ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಂಗೆ ನಮನ ಸಲ್ಲಿಸಿದ 96ರ ಹರೆಯದ ಮಾರ್ಷಲ್ ಗೊಂದು ಸಲಾಂ

By Mahesh
|
Google Oneindia Kannada News

ನವದೆಹಲಿ, ಜುಲೈ 28: ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಮೇಘಾಲಯದಿಂದ ಪಾರ್ಥೀವ ಶರೀರ ದೆಹಲಿಯ ಪಾಲಂ ವಿಮಾನ ನಿಲ್ದಾಣ ತಲುಪಿದೆ, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಆದರೆ, ವಾಯುಸೇನೆಯ ಮಾರ್ಷಲ್ ಅರ್ಜನ್ ಸಿಂಗ್ ಅವರು ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದ ರೀತಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ.

ವಾಯುಸೇನೆಯ ಪರಮೋಚ್ಚ ಅಧಿಕಾರ ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮಾನಾಂತರ ಫೈವ್ ಸ್ಟಾರ್ ಶ್ರೇಯಾಂಕ ಹೊಂದಿರುವ ವಾಯುಸೇನೆಯ ಮಾರ್ಷಲ್ ಅರ್ಜನ್ ಸಿಂಗ್ ಅವರು ಅಬ್ದುಲ್ ಕಲಾಂ ಅವರ ಪಾರ್ಥೀವ ಶರೀರಕ್ಕೆ ಎದ್ದು ನಮಿಸಿದ್ದು ಎಲ್ಲರ ಗಮನ ಸೆಳೆಯಿತು.

IAF Marshal Arjan Singh

96 ವರ್ಷ ವಯಸ್ಸಿನ ಪಂಜಾಬಿನ ಈ ಯೋಧ ವಯೋ ಸಹಜ ಅನಾರೋಗ್ಯದಿಂದ ವ್ಹೀಲ್ ಕುರ್ಚಿಯಲ್ಲೇ ಕಾಲದೂಡುತ್ತಿದ್ದಾರೆ. ಆದರೆ, ದೇಶದ ಹೆಮ್ಮೆಯ ಪುತ್ರ ಅಬ್ದುಲ್ ಕಲಾಂ ಅವರಿಗೆ ಕುಳಿತುಕೊಂಡು ನಮನ ಸಲ್ಲಿಸುವುದು ಸರಿಯಲ್ಲ ಎಂದು ನಿರ್ಧರಿಸಿದ ಮಾರ್ಷಲ್ ಅರ್ಜನ್ ಸಿಂಗ್ ಅವರು ಕುರ್ಚಿಯಿಂದ ಎದ್ದು ಕಲಾಂ ಅವರ ಪಾರ್ಥೀವ ಶರೀರಕ್ಕೆ ಹೂಗುಚ್ಛ ಇಟ್ಟು ಅಂತಿಮ ಸೆಲ್ಯೂಟ್ ಹೊಡೆದಿದ್ದಾರೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಬ್ರಿಟಿಷ್ ಇಂಡಿಯಾದ ಪಂಜಾಬಿನಲ್ಲಿ 1919ರ ಏಪ್ರಿಲ್ 15ರಂದು ಜನಿಸಿದ ಸಿಂಗ್ ಅವರು ವಾಯುಸೇನೆಯ ನಂ.1 ಸ್ಕ್ವಾರ್ಡನ್ ಮುನ್ನಡೆಸಿದ್ದರು. 1944ರಲ್ಲಿ ಅರಕಾನ್ ಅಭಿಯಾನದ ಮುಂದಾಳತ್ವ ವಹಿಸಿದ್ದರು. ಇಂದು ಅರ್ಜನ್ ಸಿಂಗ್ ಅವರು ಇಟ್ಟ ನಡೆ ದೇಶದ ಹಲವರಿಗೆ ಸ್ಪೂರ್ತಿಯಾಗಲಿದೆ.

English summary
He is 96-year-old. He finds it very difficult to walk. Most of the time, he seats on a wheel chair. But the Marshal of the Indian Air Force (IAF) Arjan Singh defied all hurdles when it was about former President, Dr APJ Abdul Kalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X