24 ಗಂಟೆ ಬಾಕಿ.... ಸ್ಮೃತಿ ಇರಾನಿ ಸಾಲು ಸಾಲು ಟ್ವೀಟು, ಅಮೇಥಿಯಲ್ಲಿ ಜಯಭೇರಿ!?
ನವದೆಹಲಿ, ಮೇ 22: "24 ಗಂಟೆಗಳು ಬಾಕಿ... ನಾವೆಲ್ಲ ನಾಳೆ ಇಷ್ಟರಲ್ಲಿ ಟಿವಿ ಮುಂದೆ ಕುಳಿತಿರುತ್ತೇವೆ. ನಮ್ಮನ್ನು ಆಶೀರ್ವದಿಸಿದ ಎಲ್ಲ ಭಾರತೀಯರಿಗೂ ನನ್ನ ಕೃತಜ್ಞತೆ" ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
"ನಮ್ಮ ಪಕ್ಷ ಮತ್ತು 'ನನ್ನ ನಾಯಕತ್ವ'ವನ್ನು ಆಶೀರ್ವದಿಸಿದ ಜನರಿಗೆ ನನ್ನ ಧನ್ಯವಾದ" ಎಂದ ಇರಾನಿ ಅವರ ಟ್ವೀಟ್, ಅವರು ಅಮೇಥಿಯಲ್ಲಿ ಜಯಗಳಿಸುವ ಸೂಚನೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ!
ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ನಂತರ ಮತ್ತೊಮ್ಮೆ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವ ಸೂಚನೆ ಸಿಕ್ಕಿದ್ದು, ಅವರು ಸಾಲು ಸಾಲು ಟ್ವೀಟ್ ಗಳ ಮೂಲಕ ಬಿಜೆಪಿಯ ಜಯಭೇರಿಗೆ ಸಂಭ್ರಮ ಪಟ್ಟಿದ್ದಾರೆ.
ಈ ಬಾರಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಸ್ಮೃತಿ ಇರಾನಿ ಗೆಲುವು ಸಾಧಿಸಲಿದ್ದಾರೆ ಎಂದು ಹಲವು ಸಮೀಕ್ಷೆಗಳೂ ಹೇಳಿದ್ದು, ಸ್ಮೃತಿ ಇರಾನಿ ಅವರೂ ಅದೇ ವಿಶ್ವಾಸದಲ್ಲಿದ್ದಾರೆ. ಅವರ ಸಾಲು ಸಾಲು ಟ್ವೀಟ್ ಗಳೂ ಅದೇ ವಿಶ್ವಾಸವನ್ನು ಹೊರ ಹಾಕಿವೆ.
ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳಲಿದ್ದು, ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಮಾಡಿದ ಟ್ವೀಟ್ ಗಳು ಇಲ್ಲಿವೆ...
|
24 ಗಂಟೆ ಬಾಕಿ....
24 ಗಂಟೆ ಬಾಕಿ.... ನಮ್ಮಲ್ಲಿ ಬಹುತೇಕ ಜನರು ಟಿವಿ ಮುಂದೆ ಕೂತು ಪ್ರತಿಯೊಂದು ಮತ, ಮತದ ಬಗ್ಗೆಯೂ ಮಾಹಿತಿ ಪಡೆಯಲು ಆರಂಭಿಸುತ್ತೇವೆ, ರಾಜಕೀಯ ವಿಶ್ಲೇಷಣೆಗಳನ್ನು ಕೇಳುವಲ್ಲಿ ಬ್ಯುಸಿಯಾಗುತ್ತೇವೆ. ಆದ್ದರಿಂದ ನಮ್ಮನ್ನು ಆಶೀರ್ವದಿಸಿದ ಎಲ್ಲ ಮತದಾರರಿಗೂ ನನ್ನ ಕೃತಜ್ಞತೆಗಳು. ನಮ್ಮ ಪಕ್ಷ ಮತ್ತು ನನ್ನ ನಾಯಕತ್ವವನ್ನು ಆಶಿರ್ವದಿಸಿದ ಈ ದೇಶದ ಮಿಲಿಯನ್ ಗಟ್ಟಲೆ ಜನರಿಗೆ ನಾನು ಋಣಿ- ಸ್ಮೃತಿ ಇರಾನಿ
|
ನಿಸ್ವಾರ್ಥ ಕಾರ್ಯಕರ್ತರಿಗೆ ನಮನ
ಯಯಾವುದೇ ಹುದ್ದೆ, ಸ್ಥಾನದ ಆಸೆಯಿಲ್ಲದೆ ಹೊಸ ಭಾರತ ಕಟ್ಟಲು ಅವಿರತವಾಗಿ ಶ್ರಮಿಸಿದ ನಿಸ್ವಾರ್ಥ ಕಾರ್ಯಕರ್ತರಿಗೆ ನಾವು ಋಣಿ. ಎಲ್ಲರೊಂದಿಗೆ ಎಲ್ಲರ ವಿಕಾಸ(ಸಬ್ ಕಾಸಾತ್ ಸಬ್ ಕಾ ವಿಕಾಸ್) ಎಂಬ ತತ್ತ್ವಕ್ಕೆ ಅವರೆಲ್ಲರೂ ಬದ್ಧ- ಸ್ಮೃತಿ ಇರಾನಿ
|
ಬಲಿದಾನಕ್ಕೆ ನಮನ
ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಹಿಂಸೆಯ ನಡುವೆಯೂ ಪಕ್ಷಕ್ಕಾಗಿ, ದೇಶಕ್ಕಾಗಿ ದುಡಿದ ಕಾರ್ಯಕರ್ತರ ಬಲಿದಾನಕ್ಕೆ ನನ್ನ ನಮನ. ಮಡಿದವರ ಬಗ್ಗೆ ಮಾತನಾಡಲು ಯಾವ ಪದಗಳೂ ಸರಿಸಮವಲ್ಲ. ಆದರೆ ಅವರ ಬಲಿದಾನವನ್ನು ಸಂವಿಧಾನದ ಒಳಿತಿಗಾಗಿ ನಾವು ಬಳಸಿಕೊಳ್ಳುವುದು ಹೆಚ್ಚುಗಾರಿಕೆ- ಸ್ಮೃತಿ ಇರಾನಿ.
|
ಪ್ರಧಾನಿ ಮೇಲೆ ನಂಬಿಕೆ
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಪಕ್ಷಗಳ ನಿರಂತರ ವಾಗ್ದಾಳಿ, ದ್ವೇಷದ ರಾಜಕಾರಣ, ಅಪಹಾಸ್ಯದ ನಡುವೆಯೂ ಪ್ರದಾನಿಯವರ ಮೇಲೆ ನಂಬಿಕೆ ಇಟ್ಟು ಅವರೊಂದಿಗೆ ನಿಂತ ಎಲ್ಲ ಕಾರ್ಯಕರ್ತರಿಗೂ, ಜನರಿಗೂ ನಾವು ಕೃತಜ್ಞರಾಗಿದ್ದೇವೆ- ಸ್ಮೃತಿ ಇರಾನಿ
|
ಜನರು v/s ವಿಪಕ್ಷಗಳು
ಈ ಚುನಾವಣೆ ಜನರು v/s ವಿರೋಧ ಪಕ್ಷಗಳ ನಡುವಿನ ಚುನಾವಣೆ. ಭಾರತ್ ಕೆ ತುಕ್ಡೆ ಹೊಂಗೆ ಎಂದು ಕೂಗಿದ ಮುಖಂಡರ ವಿರುದ್ಧದ ಚುನಾವಣೆ. ಆದರೆ ಈ ಎಲ್ಲರ ವಿರುದ್ಧ ನಿಂತು, ಭಾರತಕ್ಕಾಗಿ ಮಯತ್ತು ಅದರ ಭವಿಷ್ಯಕ್ಕಾಗಿ ನಮ್ಮನ್ನು ಆಶೀರ್ವದಿಸಿದ ಜನರಿಗೆ ಧನ್ಯವಾದ- ಸ್ಮೃತಿ ಇರಾನಿ
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications