ದೆಹಲಿ, ಹರಿಯಾಣ ಗಡಿ ಭಾಗದಲ್ಲಿ ಭೂಕಂಪ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ: ನವೆಂಬರ್ 17: ಹರಿಯಾಣದಲ್ಲಿ 4.2 ಪ್ರಮಾಣದ ಭೂಕಂಪವು ಸಂಭವಿಸಿದ್ದು ಈ ಇದೇ ರೀತಿಯ ಕಂಪನವು ದೆಹಲಿಯ ಕೆಲವು ಭಾಗಗಳಲ್ಲಿ ಸಂಭವಿಸಿದೆ.

ಇನ್ನು ಈ ಭೂಕಂಪವು 10 ಕಿಲೋ ಮೀ ಆಳದಲ್ಲಿ ಸಂಭವಿಸಿದೆ ಎಂದು ಅಮೆರಿಕಾದ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

earth

ಭೂಮಿಯ ನಡುಕ ಸುಮಾರು ಒಂದು ನಿಮಿಷಗಳ ಸಂಭವಿಸಿದ್ದು ದೆಹಲಿ, ಗಾಜಿಯಾಬಾದ್, ಗುರ್ಗಾವ್ಗಳಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 4.30 ರಲ್ಲಿ ನಡೆದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಐಎಂಡಿ ತಿಳಿಸಿದ್ದು ಇದು ದೆಹಲಿ ಮತ್ತು ಹರಿಯಾಣ ಗಡಿಭಾಗದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.[ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ : ಅಪ್ಪಳಿಸಿದ ಸುನಾಮಿ]

ಈ ಘಟನೆಯಿಂದ ಜನರು ಭಯಭೀತರಾಗಿದ್ದು, ಕೆಲವರು ಟ್ವೀಟ್ ಮಾಡಿದ್ದಾರೆ.

ಬೆಳಿಗ್ಗೆಯೇ ' ದೇವರುಈ ನಡುಕವನ್ನು ಉಂಟು ಮಾಡಿರಲು ಕಾರಣ ದೆಹಲಿ ಜನರು ಮೊದಲು ಎಟಿಎಂ ಮುಂದೆ ಹೋಗಿ ಕ್ಯೂ ನಿಲ್ಲಲು' ಎಂದು ವ್ಯಂಗ್ಯ ವಾಡಿದ್ದಾರೆ.[ಇಟಲಿಯಲ್ಲಿ ಭೂಕಂಪ, 36 ಸಾವು]

ಇನ್ನು ಈ ಭೂಕಂಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾವುನೋವು ನಡೆದ ವರದಿಯಾಗಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
magnitude earthquake hit, Haryana this morning as a result of which tremors were felt in Delhi and parts of the National Capital Region. According to the US Geological Survey, the earthquake was a shallow on at a depth of 10 kilometers.
Please Wait while comments are loading...