'ಮೋದಿಯನ್ನು ಸೋಲಿಸಿ, ಇಲ್ಲದಿದ್ದರೆ ಪ್ರಧಾನಿಯಾಗಿಯೇ ಉಳಿಯುತ್ತಾರೆ'

Recommended Video

      Lok Sabha Elections 2019 : ನರೇಂದ್ರ ಮೋದಿ ಬಗ್ಗೆ ದೆಹಲಿ ಮುಖ್ಯಮಂತ್ರಿ ಏನ್ ಹೇಳ್ತಾರೆ ಗೊತ್ತಾ?

      ನವದೆಹಲಿ, ಮಾರ್ಚ್ 25: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯುವಂತೆ ದೆಹಲಿ ಮುಖ್ಯಮಂತ್ರು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

      ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

      ಒಂದು ವೇಳೆ ಬಿಜೆಪಿ ಗೆದ್ದರೆ 2019ರ ಚುನಾವಣೆ ಬಳಿಕ ಮತ್ತೆ ಎಂದಿಗೂ ಚುನಾವಣೆಯೇ ನಡೆಯುವುದಿಲ್ಲ. ಏಕೆಂದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಉಳಿದಿರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

      ದೇಶವನ್ನು ಆಳಲು ಮೋದಿ ಸರ್ಕಾರವು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕೇಸರಿ ಪಕ್ಷದ ಸೋಲಿಗೆ ಶ್ರಮಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

      lok sabha elections 2019 defeat modi or he will be prime minister forever: arvind kejriwal

      ಇಂದು ಪ್ರತಿಯೊಬ್ಬ ದೇಶಭಕ್ತರೂ ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಒಂದೇ ಧ್ಯೇಯ ಹೊಂದಿರಬೇಕು. 2019ರಲ್ಲಿ ಅವರು ಅಧಿಕಾರಕ್ಕೆ ಬಂದರೆ, ಅವರು (ಮೋದಿ) ಎಂದೆಂದಿಗೂ ಪ್ರಧಾನಿಯಾಗಿಯೇ ಉಳಿಯುತ್ತಾರೆ.

      ಒಂದು ವೇಳೆ ಮತ್ತೆ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಚುನಾವಣೆಯೇ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

      ಗುರುಗಾಂವ್‌ನಲ್ಲಿ ಮುಸ್ಲಿಂ ಕುಟುಂಬವೊಂದರ ಮೇಲೆ ನಡೆದ ಕ್ರೂರ ಹಲ್ಲೆಯ ಘಟನೆಯನ್ನು ಪ್ರಸ್ತಾಪಿಸಿದ ಅವರು, ಇಂದು ಯಾವುದೇ ತಪ್ಪು ಮಾಡದೆ ಇದ್ದರೂ ಅಲ್ಪಸಂಖ್ಯಾತ ಸಮುದಾಯದ ಜನರು ಹಲ್ಲೆಗೆ ಒಳಗಾಗುತ್ತಿದ್ದಾರೆ, ಕಿರುಕುಳ ಅನುಭವಿಸುತ್ತಿದ್ದಾರೆ ಮತ್ತು ಹತ್ಯೆಯಾಗುತ್ತಿದ್ದಾರೆ ಎಂದರು.

      'ಇಂದು ಮೋದಿ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ದೇಶ ದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತದೆ' ಎಂದು ದೂರಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+