• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕನ್ ಬೆಲೆ ಬಗ್ಗೆ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ

|

ನವದೆಹಲಿ, ಏಪ್ರಿಲ್ 30: ಚಿಕನ್ ಬೆಲೆಗಾಗಿ ಆರಂಭವಾಗಿದ್ದ ಕಿತ್ತಾಟ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದಿದೆ.

ಶಿರಾಜ್ 35 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.ಪಶ್ಚಿಮ ಬಂಗಾಳ ಮೂಲದವರಾಗಿದ್ದ ಶಿರಾಜ್ ಲಾಕ್‌ಡೌನ್ ಆರಂಭವಾದಾಗಿನಿಂದ ಚಿಕನ್ ಮಾರಾಟ ಮಳಿಗೆಯನ್ನು ಆರಂಭಿಸಿದ್ದ.

ಆರೋಪಿಗಳು ಅಂಗಡಿ ಬಳಿ ಬಂದು ಚಿಕನ್ ಬೆಲೆ ಕೇಳಿದ್ದಾರೆ. ಬಳಿಕ ಶಿರಾಜ್ ಬೆಲೆಯನ್ನು ಹೇಳಿದ್ದಾನೆ. ಬಳಿಕ ಕಡಿಮೆ ಬೆಲೆಗೆ ನೀಡುವಂತೆ ಕೇಳಿದ್ದಾರೆ. ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೀಯಾ ಎಂದು ಗದರಿಸಿದ್ದಾರೆ.

ಬಳಿಕ ಶಾ ಆಲಮ್ ಮತ್ತು ಅವರ ಸಹೋದರರು ಸೇರಿ ಶಿರಾಜ್ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿಜಯಾಂತ ಆರ್ಯ ತಿಳಿಸಿದ್ದಾರೆ. ಶಿರಾಜ್ ಆಲಮ್ ಹಾಗೂ ಮೂರು ಸಹೋದರರ ಮೇಲೆ ಚಾಕು ಹಾಗೂ ರಾಡಿನಿಂದ ಹಲ್ಲೆ ನಡೆಸಿದ್ದ ಎಂದು ದೂರಿದ್ದಾರೆ.

ಶಿರಾಜ್‌ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶಾ ಆಲಮ್‌ನನ್ನು ಬಂಧಿಸಲಾಗಿದ್ದು, ಇನ್ನುಳಿದ ಮೂರು ಆರೋಪಿಗಳ ಸೆರೆ ಹಿಡಿಯಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

English summary
A 35-year-old man was stabbed to death allegedly by four people after an argument over the price of chicken in northwest Delhi's Jahangirpuri area on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X