ಚಿತೆಯಿಂದೆದ್ದ ಮಗು, ಮತ್ತೆ ಚಿತೆ ಸೇರಿತು! ಮ್ಯಾಕ್ಸ್ ಆಸ್ಪತ್ರೆ ಅವಾಂತರ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 06: ಇತ್ತೀಚೆಗಷ್ಟೆ, ಸತ್ತಿವೆ ಎಂದು ಘೋಷಿಸಲಾಗಿದ್ದ ಅವಳಿ ಮಕ್ಕಳಲ್ಲಿ ಒಂದು ಮಗು ಬದುಕಿದ್ದಿದ್ದು ಅಂತ್ಯಸಂಸ್ಕಾರದ ಸಮಯದಲ್ಲಿ ಗಮನಕ್ಕೆ ಬಂದು, ಮ್ಯಾಕ್ಸ್ ಆಸ್ಪತ್ರೆಯ ನಿರ್ಲಕ್ಷ್ಯ ಜಗಜ್ಜಾಹೀರಾಗಿತ್ತು.

ಚಿತೆಯಿಂದೆದ್ದ ಮಗು! ಇದು ಪವಾಡವಲ್ಲ, ವೈದ್ಯರ ಬೇಜವಾಬ್ದಾರಿ!

ಆದರೆ ಆಗ ಬದುಕಿದ್ದ ಮಗು ಇಂದು(ಡಿ.06) ಅಸುನೀಗಿದ್ದು, ಮಗು ಹುಟ್ಟಿದ್ದ ಸಮಯದಲ್ಲಿ ಮ್ಯಾಕ್ಸ್ ಆಸ್ಪತ್ರೆ ತೋರಿದ್ದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.

Max hospital negligence: Newborn found alive passes away

ನವೆಂಬರ್ 30 ರಂದು 20 ವರ್ಷದ ವರ್ಷ ಎಂಬ ಮಹಿಳೆ ದೆಹಲಿಯ ಶಾಲಿಮರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಬದುಕಿದ್ದ ಮಗುವನ್ನು ಸತ್ತಿದೆ ಎಂದ ಮ್ಯಾಕ್ಸ್ ಆಸ್ಪತ್ರೆ ಪರವಾನಗಿ ರದ್ದಾಗುತ್ತಾ?

ಹುಟ್ಟಿದ ಕೆಲವೇ ಗಂಟೆಗಳಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಮಕ್ಕಳು ಮೃತರಾಗಿದ್ದಾರೆಂದು ಘೋಷಿಸಿ, ಆಸ್ಪತ್ರೆ ಸಿಬ್ಬಂದಿ, ಮಕ್ಕಳನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಕುಟುಂಬಕ್ಕೆ ಕೈಗೊಪ್ಪಿಸಿದರು. ದುಃಖತಪ್ತರಾದ ಕುಟುಂಬಸ್ಥರು ಮಕ್ಕಳ ಅಂತ್ಯಸಂಸ್ಕಾರ ಮಾಡುವುದಕ್ಕೆಂದು ತೆರಳಿದ್ದಾಗ, ಬಂಧುಗಳೊಬ್ಬರ ತೊಡೆ ಮೇಲಿದ್ದ ಗಂಡು ಮಗು ಇದ್ದಕ್ಕಿದ್ದಂತೇ ಕೈಕಾಲು ಆಡಿಸುವುದಕ್ಕೆ ಶುರುಮಾಡಿತ್ತು.

ಉಸಿರಾಡುತ್ತಿರುವುದೂ ಗಮನಕ್ಕೆ ಬಂತು. ಇದರಿಂದ ದಿಗ್ಭ್ರಮೆಗೊಂಡ ಕುಟುಂಬಸ್ಥರು ಮಗುವಿನ ದೇಹಕ್ಕೆ ಸುತ್ತಿದ್ದ ಪ್ಲಾಸ್ಟಿಕ್ ಅನ್ನು ತೆಗೆದು ಹತ್ತಿರದ ಆಸ್ಪತ್ರೆಗೆ ತೆರಳಿದಾಗ ಮಗು ಬದುಕಿದೆ ಎಂಬುದು ತಿಳಿದಿತ್ತು.

ಆದರೆ ಹುಟ್ಟಿದ್ದ ಸಮಯದಲ್ಲಿ, ಮ್ಯಾಕ್ಸ್ ಆಸ್ಪತ್ರೆ ಸಿಬ್ಬಂದಿಗಳು ಸರಿಯಾದ ಚಿಕಿತ್ಸೆ ನೀಡದೆ ಬೇಜವಾಬ್ದಾರಿಯಾಗಿ ವರ್ತಿಸಿದ ಕಾರಣಕ್ಕೆ ಮಗು ಮರಣಹೊಂದಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ಪ್ರಕರಣದಿಂದಾಗಿ ಮ್ಯಾಕ್ಸ್ ಆಸ್ಪತ್ರೆ ತನ್ನ ಲೈಸೆನ್ಸ್ ಕಳೆದುಕೊಳ್ಳುವ ಸಂಭವವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The newborn twin found to be alive after being declared dead by Delhi's Max Hospital, also passed away during treatment at a hospital in Pitampura, on Dece 06. The Shalimar Bagh branch of Max Hospital was accused of medical negligence when the infant was found alive after it was declared 'dead' along with his still-born twin by the hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ