ಎನ್ಆರ್ ಐ ಮದುವೆ ನೊಂದಾವಣಿಗೆ ಆಧಾರ್ ಕಡ್ಡಾಯ?
ಎನ್ಆರ್ ಐಗಳ ಮದುವೆ ನೊಂದಾವಣಿಗೆ ಆಧಾರ್ ಕಡ್ಡಾಯಗೊಳಿಸಲು ಸಮಿತಿ ಶಿಫಾರಸು. ಕೇಂದ್ರದ ಅಂತರ ಸಚಿವಾಲಯದ ಸಮಿತಿಯಿಂದ ವಿದೇಶಾಂಗ ಇಲಾಖೆಗೆ ಶಿಫಾರಸು.
ನವದೆಹಲಿ, ಸೆಪ್ಟೆಂಬರ್ 13: ಅನಿವಾಸಿ ಭಾರತೀಯರು ಭಾರತದಲ್ಲಿ ಮದುವೆ ಮಾಡಿಕೊಂಡರೆ ಅವರ ವಿವಾಹದ ನೊಂದಾವಣೆ ವೇಳೆಯಲ್ಲಿ ಗಂಡು- ಹೆಣ್ಣಿನ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕೆಂದು ಅಂತರ ಸಚಿವಾಲಯದ ಸಮಿತಿಯೊಂದು ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡಿದೆ.
ಅನಿವಾಸಿ ಭಾರತೀಯರು ಭಾರತದಲ್ಲಿರುವ ಯುವತಿಯರನ್ನು ಮದುವೆಯಾಗಿ ವಿದೇಶಕ್ಕೆ ಕರೆದೊಯ್ದ ಮೇಲೆ ಯುವತಿಯರ ಮೇಲೆ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣ ನಡೆದಿರುವ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಸಮಿತಿಯು ಇಲಾಖೆಗೆ ಶಿಫಾರಸು ಮಾಡಿದೆ.

ಈಗಾಗಲೇ, ಆಧಾರ್ ಕಾರ್ಡ್ ಸಂಸ್ಥೆಯು ಅನಿವಾಸಿ ಭಾರತೀಯರಿಗೆ, ಭಾರತ ಮೂಲದ ವಿದೇಶಿ ನಾಗರಿಕರಿಗೆ ಹಾಗೂ ವಿದೇಶಗಳಲ್ಲಿರುವ ಭಾರತೀಯ ಸಂಜಾತರಿಗೆ ಆಧಾರ್ ಕಾರ್ಡ್ ನೀಡುವ ಬಗ್ಗೆ ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದೆ. ಇದರ ನಡುವೆಯೇ, ಈಗ ಅಂತರ ಸಚಿವಾಲಯದ ಸಮಿತಿಯ ಈ ಹೊಸ ಶಿಫಾರಸು ಆಧಾರ್ ಕಾರ್ಡ್ ನ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ.












Click it and Unblock the Notifications