ಭಾರತದ ಭವ್ಯ ಭವಿಷ್ಯಕ್ಕಾಗಿ ಮೋದಿ ಕನಸು

ನವದೆಹಲಿ,

ಜ.20-
ಕಾಂಗ್ರೆಸ್ಸಿನ
ರಾಜ್ಯಸಭೆ
ಸದಸ್ಯ
ಮಣಿಶಂಕರ್
ಅಯ್ಯರ್
AICC
ಸಮಾವೇಶದಲ್ಲಿ
ಮಾತನಾಡುತ್ತಾ
ಮೋದಿ
ಕಾಂಗ್ರೆಸ್
ಕಚೇರಿಯಲ್ಲಿ
ಚಹಾ
ಮಾರೋಕ್ಕೆ
ಲಾಯಕ್ಕು
ಎಂದಿದ್ದೇ
ಬಿಜೆಪಿಯ
ಪ್ರಧಾನಿ
ಆಕಾಂಕ್ಷಿ
ನರೇಂದ್ರ
ಮೋದಿ
ನಿನ್ನೆ
ತಮ್ಮ
ಪಕ್ಷದ
ಸಮಾವೇಶದಲ್ಲಿ
ಕಾಂಗ್ರೆಸ್
ವಿರುದ್ಧ
ಸಿಡಿಲಬ್ಬರದ
ಭಾಷಣ
ಮಾಡಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಇದೇ

ವೇಳೆ
ಮೋದಿ
ಭಾರತದ
ಭವ್ಯ
ಭವಿಷ್ಯದ
ಕನಸು
ಕಾಣುತ್ತಾ
ತಾವು
ಅಧಿಕಾರಕ್ಕೆ
ಬಂದರೆ
ದೇಶಕ್ಕಾಗಿ
ಏನು
ಮಾಡಬಲ್ಲೆ
ಎಂಬುದರ
ಸುಳಿವು
ನೀಡಿದ್ದಾರೆ.
Idea
of
India
ಮೂಲಕ
ದೂರದರ್ಶಿ
ಭಾರತವನ್ನು
ಹರಡಿಟ್ಟಿದ್ದಾರೆ.

id='are-slot-2'
class='oiad
oi-axt
oiadv'>

100 ಸ್ಮಾರ್ಟ್ ನಗರಗಳ ನಿರ್ಮಾಣ

100 ಸ್ಮಾರ್ಟ್ ನಗರಗಳ ನಿರ್ಮಾಣ

ಇಡೀ ಜಗತ್ತು ಸ್ಮಾರ್ಟ್ ಆಗುತ್ತಿರುವುದನ್ನು ಮನಗಂಡಿರುವ ಮೋದಿ ದೇಶದಲ್ಲಿ 100 ಸ್ಮಾರ್ಟ್ ನಗರಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ನಗರೀಕರಣವನ್ನು ತಡೆಯುವುದೂ ತಮ್ಮ ಇರಾದೆಯಾಗಿದೆ. ಪ್ರತಿ ರಾಜ್ಯಗಳಲ್ಲೂ IITs, IIMs ಮತ್ತು AIIMS ಸ್ಥಾಪನೆ, ಬುಲೆಟ್ ಟ್ರೈನುಗಳು, ಕಾಳಸಂತೆಕೋರರರಿಗೆ ವಿಶೇಷ ನ್ಯಾಯಾಲಯ ಸ್ಥಾಪನೆ, ಅಗತ್ಯವಸ್ತುಗಳ ಬೆಲೆ ಸ್ಥಿರೀಕರಣಕ್ಕಾಗಿ ನಿಧಿ ಸ್ಥಾಪನೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

ಆಡಳಿತಕಾರರಿಗೆ 60 ವರ್ಷ ಸೇವಕನಿಗೆ 60 ತಿಂಗಳು

ಆಡಳಿತಕಾರರಿಗೆ 60 ವರ್ಷ ಸೇವಕನಿಗೆ 60 ತಿಂಗಳು

ಅವರಿಗೆ (ಆಡಳಿತಕಾರರಿಗೆ) 60 ವರ್ಷ ಕಾಲ ಆಡಳಿತ ಕೊಟ್ಟು ಸಾಕಾಗಿದೆ. ನನಗೆ (ಸೇವಕನಿಗೆ) 60 ತಿಂಗಳು ಅಧಿಕಾರ ಕೊಟ್ಟು ನೋಡಿ. ಇವುಗಳನ್ನೆಲ್ಲಾ ಸಾಕಾರಗೊಳಿಸುತ್ತೇನೆ ಎಂದು ಭರವಸೆಯ ಬೆಳಕು ಚೆಲ್ಲಿದ್ದಾರೆ. ಇದೇ ವೇಳೆ ಪ್ರಧಾನಿ ಅಭ್ಯರ್ಥಿಯಾಗಿ ಕಳೆದ ನವೆಂಬರಿನಲ್ಲಿ ಆಯ್ಕೆಯಾದ ಬಳಿಕ ಇದುವರೆಗೂ 77 ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿರುವ ಮೋದಿಗೆ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಬಿಜೆಪಿ ಸಮಾವೇಶದಲ್ಲಿ 'ಹೆಚ್ಚು ಆಕ್ರಮಣಕಾರಿಯಾಗದೆ, ಅತಿ ಆತ್ಮವಿಶ್ವಾಸಕ್ಕೆ ಸಿಲುಕದೆ, ಜಾಗ್ರತೆಯಿಂದ ಪ್ರಚಾರ ಕಾರ್ಯ ನಡೆಸುವಂತೆ' ಕಿವಿ ಮಾತು ಹೇಳಿದ್ದಾರೆ.

ಟ್ವಿಟ್ಟರಿನಲ್ಲಿ ಪ್ರತಿಕ್ರಯಿಸಿರುವ ಮೋದಿ

ಇದಕ್ಕೆ ತಕ್ಷಣ ಟ್ವಿಟ್ಟರಿನಲ್ಲಿ ಪ್ರತಿಕ್ರಯಿಸಿರುವ ಮೋದಿ ತಮ್ಮ ಮಾತನ್ನು ಶಿರಸಾವಹಿಸಿ ಪಾಲಿಸುವುದಾಗಿ ಅಭಯ ನೀಡಿದ್ದಾರೆ.

ನಾನೋ ಸಾಮಾನ್ಯ ಟೀ ಕಾರ್ಮಿಕ

ನಾನೋ ಸಾಮಾನ್ಯ ಟೀ ಕಾರ್ಮಿಕ

'ಅವರದು ಮೇಲ್ದರ್ಜೆ ಮನಃಸ್ಥಿತಿ/ ಜೀವನ. ಚಹಾ ಮಾರಾಟಗಾರನ ಜತೆ ಸ್ಪರ್ಧೆಗಿಳಿಯಲು ಅವರ ಮನಸ್ಸು ಒಪ್ಪದು. ಅವರು ಖ್ಯಾತ ಜನ. ನಾನೋ ಸಾಮಾನ್ಯ ಟೀ ಕಾರ್ಮಿಕ' ಎಂದು ಮೋದಿ ಅವರು ಮಣಿಶಂಕರ್ ಅಯ್ಯರ್ ಗೆ ತಿರುಗೇಟು ನೀಡಿದ್ದಾರೆ.

ದೇಶದ ಜನರಲ್ಲಿ ಕಾಮನಬಿಲ್ಲು ಕಾಮನೆ ತುಂಬಿದ ಮೋದಿ

ದೇಶದ ಜನರಲ್ಲಿ ಕಾಮನಬಿಲ್ಲು ಕಾಮನೆ ತುಂಬಿದ ಮೋದಿ

ನಿನ್ನೆ ಭಾನುವಾರ ಪಕ್ಷದ ಸಮಾವೇಶದಲ್ಲಿ ಸುಮಾರು 80 ನಿಮಿಷ ಕಾಲ ಒಂದೇ ಸಮನೆ ಭಾಷಣ ಮಾಡಿದ ಮೋದಿ ' ದೇಶದ ಪರಂಪರೆ, ಕೃಷಿ, ಮಹಿಳೆ, ನೈಸರ್ಗಿಕ ಸಂಪತ್ತು, ಯುವಶಕ್ತಿ, ಪ್ರಜಾಪ್ರಭುತ್ವ ಮತ್ತು ಬುದ್ಧಿಶಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ದೇಶದ ಜನರಲ್ಲಿ ಕಾಮನಬಿಲ್ಲು ಕಾಮನೆಯನ್ನು ತುಂಬಿದ್ದಾರೆ. ಪ್ರತಿಭೆ, ಪರಂಪರೆ, ಪ್ರವಾಸೋದ್ಯಮ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳು ನನಗೆ ಮಾರ್ಗದರ್ಶಕವಾಗಲಿವೆ ಎಂದು ಅವರು ಆಶಿಸಿದರು.

ಚತುಷ್ಪಥ ಬುಲೆಟ್ ಟ್ರೈನುಗಳು

ಚತುಷ್ಪಥ ಬುಲೆಟ್ ಟ್ರೈನುಗಳು

ವಾಜಪೇಯಿ ಆಡಳಿತದಲ್ಲಿ ಚತುಷ್ಪಥಗಳು ನಿರ್ಮಾಣವಾದಂತೆ ಸ್ವತಂತ್ರ ಭಾರತ ವಜ್ರ ಮಹೋತ್ಸವ ಆಚರಣೆಯತ್ತ ದಾಪುಗಾಲು ಹಾಕಲು ಚತುಷ್ಪಥ ಬುಲೆಟ್ ಟ್ರೈನುಗಳನ್ನು ಓಡಿಸುವುದಾಗಿ ಮೋದಿ ಇದೇ ವೇಳೆ ಭರವಸೆ ನೀಡಿದರು.

ಭಾರತದ ಭವಿಷ್ಯ ನಿರ್ಮಾಣಕ್ಕಾಗಿ ದುಡಿಯಿರಿ

ಭಾರತದ ಭವಿಷ್ಯ ನಿರ್ಮಾಣಕ್ಕಾಗಿ ದುಡಿಯಿರಿ

'ಬಿಜೆಪಿಯನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದಷ್ಟೇ ಚುನಾವಣೆಯಲ್ಲಿ ಕಾರ್ಯೋನ್ಮುಖರಾಗಬೇಡಿ. ದೇಶದ ಹಿತದೃಷ್ಟಿಯಿಂದ ಭವ್ಯ ಭಾರತದ ನಿರ್ಮಾಣಕ್ಕಾಗಿ, ಭಾರತದ ಭವಿಷ್ಯ ನಿರ್ಮಾಣಕ್ಕಾಗಿ ದುಡಿಯಿರಿ' ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಮೋದಿ ಸಲಹೆ ನೀಡಿದರು.
ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಇದುವರೆಗೂ ಪ್ರಾತಿನಿಧಿಕವಾಗಿತ್ತು; ಇನ್ಮುಂದೆ ಪ್ರಜಾಪ್ರಭುತ್ವದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮೋದಿ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+