• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ಸ್

|

ನವದೆಹಲಿ, ಜೂನ್ 03: ಮೋದಿ ಬೆಂಬಲಿಸುವ, ಬಲಪಂಥೀಯ ಚಿಂತನೆಯ ಪ್ರತಿಪಾದಕಿ, ಪ್ರೊ ಮಧುಪೂರ್ಣಿಮಾ ಕೀಶ್ವರ್ ಅವರ ಇತ್ತೀಚಿನ ಟ್ವೀಟ್ ವಿವಾದಕ್ಕೆ ನಾಂದಿ ಹಾಡುವಂತಿದೆ. ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ ಮಾಡಿದ್ದಾರೆ.

'ರಾಷ್ಟ್ರಪಿತ' ಮಹಾತ್ಮ ಗಾಂಧಿ ಹಾಗು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಸಲಿಂಗಕಾಮಿಗಳಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವೀಟ್; ವರಸೆ ಬದಲಿಸಿದ ಐಎಎಸ್ ಅಧಿಕಾರಿ

"ಅವರಿಬ್ಬರೊಳಗೆ ಸಲಿಂಗ ಸಂಬಂಧ ಇದ್ದಿದ್ದರಿಂದ ಗಾಂಧಿ ಮೇಲೆ ನೆಹರೂಗೆ ಅಷ್ಟೊಂದು ಅಸಾಮಾನ್ಯ ಹಿಡಿತ ಇದ್ದಿದ್ದು ಕಾರಣ ಎಂದು ವಿವರಿಸಬಹುದು. ನೆಹರೂ ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ನನ್ನ ದಕ್ಷಿಣ ಭಾರತೀಯ ಮಿತ್ರರೊಬ್ಬರು ಹೇಳಿದ್ದರು.

ರಾಹುಲ್ ಲೈಂಗಿಕತೆಯನ್ನೂ ಉಚಿತ ನೀಡುತ್ತಾರಾ : ಮಧು ಕಿಶ್ವರ್ ಟ್ವೀಟ್

ಸಲಿಂಗಕಾಮಿಗಳಾಗಿರುವುದು ತಪ್ಪಲ್ಲ. ಆದರೆ (ಸರ್ದಾರ್ ವಲ್ಲಭಭಾಯ್ ) ಪಟೇಲ್ ಬದಲಿಗೆ (ಪ್ರಧಾನಿಯಾಗಲು) ನೆಹರೂಗೆ ಮಣೆ ಹಾಕಿದ್ದು ಮಾತ್ರ ಒಪ್ಪುವಂತಹದ್ದಲ್ಲ." ಎಂದು ರೂಪಾ ಸುಬ್ರಮಣ್ಯ ಅವರ ಟ್ವೀಟ್ ಗೆ ಪ್ರೊ. ಮಧು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರೊ. ಮಧುಕೀಶ್ವರ್ ವಿವಾದಿತ ಟ್ವೀಟ್ಸ್

ನೆಹರೂ-ಗಾಂಧಿ ಸಲಿಂಗ ಕಾಮ ಬಗ್ಗೆ ಪ್ರೊ. ಮಧುಕೀಶ್ವರ್ ಟ್ವೀಟ್ ನಲ್ಲಿ ಏನಿದೆ? ಗಾಂಧಿ ಮೇಲೆ ನೆಹರೂಗೆ ಅಷ್ಟೊಂದು ಅಸಾಮಾನ್ಯ ಹಿಡಿತ ಹೊಂದಿರಲು ಸಲಿಂಗಕಾಮವೆ ಕಾರಣ. ನೆಹರೂ ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ನನ್ನ ದಕ್ಷಿಣ ಭಾರತೀಯ ಮಿತ್ರರೊಬ್ಬರು ಹೇಳಿದ್ದರು. ಸಲಿಂಗಕಾಮಿಗಳಾಗಿರುವುದು ತಪ್ಪಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಗಾಂಧಿ ಸಲಿಂಗ ಕಾಮಿ ಎಂದ ಪುಸ್ತಕ ಬ್ಯಾನ್ ಆಗಿತ್ತು

ಗಾಂಧಿ ಸಲಿಂಗ ಕಾಮಿ ಎಂದ ಪುಸ್ತಕವನ್ನು 2011ರಲ್ಲಿ ಗುಜರಾತ್ ಸರ್ಕಾರವು ನಿಷೇಧಿಸಿತ್ತು. ಭಾರತದ ಸಮಾಜದಲ್ಲಿ, ಸಂಪ್ರದಾಯಸ್ಥರಲ್ಲಿ ಈ ಬಗ್ಗೆ ಚರ್ಚೆ ಕೂಡಾ ನಿಷಿದ್ಧ, ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ನಿಷೇಧದ ಕುರಿತು ಪ್ರೊ ಮಧು ಉತ್ತರ

ಇತಿಹಾಸದ ಪುಟಗಳಲ್ಲಿ ಹೀರೋಗಳೆನಿಸಿದವರ ಬಗ್ಗೆ ಓದುವುದನ್ನು ನಿಷೇಧಿಸಬೇಕು ಎನ್ನುವಂತಿದೆ ನಿಮ್ಮ ಲಾಜಿಕ್, ಸಾರ್ವಕರ್ ಬಗ್ಗೆ ಚರಿತ್ರೆ ಏನು ಹೇಳುತ್ತದೆ, ಸಮಾಜ ಹೇಗೆ ನಡೆಸಿಕೊಂಡಿದೆ ಎಂಬುದು ಜ್ವಲಂತ ಉದಾಹರಣೆ ಎಂದಿದ್ದಾರೆ.

ಮನುಸ್ಕೃತಿ ಬಗ್ಗೆ ಪ್ರೊ ಮಧು ಟ್ವೀಟ್

ಮನುಸ್ಕೃತಿ ಬಗ್ಗೆ ಪ್ರೊ ಮಧು ಟ್ವೀಟ್ ಮಾಡಿ, ಮನುಸ್ಮೃತಿಯಲ್ಲಿ ಪ್ರಸ್ತುತ ಜೀವನಕ್ಕೆ ಅಗತ್ಯವಾದ ಎಷ್ಟೋ ವಿಷಯಗಳಿವೆ ಆದರೆ, ಕೆಲವರಿಗೆ ಪೂರ್ವಗ್ರಹವಿರುವುದರಿಂದ ಬರೀ ಹುಳುಕುಗಳು ಮಾತ್ರ ಕಾಣಿಸುತ್ತದೆ

ಚುನಾವಣೆ ಸಂದರ್ಭದಲ್ಲಿ ಸಕ್ರಿಯರಾಗಿರುವ ಮಧು

ಚುನಾವಣೆ ಸಂದರ್ಭದಲ್ಲಿ ಸಕ್ರಿಯರಾಗಿರುವ ಮಧು

2014ರ ಚುನಾವಣೆ ಸಂದರ್ಭದಲ್ಲಿ ಮೋದಿ, ಬಿಜೆಪಿ ಪರವಾಗಿ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಗುರುತಿಸಿಕೊಂಡ ಮಧು ಅವರು ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು, ಫ್ರೀ ಸೆಕ್ಸ್ ಬಗ್ಗೆ ರಾಹುಲ್ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದರು.

ಮಧು ಅವರು ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಸಮರ್ಥಿಸಿಕೊಂಡು ಪ್ರೊ. ಮಧು ಮತ್ತೆ ಟ್ವೀಟ್ ಮಾಡಿದ್ದಾರೆ.

English summary
Nehru's extraordinary hold over Gandhi can only be explained by gay relation between 2- Tweeted Professor Madhu Purnima Kishwar in a reply to Rupa Subramanya's tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X