ಓಲಾ, ಉಬರ್ ಆಯ್ತು! ಈಗ 'ಐನ್ ಸ್ಟೈನ್' ನ 'ಗ್ರಾವಿಟಿ'ಯಂತೆ! ಏನಾಗಿದೆ ಸಚಿವರಿಗೆ?
ನವದೆಹಲಿ, ಸೆಪ್ಟೆಂಬರ್ 12: "ಐನ್ ಸ್ಟೈನ್ ನ ಗುರುತ್ವಾಕರ್ಷಣ ಸಿದ್ಧಾಂತ ಆವಿಷ್ಕಾರಕ್ಕೆ ಗಣಿತ ನೆರವಾಗಲಿಲ್ಲ" ಎನ್ನುವ ಮೂಲಕ ಅಸಂಬದ್ಧ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವರ ಪಟ್ಟಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ!
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 'ಉಬರ್, ಓಲಾ' ಹೇಳಿಕೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಬಡಿಸುತ್ತರುವಾಗ, ಇದೇ ಟ್ರೋಲ್ ಹೈಕ್ಳ ಎದುರು ಪಿಯೂಶ್ ಗೋಯೆಲ್ ಸಹ ಎಡವಿ ಬಿದ್ದಿದ್ದಾರೆ.
ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಪಿಯೂಶ್ ಗೋಯೆಲ್ ಜಿಡಿಪಿ ಬಗೆಗಿನ ತಜ್ಞರ ಲೆಕ್ಕಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, "ಟಿವಿಯಲ್ಲಿ ಬರುವ ಅಂಕಿ ಸಂಖ್ಯೆಗಳನ್ನು ನೋಡಿ ನಿರ್ಧಾರಕ್ಕೆ ಬರಬೇಡಿ. ಆ ಗಣಿತದಿಂದ ಏನೂ ಉಪಯೋಗವಿಲ್ಲ. ಗ್ರಾವಿಟಿ(ಗುರುತ್ವಾಕರ್ಷಣ) ಸಿದ್ಧಾಂತದ ಆವಿಷ್ಕಾರಕ್ಕೆ 'ಐನ್ ಸ್ಟೈನ್' ಗೆ ಗಣಿತ ಎಂದಿಗೂ ನೆರವಾಗಲಿಲ್ಲ" ಎಂದರು!
ಆದರೆ ಐನ್ ಸ್ಟೈನ್ ಆವಿಷ್ಕರಿಸಿದ್ದು ಸಾಪೇಕ್ಷ(Theory of Relativity) ಸಿದ್ಧಾಂತವನ್ನ. ಗುರುತ್ವಾಕರ್ಷಣ ಸಿದ್ಧಾಂತ(Theory of Gravity) ಯನ್ನು ಆವಿಷ್ಕರಿಸಿದ್ದು ಐಸಾಕ್ ನ್ಯೂಟನ್! ನ್ಯೂಟನ್ನನ ಹೆಸರನ್ನು ಹೇಳುವ ಬದಲು ಐನ್ ಸ್ಟೈನ್ ಎನ್ನುವ ಮೂಲಕ ಗೋಯೆಲ್ ಪೇಚಿಗೆ ಸಿಲುಕಿದರು. ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಮಾಡಿದೆ.

ನಿಮ್ಮ ಮಾತು ಸತ್ಯ!
ಹೌದು, ನಿಮ್ಮ ಮಾತು ಸತ್ಯ. ಐನ್ಸ್ಟೈನ್ ಗೆ ಗುರುತ್ವಾಕರ್ಷಣ ಸಿದ್ಧಾಂತ ಆವಿಷ್ಕರಿಸಲು ಗಣಿತ ನೆರವಾಗಲಿಲ್ಲ. ಯಾಕಂದ್ರೆ ಅದನ್ನು ಆವಿಷ್ಕರಿಸಿದ್ದು ನ್ಯೂಟನ್" ಎಂದು ಶಿವನ್ ಜಾ ಕಿಚಾಯಿಸಿದ್ದಾರೆ!

ಗೋಯಲ್ ಪ್ರಕಾರ...
"ಪಿಯೂಶ್ ಗೋಯೆಲ್ ಪ್ರಕಾರ ಐನ್ ಸ್ಟೈನ್ = ನ್ಯೂಟನ್" ಎಂದು ಆಚಿ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ಎಲ್ಲ ಬುದ್ಧಿವಂತರೂ ರಾಜಕೀಯದಲ್ಲಿದ್ದಾರೆ!
ಇದು ಗಣಿತ ಮತ್ತು ಭೌತ ಶಾಸ್ತ್ರ ಎರಡಕ್ಕೂ ಅತ್ಯಂತ ದುಃಖದ ದಿನ. ಗ್ರಾವಿಟಿಯ ಬಗ್ಗೆ ನಮ್ಮ ವಿಚಾರವನ್ನೇ ಬದಲಿಸುವಂಥ ಹೇಳಕೆಯನ್ನು ಮಂತ್ರಿಗಳು ನೀದಿದ್ದಾರೆ. ಈ ರಾಜಕಾರಣಿಗಳ ಎದುರು ಐನ್ ಸ್ಟೈನ್ ಮತ್ತು ನ್ಯೂಟನ್ನನ ಎಲ್ಲಾ ಸಾಧನೆಗಳೂ ಅರ್ಥ ಕಳೆದುಕೊಳ್ಳುವಂಥಾಗುತ್ತದೆ. ಬುದ್ಧಿವಂತರೆಲ್ಲರೂ ರಾಜಕೀಯದಲ್ಲೇ ಇದ್ದಾರೆ ಎಂದು ಕ್ರೇಜಿ ಮ್ಯೂಸಿಶಿಯನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ನ್ಯೂಟನ್ನ ಆವಿಷ್ಕರಿಸಿದ್ದು ಏನನ್ನ?
"ಐನ್ ಸ್ಟೈನ್ ಗುರುತ್ವಾಕರ್ಷಣ ಸಿದ್ಧಾಂತವನ್ನು ಆವಿಷ್ಕರಿಸಿದ್ದು ಸತ್ಯವಾದರೆ ನ್ಯೂಟನ್ ಆವಿಷ್ಕರಿಸಿದ್ದು ಏನನ್ನ? ಇಡೀ ದೇಶವೂ ಅದೇ ಪ್ರಶ್ನೆ ಕೇಳುತ್ತಿದೆ. ಆದರೆ ನನ್ನ ಬಳಿ ಉತ್ತರವಿದೆ. ನ್ಯೂಟನ್ನ ಕಂಡುಹಿಡಿದಿದ್ದು ಆಪಲ್ ಅನ್ನು!" ಎಂದಿದ್ದಾರೆ ನಿಖಿಲ್ ಎಸ್. ಬಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications