ತ್ರಿವಳಿ ತಲಾಖ್ ಮಸೂದೆ : ಧ್ವನಿ ಮತದ ಮೂಲಕ ಅಂಗೀಕಾರ
ನವದೆಹಲಿ, ಡಿಸೆಂಬರ್ 27: ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯ ಕಸಿವ 'ತ್ರಿವಳಿ ತಲಾಖ್' ಪದ್ಧತಿಯ ನಿರ್ಮೂಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, 'ತ್ರಿವಳಿ ತಲಾಖ್ ಮಸೂದೆ ಮಂಡನೆ'ಗೆ ಮುಂದಾಗಿದೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಯೋಚಿಸಿತ್ತು. ವಿವಾದಾತ್ಮಕ ಮಸೂದೆಯ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕಲಾಪದಲ್ಲಿ ತನ್ನ ಪ್ರತಿಯೊಬ್ಬ ಸಂಸದರೂ ಹಾಜರಿರುವಂತೆ ಬಿಜೆಪಿ ವ್ಹಿಪ್ ಜಾರಿಗೊಳಿಸಿದೆ.
ಕಳೆದ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಅಪರಾಧ ಮತ್ತು ಅಸಾಂವಿಧಾನಿಕ ಎಂಬ ಮಹತ್ವದ ತೀರ್ಪು ನೀಡಿತ್ತು.
ಸೆಪ್ಟೆಂಬರ್ 19ರಂದು ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಘೋಷಿಸಲು ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಒಪ್ಪಿತ್ತು. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿತ್ತು.

ಇಂದು ಮತ್ತೆ ಈ ಮಸೂದೆ ಕುರಿತು ಚರ್ಚೆ ನಡೆಯಲಿದ್ದು, ಈ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ' ಕನ್ನಡ ನೀಡಲಿದೆ.













Click it and Unblock the Notifications