂಬರ್ 20 ರಿಂದ ಡಿಸೆಂಬರ್ 25 ರವರೆಗೆ 'ಉತ್ತಮ ಆಡಳಿತ ವಾರ'ವನ್ನು ಆಚರಿಸುತ್ತದೆ. ಇದರೊಂದಿಗೆ ಇದು ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ವಿಲೇವಾರಿ ಮತ್ತು ಗ್ರಾಮ ಮಟ್ಟದವರೆಗೆ ಸೇವಾ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
'ಉತ್ತಮ ಆಡಳಿತ ಸಪ್ತಾಹ'ದ ಭಾಗವಾಗಿ, DARPG ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT), ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ, ವ್ಯವಹಾರಗಳು ಮತ್ತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ, ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ವಾರವಿಡೀ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
Union Minister @DrJitendraSingh inaugurates #GoodGovernanceWeek (20th-25th December 2021) today at Bhim Auditorium, Dr. Ambedkar International Centre, New Delhi@DARPG_GoI pic.twitter.com/97UYxK8WDA
— PIB India (@PIB_India) December 20, 2021
ಡಿಸೆಂಬರ್ 25ರಂದು 'ಗುಡ್ ಗವರ್ನೆನ್ಸ್ ಇಂಡೆಕ್ಸ್' ಕೂಡ ಬಿಡುಗಡೆಯಾಗಲಿದೆ. ಆರು ದಿನಗಳ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು ಹರಿಯಾಣ, ಒಡಿಶಾ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಅಭಿಯಾನದ ಜೊತೆ ಮುಖ್ಯವಾಗಿ ಗುರುತಿಸಿಕೊಳ್ಳಲಿವೆ. ಕೇಂದ್ರ ಸರ್ಕಾರ ಈ ವರ್ಷದ ಆರಂಭದಲ್ಲಿ, ಕೇಂದ್ರ ಮಟ್ಟದಲ್ಲಿ 3 ಲಕ್ಷಕ್ಕೂ ಹೆಚ್ಚು ಬಾಕಿ ಇರುವ ನಾಗರಿಕರ ಕುಂದುಕೊರತೆಗಳನ್ನು ತೆರವುಗೊಳಿಸಲು ತನ್ನದೇ ಆದ ಅಭಿಯಾನವನ್ನು ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಇದಕ್ಕಾಗಿ ಪೋರ್ಟಲ್ ಅನ್ನು ಪ್ರಾರಂಭಿಸಲಿದ್ದಾರೆ. ರಾಜ್ಯದ ಅಧಿಕಾರಿಗಳೊಂದಿಗೆ ವಾಟ್ಸಾಪ್ ಗುಂಪುಗಳನ್ನು ರಚಿಸಲಾಗಿದ್ದು, ಕೇಂದ್ರದ ಪೋರ್ಟಲ್‌ನಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಡಿಸೆಂಬರ್ 25 ರಂದು 'ಉತ್ತಮ ಆಡಳಿತ ಸೂಚ್ಯಂಕ' ಬಿಡುಗಡೆಯಾಗಲಿದೆ. ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, "ಸೋಮವಾರದಿಂದ ಉತ್ತಮ ಆಡಳಿತ ಸಪ್ತಾಹ ಪ್ರಾರಂಭವಾಗಲಿದೆ. ವಾರದಲ್ಲಿ ಕೇಂದ್ರವು ಕೈಗೊಂಡಿರುವ ವಿವಿಧ ಉತ್ತಮ ಆಡಳಿತ ಉಪಕ್ರಮಗಳನ್ನು ಎತ್ತಿ ಹಿಡಿಯಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಇದು ಅಭಿಯಾನದ ಮುಖ್ಯ ವಿಷಯವಾಗಿದೆ. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆಡಳಿತವನ್ನು ಹೊಂದಿದೆ" ಎಂದರು.
75ನೇ 'ಆಜಾದಿ ಕಾ ಅಮೃತ್ ಮಹೋತ್ಸವ' ಹಬ್ಬದ ಅಂಗವಾಗಿ 'ಉತ್ತಮ ಆಡಳಿತ ಸಪ್ತಾಹ'ವನ್ನು ಆಚರಿಸಲಾಗುತ್ತಿದೆ. ಇದರ ಅಡಿಯಲ್ಲಿ ಎಲ್ಲಾ ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸುವ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಈ ಅಭಿಯಾನದಲ್ಲಿ 700ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ. ಅದೇ ಸಮಯದಲ್ಲಿ ವಾರದ ಅವಧಿಯ ಕಾರ್ಯಕ್ರಮದಲ್ಲಿ ಅವರು ಸಕಾಲಿಕ ಕುಂದುಕೊರತೆ ಪರಿಹಾರ ಮತ್ತು ಸೇವೆಯ ವಿತರಣೆಯಲ್ಲಿ ಸುಧಾರಣೆಗಾಗಿ ತಹಸಿಲ್ / ಪಂಚಾಯತ್ ಸಮಿತಿಯ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಾರೆ. ಜೊತೆಗೆ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಮತ್ತು ರಾಜ್ಯ ಸರ್ಕಾರಗಳು ತಹಸಿಲ್/ಪಂಚಾಯತ್ ಸಮಿತಿ ಕಚೇರಿಗಳಲ್ಲಿ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು ಮತ್ತು ಆಯಾ ರಾಜ್ಯಗಳಿಂದ ಉತ್ತಮ ಆಡಳಿತದ ಉಪಕ್ರಮಗಳನ್ನು ಹಂಚಿಕೊಂಡರು.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿ. 25ರಂದು 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುವುದು. 'ಉತ್ತಮ ಆಡಳಿತ ಸಪ್ತಾಹ'ದ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರುವರು. ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.












Click it and Unblock the Notifications