ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ 5 ಗಂಟೆ ವಿಳಂಬ

|
Google Oneindia Kannada News

ನವದೆಹಲಿ, ಮೇ 20: ಮೇ 23ರಂದು ದೆಹಲಿ ಲೋಕಸಭೆ ಚುನಾವಣೆಯ ಫಲಿತಾಂಶವು ಐದರಿಂದ ಆರು ಗಂಟೆಗಳಷ್ಟು ತಡವಾಗಿ ಪ್ರಕಟವಾಗಲಿದೆ.

ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಲ್ಲಿಯೂ ವಿವಿಪ್ಯಾಟ್‌ಗಳ ಎಣಿಕೆಗೆ ಹೆಚ್ಚು ಸಮಯ ತಗುಲುವುದರಿಂದ ಫಲಿತಾಂಶ ಪ್ರಕಟಿಸುವುದು ವಿಳಂಬವಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ತಿಳಿಸಿದ್ದಾರೆ.

ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್

ಚುನಾವಣಾ ಮತಯಂತ್ರ (ಇವಿಎಂ) ಎಣಿಕೆ ಕಾರ್ಯ ಮುಗಿದ ಬಳಿಕ ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಅನ್ನು ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಎಣಿಕೆ ಮಾಡಲಾಗುತ್ತದೆ.

Lok Sabha Elections 2019: Delhi poll results may get delayed by 5-6 hours

ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಯಾವುದಾದರೂ ಐದು ವಿವಿಪ್ಯಾಟ್‌ಗಳನ್ನು ಆಯ್ದುಕೊಳ್ಳಲಾಗುತ್ತದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿಯೂ ಇರುವ ವಿಶೇಷ ವಿವಿಪ್ಯಾಟ್ ತನಿಖೆ ಬೂತ್‌ನಲ್ಲಿ ಎಣಿಕೆ ಮಾಡಲಾಗುತ್ತದೆ. ಇದು ಐದು ಸುತ್ತುಗಳಲ್ಲಿ ನಡೆಯಲಿದೆ ಎಂದು ಸಿಂಗ್ ಹೇಳಿದ್ದಾರೆ.

ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ

ದೆಹಲಿಯ 70 ವಿಧಾನಸಭೆಗಳಲ್ಲಿ 350 ವಿವಿಪ್ಯಾಟ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ವಿಧಾನಸಭೆಯಲ್ಲಿ 200 ಮತಕೇಂದ್ರಗಳಿದ್ದು, ಅವುಗಳಲ್ಲಿ ಯಾವುದಾದರೂ ಐದು ಮತ ಕೇಂದ್ರಗಳನ್ನು ಆಯ್ದುಕೊಳ್ಳಲಾಗುತ್ತದೆ. ಅಧಿಕೃತ ಫಲಿತಾಂಶ ತಡವಾದರೂ, ಅದರ ಟ್ರೆಂಡ್ ಮೊದಲೇ ಬಹಿರಂಗವಾಗಲಿದೆ. ಔಪಚಾರಿಕ ಫಲಿತಾಂಶ ಪ್ರಕಟ ಐದರಿಂದ ಆರುಗಂಟೆ ವಿಳಂಬವಾಗಲಿದೆ ಎಂದು ತಿಳಿಸಿದ್ದಾರೆ.

English summary
Lok Sabha Elections 2019: Election Commission has said that, the declaration of results for Delhi Lok Sabha constituencies may get delayed around 5-6 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X