ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎ ಹೀಂಗೆ ಆಡ್ತಾ ಇದ್ರೆ ಸೋಲು ಗ್ಯಾರಂಟಿ

By Mahesh
|
Google Oneindia Kannada News

ನವದೆಹಲಿ, ಡಿ.11: ನಾವು ಇದೇ ವೇಗದಲ್ಲಿ ಓಡುತ್ತಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಗ್ಯಾರಂಟಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಭವಿಷ್ಯ ನುಡಿದಿದ್ದಾರೆ. ಯುಪಿಎ ತಕ್ಷಣವೇ ಬದಲಾವಣೆ ಕಾಣಬೇಕು ಎಂದು ಪರೋಕ್ಷವಾಗಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ.

ಪಕ್ಷದ ಸಂಘಟನೆ, ಆಂತರಿಕ ತೊಡಗುಗಳನ್ನು ಕೂಡಲೇ ಪರಿಹರಿಸಿಕೊಳ್ಳಬೇಕು. 21ನೇ ಶತಮಾನಕ್ಕೆ ತಕ್ಕಂತೆ ಪಕ್ಷ ಸುಧಾರಣೆಗೊಂಡಿಲ್ಲ. ರಾಜೀವ್ ಗಾಂಧಿ ಕನಸಿನಂತೆ ಪಂಚಾಯತ್ ರಾಜ್ ಯೋಜನೆಯಲ್ಲೇ ನಾವು ಇನ್ನೂ ಇದ್ದೇವೆ. ಜನಕ್ಕೆ ಬೇಕಾದ್ದು ನೀಡುವಲ್ಲಿ ವಿಫಲವಾಗಿದ್ದೇವೆ ಎಂದರು.

ಕಾಂಗ್ರೆಸ್ ಬಳಿ ಸಶಕ್ತ ನಾಯಕರಿದ್ದಾರೆ, ನೂರಾರು ಹೊಸ ಹೊಸ ಯೋಜನೆಗಳಿವೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸಿ ಕಾರ್ಯಗತ ಮಾಡುವಲ್ಲಿ ಎಡವುತ್ತಿದ್ದೇವೆ ಎಂದು ಅಯ್ಯರ್ ಹೇಳಿದ್ದಾರೆ.

Mani Shankar Aiyar predicts Congress's defeat in 2014 LS polls

ಅಯ್ಯರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಭಕ್ತ್ ಚರಣ್ ದಾಸ್ ಅವರು' ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ಯಾವುದೇ ತೊಂದರೆಯಿಲ್ಲ' ಎಂದಿದ್ದಾರೆ. ಮಿಜೋರಾಂ ರಾಜ್ಯ ಬಿಟ್ಟರೆ ಮಧ್ಯಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ ಅಲ್ಲದೆ ದೆಹಲಿಯಲ್ಲೂ ಒಳ್ಳೆ ಫಲಿತಾಂಶ ಹೊರಹಾಕಲು ಕಾಂಗ್ರೆಸ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಯ್ಯರ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಇದರ ಜತೆಗೆ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಅರ್ಧ ಡಜನ್ ನಷ್ಟು ಸೀಮಾಂಧ್ರ ಭಾಗದ ಕಾಂಗ್ರೆಸ್ ಸಂಸದರು ಮಸೂದೆ ವಿರುದ್ಧ ಹೋರಾಟ ನಡೆಸಿದ್ದು ಅಯ್ಯರ್ ಅವರನ್ನು ಕೆರಳಿಸಿತ್ತು ಎನ್ನಲಾಗಿದೆ. ಎನ್ ಸಿಪಿ ಶರದ್ ಪವಾರ್ ಅವರು ಕೂಡಾ ಕಾಂಗ್ರೆಸ್ ಬಲಹೀನವಾಗಿದೆ ಎಂದಿದ್ದರು.

ಈ ನಡುವೆ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಮುಂಬರುವ ಚುನಾವಣೆಗೆ ಹೊಸ ತಂಡವನ್ನು ರೂಪಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡಾ ಕಾಂಗ್ರೆಸ್ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಲು ಹೊಸ ತಂಡ ರಚನೆ ಬಗ್ಗೆ ಸುಳಿವು ನೀಡಿದ್ದರು.

ಹೊಸ ತಂಡ ರಚನೆ ಎಂದರೆ ಹಳೆ ತಲೆಗಳನ್ನು ಹೊರ ಹಾಕುವುದಾಗಿ ಎಂಬುದು ತಿಳಿದಿರುವ ಸತ್ಯ. ಹಾಗಾಗಿ ವಿಪೆರೀತ ಹೇಳಿಕೆ ನೀಡಿರುವ ಮಣಿಶಂಕರ್ ಅಯ್ಯರ್ ಅವರೇ ಮೊದಲ ಬಲಿಯಾಗುತ್ತಾರಾ? ಕಾದು ನೋಡಬೇಕಿದೆ.

English summary
In an embarrassing situation, the Congress's veteran leader Mani Shankar Aiyar on Tuesday predicted 'defeat' for the party in the upcoming 2014 Lok Sabha elections and said that it need to 'revamp' itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X