ದೆಹಲಿಯಲ್ಲಿ ರಣಕಹಳೆ ಮೊಳಗಿಸಲಿರುವ ಮಮತಾ ಬ್ಯಾನರ್ಜಿ
ನವದೆಹಲಿ, ಫೆಬ್ರವರಿ 13: ಕೋಲ್ಕತ್ತದಲ್ಲಿ ಯಶಸ್ವಿಯಾಗಿ ವಿಪಕ್ಷಗಳ ಬೃಹತ್ ಸಮಾವೇಶ ನಡೆಸಿದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಬುಧವಾರ ಬೃಹತ್ ಸಮಾವೇಶ ನಡೆಸಲಿದ್ದಾರೆ.
ಸಂಯುಕ್ತ ಭಾರತ ವಿಪಕ್ಷದ ಹೆಸರಿನ ಮೈತ್ರಿಕೂಟವೊಂದನ್ನು ನಿರ್ಮಿಸುವ ಮೂಲಕ ಅವರು ಮಹಾಘಟಬಂಧನದ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ತಾವು ಈ ನಡೆ ಇಟ್ಟಿದ್ದಾಗಿ ಅವರು ತಿಳಿಸಿದ್ದಾರೆ.

"ನರೇಂದ್ರ ಮೋದಿ ಅವರಿಗೆ ಗೊತ್ತು ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು. ಅವರ ಎಕ್ಸ್ ಪೈಯರಿ ಡೇಟ್ ಮುಗಿದಿದೆ. ಇನ್ನು 15 ದಿನಗಳಲ್ಲಿ ನಮಗೆ ಚುನಾವಣೆಯ ದಿನಾಂಕಗಳು ತಿಳಿಯುತ್ತವೆ. ನಾವು ಹೊಸ ಸರ್ಕಾರವನ್ನು ನೋಡಲು ಬಯಸುತ್ತೇವೆ. ದೇಶಕ್ಕೆ ಬದಲಾವಣೆ ಬೇಕು. ದೇಶ ಸಂಯುಕ್ತ ಭಾರತವನ್ನು ನೋಡಲು ಬಯಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಮಗ್ರತೆ ಜೀವಂತವಾಗಿರಬೇಕು ಎಂದು ಬಯಸುತ್ತದೆ" ಎಂದು ದೆಹಲಿಗೆ ತೆರಳುವ ಮುನ್ನ ಕೋಲ್ಕತ್ತದಲ್ಲಿ ದೀದಿ ಮಮತಾ ಹೇಳಿದರು.












Click it and Unblock the Notifications