ಪ್ರಚಂಡ ಗಾಳಿ ಮಳೆ ಹೊಡೆತಕ್ಕೆ ತತ್ತರಿಸಿದ ದೆಹಲಿ

ನವದೆಹಲಿ, ಮೇ 31 : ಬಿರುಬಿಸಿಲಿನಿಂದ ಕಂಗೆಟ್ಟಿದ್ದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಸಂಜೆ ಧೂಳು ಮಿಶ್ರಿತ ಬಿರುಗಾಳಿ ಹಾಗೂ ಭಾರಿ ಮಳೆ ಸುರಿದಿದೆ. ಬಿರುಗಾಳಿ ಮತ್ತು ಮಳೆಯಿಂದಾಗಿ ಒಂಭತ್ತು ಜನರು ಸಾವನ್ನಪ್ಪಿದರೆ, 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ ಧೂಳಿನಿಂದ ಕೂಡಿದ ಭಾರೀ ಚಂಡಮಾರುತವೊಂದು ದೆಹಲಿಗೆ ಅಪ್ಪಳಿಸಿತು. ಸುಮಾರು 90 ಕಿಮೀ ವೇಗದಲ್ಲಿ ಗಾಳಿ ಬೀಸಿದ್ದರಿಂದ ದೂರವಾಣಿ ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡು ಮೆಟ್ರೋ ರೈಲು ಸಂಚಾರಕ್ಕೆ ತೊಂದರೆ ಉಂಟಾಯಿತು. ಗಾಳಿಗೆ ಮರಗಳೂ ಉರುಳಿ ಬಿದ್ದದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತು. ಧೂಳಿನ ಗಾಳಿಯಿಂದಾಗಿ ವಿಮಾನ ಮತ್ತು ರೈಲು ಸಂಚಾರಕ್ಕೂ ಅಡಚಣೆ ಉಂಟಾಯಿತು.

ಭಾರಿ ಬಿರುಗಾಳಿ ಅಪ್ಪಳಿಸುತ್ತಿದ್ದಂತೆ ದೆಹಲಿಯಲ್ಲಿನ ಉಷ್ಣಾಂಶ 42.8 ಡಿಗ್ರಿಯಿಂದ 5 ಡಿಗ್ರಿಯಷ್ಟು ಕಡಿಮೆಯಾಯಿತು. ಧೂಳಿನ ಬಿರುಗಾಳಿಯಿಂದಾಗಿ 20 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಯಿತು. 5 ವಿಮಾನಗಳು ಗಾಳಿಯ ರಭಸಕ್ಕೆ ಹಾನಿಗೀಡಾಗಿವೆ. ಬಿರುಗಾಳಿಯ ನಂತರ ಸುರಿದ ಮಳೆಯಿಂದಾಗಿ ದೆಹಲಿಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಚಿತ್ರಗಳಲ್ಲಿ ನೋಡಿ ದೆಹಲಿಯ ಮಳೆ [ಪಿಟಿಐ ಚಿತ್ರಗಳು]

ದೆಹಲಿಗೆ ಅಪ್ಪಳಿಸಿದ ಧೂಳಿನ ಚಂಡಮಾರುತ

ದೆಹಲಿಗೆ ಅಪ್ಪಳಿಸಿದ ಧೂಳಿನ ಚಂಡಮಾರುತ

ಬಿರುಬಿಸಿಲಿನಿಂದ ಕಂಗೆಟ್ಟಿದ್ದ ರಾಷ್ಟ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಸಂಜೆ ಧೂಳು ಮಿಶ್ರಿತ ಬಿರುಗಾಳಿ ಹಾಗೂ ಭಾರಿ ಮಳೆ ಸುರಿದಿದೆ. ಬಿರುಗಾಳಿ ಮತ್ತು ಮಳೆಯಿಂದಾಗಿ ಒಂಭತ್ತು ಜನರು ಸಾವನ್ನಪ್ಪಿದರೆ, 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಧೂಳು ಮತ್ತು ಬಿರುಗಾಳಿಯಿಂದ ರಸ್ತೆ, ರೈಲು, ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಿ ಜನರು ಪರದಾಡುವಂತಾಯಿತು.

ದೆಹಲಿಗೆ ಕಾಲಿಟ್ಟ ಕ್ಯೂಮುಲೋನಿಂಬಸ್‌

ದೆಹಲಿಗೆ ಕಾಲಿಟ್ಟ ಕ್ಯೂಮುಲೋನಿಂಬಸ್‌

ದೆಹಲಿಗೆ ಶುಕ್ರವಾರ ಅಪ್ಪಳಿಸಿದ ಚಂಡಮಾರುತವನ್ನು ಹವಾಮಾನ ಇಲಾಖೆ ಕ್ಯೂಮುಲೋನಿಂಬಸ್‌ ಎಂದು ಕರೆದಿದೆ. ಚಂಡಮಾರುತ ಉಂಟಾಗಲು ಪಾಕಿಸ್ತಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯವೇ ಕಾರಣ ಎಂದು ವಿಶ್ಲೇಷಿಸಿದೆ. ಭಾರಿ ಬಿರುಗಾಳಿ ಅಪ್ಪಳಿಸುತ್ತಿದ್ದಂತೆ ದೆಹಲಿಯಲ್ಲಿನ ಉಷ್ಣಾಂಶ 42.8 ಡಿಗ್ರಿಯಿಂದ 5 ಡಿಗ್ರಿಯಷ್ಟು ಕಡಿಮೆಯಾಯಿತು.

ನವದೆಹಲಿ ತುಂಬಾ ಟ್ರಾಫಿಕ್ ಜಾಮ್

ನವದೆಹಲಿ ತುಂಬಾ ಟ್ರಾಫಿಕ್ ಜಾಮ್

ಬಿರುಗಾಳಿ, ಧೂಳು ಮಳೆಯಿಂದಾಗಿ ಮೆಟ್ರೋ ರೈಲು, ವಿಮಾನ ಸಂಚಾರ ಸ್ಥಗಿತಗೊಂಡಿತು. ಬಿರುಗಾಳಿಗೆ ಮರಗಳು ಉರುಳಿ ಬಿದ್ದಿದ್ದರಿಂದ ರಸ್ತೆ ಸಂಚಾರವೂ ಸ್ಥಗಿತಗೊಂಡಿತು. ನಗರದ ಸೆಂಟ್ರಲ್ ಮೆಟ್ರೋ ನಿಲ್ದಾಣವೊಂದರ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಉರುಳಿ ಬಿದ್ದ ಭಾರಿ ಮರ

ಉರುಳಿ ಬಿದ್ದ ಭಾರಿ ಮರ

ದೆಹಲಿಗೆ ಅಪ್ಪಳಿಸಿದ ಭಾರಿ ಬಿರುಗಾಳಿಗ ಮರಗಳು ಉರುಳಿ ಬಿದ್ದವು. ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕಾರಿನ ಮೇಲೆ ಉರುಳಿ ಬಿದ್ದ ಮರ

ಕಾರಿನ ಮೇಲೆ ಉರುಳಿ ಬಿದ್ದ ಮರ

ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿತು. Gymkhana club ಬಳಿ ಕಾರಿನ ಮೇಲ ಮರ ಉರುಳಿ ಬಿದ್ದರೂ ಚಾಲಕರ ಪ್ರಾಣಾಪಾಯದಿಂದ ಪಾರಾದರು.

ರಸ್ತೆಗೆ ಬಿತ್ತು ಜಾಹೀರಾತು ಫಲಕ

ರಸ್ತೆಗೆ ಬಿತ್ತು ಜಾಹೀರಾತು ಫಲಕ

ಫರೀದಾಬಾದ್ ನಲ್ಲಿ ಬಿರುಗಾಳಿಯ ಹೊಡತಕ್ಕೆ ಸಿಲುಕಿದ ಜಾಹೀರಾತು ಫಲಕವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಕಾರಿನ ಚಾಲಕನ ಬಲಿ ಪಡೆದ ಬಿರುಗಾಳಿ

ಕಾರಿನ ಚಾಲಕನ ಬಲಿ ಪಡೆದ ಬಿರುಗಾಳಿ

ಬಿರುಗಾಳಿಗೆ ನಗರದ ಐಟಿಓ ಸಮೀಪ ಬೃಹತ್ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಚಾಲಕ ಮೃತಪಟ್ಟನು. ಫೋಟೋ - ಅರುಣ್ ಸಿ. ಬಡಿಗೇರ

ಗಾಳಿಯಿಂದಾಗಿ ಜನರ ಪರದಾಟ

ಗಾಳಿಯಿಂದಾಗಿ ಜನರ ಪರದಾಟ

ಧೂಳಿನಿಂದ ಕೂಡಿದ ಭಾರಿ ಬಿರುಗಾಳಿ ಬೀಸಿದ್ದರಿಂದ ಜನರು ಪರದಾಡುವಂತಾಯಿತು. ಧೂಳಿನಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಅಡ್ಡ ಹಿಡಿದರೆ, ಗಾಳಿಯ ರಭಸಕ್ಕೆ ಅವುಗಳು ಹಾರಿಹೋದವು.

ಸಂಪೂರ್ಣ ಸಂಚಾರ ಅಸ್ತವ್ಯಸ್ತ

ಸಂಪೂರ್ಣ ಸಂಚಾರ ಅಸ್ತವ್ಯಸ್ತ

ಬಿರುಗಾಳಿಯಿಂದಾಗಿ ಮರದ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ನಗರದ ಹಲವು ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ರಾಷ್ಟ್ರ ರಾಜಧಾನಿಗೆ ಮಳೆಯ ಸಿಂಚನ

ರಾಷ್ಟ್ರ ರಾಜಧಾನಿಗೆ ಮಳೆಯ ಸಿಂಚನ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿರುಗಾಳಿಯ ನಂತರ ಮಳೆಯ ಸಿಂಚನವಾಯಿತು. ಬಿರುಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿಯ ಜನರಿಗೆ ಮಳೆ ತಂಪೆರೆಯಿತು. ಉಷ್ಣಾಂಶ 42.8 ಡಿಗ್ರಿಯಿಂದ 5 ಡಿಗ್ರಿಯಷ್ಟು ಕಡಿಮೆಯಾಯಿತು.

ಧೂಳಿನ ಚಿತ್ರಣ ಹೀಗಿದೆ ನೋಡಿ

ಧೂಳಿನ ಚಿತ್ರಣ ಹೀಗಿದೆ ನೋಡಿ

ಧೂಳಿನಿಂದ ಕೂಡಿದ ಬಿರುಗಾಳಿ ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಕತ್ತಲು ಆವರಿಸಿತು. ವಾಹನಗಳ ಸಂಚಾರಕ್ಕೂ ಇದರಿಂದ ತೊಂದರೆ ಉಂಟಾಯಿತು.

ಕಾರು ಸಂಪೂರ್ಣ ಜಖಂ

ಕಾರು ಸಂಪೂರ್ಣ ಜಖಂ

ಗಾಳಿಯ ರಭಸಕ್ಕೆ ಮರ ಕಾರಿನ ಮೇಲೆ ಉರುಳಿ ಬಿದ್ದಿದ್ದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿತು.

ಪೊಲೀಸರ ಹರಸಾಹಸ

ಪೊಲೀಸರ ಹರಸಾಹಸ

ನಗರದ ಐಟಿಓ ಸಮೀಪ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿಬಿದ್ದಿದ್ದರಿಂದ ಸಂಚಾರಿ ಪೊಲೀಸರು ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲು ಹರಸಾಹಸ ಮಾಡಿದರು. ಫೋಟೋ - ಅರುಣ್ ಸಿ. ಬಡಿಗೇರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+