ಒಂದು ವರ್ಷ ಇವಿಎಂ ಕೊಡಿ, ದೋಷ ಕಂಡು ಹಿಡಿತೀವಿ: ಪಿತ್ರೋಡಾ
ನವದೆಹಲಿ, ಏಪ್ರಿಲ್ 18: ವಿದ್ಯುನ್ಮಾನ ಮತಯಂತ್ರದಲ್ಲಿ ದೋಷವಿದೆ. ಆದರೆ ಅದೇನೆಂದು ನಮಗೂ ತಿಳಿದಿಲ್ಲ. ಯಾರಾದರೂ ಒಂದು ವರ್ಷ ಅಧ್ಯಯನಕ್ಕೆ ಇವಿಎಂ ಕೊಟ್ಟರೆ ನಾವು ಅದನ್ನು ಕಂಡುಹಿಡಿಯಲು ಸಾಧ್ಯ ಎಂದು ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಒಬ್ಬ ಎಂಜಿನಿಯರ್ ಆಗಿ, ತಂತ್ರಜ್ಞಾನ ಪರಿಣತನಾಗಿ ಇವಿಎಂ ಕುರಿತು ನನಗೆ ತೃಪ್ತಿಯಿಲ್ಲ. ಆದರೆ, ಅದರಲ್ಲಿನ ದೋಷ ಇಂಥದ್ದೇ ಎಂದು ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಬಳಿ ಇವಿಎಂ ಇಲ್ಲ. ಒಂದು ವರ್ಷದ ಮಟ್ಟಿಗೆ ಅಧ್ಯಯನಕ್ಕಾಗಿ ಯಾರಾದರೂ ಇವಿಎಂ ನೀಡಿದರೆ ನಿಮಗೆ ಏನನ್ನಾದರೂ ಹೇಳಲು ನಮಗೆ ಸಾಧ್ಯ ಎಂದು ಹೇಳಿದರು.

ಇವಿಎಂನ ವಿನ್ಯಾಸ, ಅದರ ಸಾಫ್ಟ್‌ವೇರ್ಅನ್ನು ಅರ್ಥಮಾಡಿಕೊಳ್ಳಬೇಕು. ಅದರಲ್ಲಿನ ಪ್ರತಿ ಸಣ್ಣ ಸಂಕೇತವನ್ನೂ ವಿಶ್ಲೇಷಣೆಗೆ ಒಳಪಡಿಸಬೇಕು. ಅದಾದ ಬಳಿಕವಷ್ಟೇ ನೀವು ಏನಾದರೂ ಹೇಳಲು ಸಾಧ್ಯ. ಆದರೆ ಒಂದಂತೂ ಸ್ಪಷ್ಟ, ಅದರಲ್ಲಿ ಏನೋ ಸಮಸ್ಯೆ ಇದೆ. ಅದೇನೆಂದು ನಮಗೆ ತಿಳಿದಿಲ್ಲ ಎಂದರು.
Sam Pitroda, Indian Overseas Congress Chief on EVM: You will have to understand the design, its software. Every little signal will have to be analysed. Then only you can say something. But one thing is clear that there is some problem, what is the problem we don't know https://t.co/9y12n1fQDG
— ANI (@ANI) 18 April 2019
ಕಾಂಗ್ರೆಸ್‌ನ ಪ್ರಣಾಳಿಕೆ ತಯಾರಿಸಲು ಜನರ ಅಹವಾಲುಗಳನ್ನು ಆಲಿಸಲಾಗಿದೆ. ನಾವು 5-6 ತಿಂಗಳು ಜನರ ಅಹವಾಲು ಆಲಿಸಲೆಂದೇ ಮೀಸಲಿಟ್ಟಿದ್ದೆವು. ನಾವು ದೇಶದಿಂದ ದೇಶಕ್ಕೆ ಹೋಗಿದ್ದೇವೆ. ಗ್ರಾಮಸ್ಥರೊಂದಿಗೆ ಮಾತನಾಡಿದ್ದೇವೆ. ಪರಿಣತರೊಂದಿಗೆ ಮಾತನಾಡಿದ್ದೇವೆ. ದುಬೈನಲ್ಲಿ 12 ದೇಶಗಳಿಂದ ಬಂದಿದ್ದ ಸದಸ್ಯರೊಂದಿಗೆ ಬೃಹತ್ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ 52 ಅಂಶಗಳನ್ನು ಪಟ್ಟಿಮಾಡಲಾಗಿದೆ. ಒಂದು ವೇಳೆ ಅಧಿಕಾರಕ್ಕೆ ಬಂದಾಗ ಈ ಪ್ರಣಾಳಿಕೆಯನ್ನು ಜಾರಿ ಮಾಡಲಾಗುವುದು ಎಂಬ ಭರವಸೆ ನೀಡುತ್ತೇನೆ. ಇದು ಸುಳ್ಳು ಭರವಸೆಯಲ್ಲ. ನಾವು ಏನಾದರೂ ಹೇಳಿದರೆ ಅದನ್ನು ಮಾಡುತ್ತೇವೆ ಎಂದರು.
-
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications