ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮುಂದುವರಿದ ಆಮ್ ಆದ್ಮಿ ಶಾಸಕರ ಬಂಧನ ಪರ್ವ

By Balaraj
|
Google Oneindia Kannada News

ನವದೆಹಲಿ, ಆಗಸ್ಟ್ 1: ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ನಂತರ, ಜನಪರ ಕೆಲಸಕ್ಕಿಂತ ಹೆಚ್ಚಾಗಿ, ವಿವಾದದಿಂದಲೇ ಸುದ್ದಿಯಾಗುತ್ತಿದೆ.

ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅತ್ಯಂತ ಬಾಲಿಶ ಹೇಳಿಕೆಗಳು ಮತ್ತು ಪಕ್ಷದ ಮುಖಂಡರು ಬೇಡವಾದ ಕಾರಣಕ್ಕೆ ಸುದ್ದಿಯಾಗುತ್ತಿರುವುದರಿಂದ, ಚುನಾವಣೆಯ ವೇಳೆ ಪಕ್ಷಕ್ಕಿದ್ದ ಜನಪ್ರಿಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಸಾಯಿಸಲೂ ಹೇಸುವುದಿಲ್ಲ, ದೆಹಲಿ - ಗುರುಗ್ರಾಮ (ಗುರುಗಾಂ) ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಗೆ ಬಿಜೆಪಿ ಸರಕಾರ ಕಾರಣ, ಇದು ಕೇಜ್ರಿವಾಲ್ ಬಾಲಿಶ ಹೇಳಿಕೆಗೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆಗಳು. (ಆತ್ಮಹತ್ಯೆಗೆ ಪ್ರಚೋದನೆ ಆರೋಪ, ಎಎಪಿ ಶಾಸಕ ಬಂಧನ)

ಮೋದಿ ಸರಕಾರದ ವಿರುದ್ದ ಟೀಕೆ ಮಾಡುವುದನ್ನೇ ದೈನಂದಿನ ಕಾಯಕದಂತೆ ಮಾಡಿಕೊಂಡಿರುವ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಶಾಸಕರು, ದೇಶದ ಎಲ್ಲಾ ರಾಜ್ಯಗಳನ್ನು ಬಿಟ್ಟು ಕೇಂದ್ರ ಸರಕಾರ ನಮ್ಮ ಸರಕಾರದ ಮೇಲೆ ಮಾತ್ರ ಕಣ್ಣಿಟ್ಟಿದೆ ಎನ್ನುವ ಹೇಳಿಕೆಯನ್ನೂ ನೀಡಿದ್ದುಂಟು.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಸೋನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಆರೋಪ ಹೊತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಶರದ್ ಚೌಹಾಣ್ ಅವರನ್ನು ದೆಹಲಿ ಪೊಲೀಸರು ಭಾನುವಾರ (ಜುಲೈ 31) ಬಂಧಿಸಿದ್ದಾರೆ.

ಆ ಮೂಲಕ ವಿವಿಧ ಕಾರಣಗಳಿಂದ ದೆಹಲಿಯ ಆಮ್ ಆದ್ಮಿ ಪಕ್ಷದ 12 ಶಾಸಕರು ಆಗಸ್ಟ್ 1ರ ವರೆಗೆ ಅನ್ವಯವಾಗುವಂತೆ ಬಂಧನಕ್ಕೊಳಗಾಗಿದ್ದಾರೆ. ಆ ಶಾಸಕರ ಮುಖ ಪರಿಚಯ, ಬಂಧನಕ್ಕೆ ಕಾರಣ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

1. ನರೇಶ್ ಯಾದವ್

1. ನರೇಶ್ ಯಾದವ್

ಪ್ರತಿನಿಧಿಸುವ ಕ್ಷೇತ್ರ : ಮಹರೋಲಿ (ದಕ್ಷಿಣ)
ಬಂಧನಕ್ಕೆ ಕಾರಣ: ಕುರಾನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ, ಪಂಜಾಬ್ ಪೊಲೀಸರಿಂದ ಜುಲೈ 24ರಂದು ಬಂಧನ. ಜುಲೈ 30ರಂದು ಸಂಗ್ರೂರ್ ಕೋರ್ಟ್ ನಿಂದ ಬೇಲ್.

2. ಅಮಾನತುಲ್ಲಾ ಖಾನ್

2. ಅಮಾನತುಲ್ಲಾ ಖಾನ್

ಪ್ರತಿನಿಧಿಸುವ ಕ್ಷೇತ್ರ : ಓಕ್ಲಾ
ಬಂಧನಕ್ಕೆ ಕಾರಣ: ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ, ಸಾಕ್ಷಿ ನಾಶ ಪಡಿಸಲು ಯತ್ನಿಸಿದ ಆರೋಪಕ್ಕಾಗಿ ಜುಲೈ 24ರಂದು ದೆಹಲಿ ಆಗ್ನೇಯ ವಿಭಾಗದ ಪೊಲೀಸರಿಂದ ಬಂಧನ.

3. ದಿನೇಶ್ ಮೊಹಾನಿಯಾ

3. ದಿನೇಶ್ ಮೊಹಾನಿಯಾ

ಪ್ರತಿನಿಧಿಸುವ ಕ್ಷೇತ್ರ : ಸಂಗಂ ವಿಹಾರ್
ಬಂಧನಕ್ಕೆ ಕಾರಣ: ಮಹಿಳೆಯ ಜೊತೆ ಅನುಚಿತ ವರ್ತನೆಗಾಗಿ ದೆಹಲಿಯ ತುಘಲಕ್ ಬಾದ್ ಪೊಲೀಸರಿಂದ ಜೂನ್ 25ರಂದು ಬಂಧನ. ಜೂನ್ 29ರಂದು ಸಾಕೇತ್ ಕೋರ್ಟಿನಿಂದ ಬೇಲ್.

4. ಪ್ರಕಾಶ್ ಜರ್ವಾಲ್

4. ಪ್ರಕಾಶ್ ಜರ್ವಾಲ್

ಪ್ರತಿನಿಧಿಸುವ ಕ್ಷೇತ್ರ : ದಿಯೋಲಿ
ಬಂಧನಕ್ಕೆ ಕಾರಣ: ಮಹಿಳೆಯ ಜೊತೆ ಅನುಚಿತ ವರ್ತನೆಗಾಗಿ ದೆಹಲಿಯ ಗ್ರೇಟರ್ ಕೈಲಾಶ್ ಪೊಲೀಸರಿಂದ ಜುಲೈ ಎಂಟರಂದು ಬಂಧನ. ಈ ಹಿಂದೆ ಕೂಡಾ ಜ್ಯೂ. ಇಂಜಿನಿಯರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿ ಬಂಧನಕ್ಕೊಳಗಾದ ಅಪಕೀರ್ತಿ. ಜುಲೈ 11ರಂದು ದೆಹಲಿ ಕೋರ್ಟಿನಿಂದ ಬೇಲ್.

5. ಮನೋಜ್ ಕುಮಾರ್

5. ಮನೋಜ್ ಕುಮಾರ್

ಪ್ರತಿನಿಧಿಸುವ ಕ್ಷೇತ್ರ : ಕೋಂಡ್ಲಿ (ಪೂರ್ವ ದೆಹಲಿ)
ಬಂಧನಕ್ಕೆ ಕಾರಣ: ಭೂಕಬಳಿಕೆ, ಚೀಟಿಂಗ್ ಕೇಸ್ ಅಡಿಯಲಿ ಜುಲೈ ಹತ್ತರಂದು ಎರಡು ದಿನದ ನ್ಯಾಯಾಂಗ ಬಂಧನ.

6. ಜಗದೀಪ್ ಸಿಂಗ್

6. ಜಗದೀಪ್ ಸಿಂಗ್

ಪ್ರತಿನಿಧಿಸುವ ಕ್ಷೇತ್ರ : ಹರಿನಗರ
ಬಂಧನಕ್ಕೆ ಕಾರಣ: ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನೌಕರನನ್ನು ಥಳಿಸಿದ ಆರೋಪದಡಿ ಮತ್ತು ಐಪಿಸಿ 323, 505, 341 ಸೆಕ್ಷನಡಿ ಮೇ 30ರಂದು ಬಂಧನ, ಬಿಡುಗಡೆ. ಬಂಧನ ಒಂದು 'ರೂಮರ್' ಎಂದು ಟ್ವೀಟ್ ಮಾಡಿ, ಪೊಲೀಸರಿಂದ ಎಚ್ಚರಿಕೆ ಕೂಡಾ ಪಡೆದುಕೊಂಡಿದ್ದರು.

7. ಮಹೇಂದ್ರ ಯಾದವ್

7. ಮಹೇಂದ್ರ ಯಾದವ್

ಪ್ರತಿನಿಧಿಸುವ ಕ್ಷೇತ್ರ : ವಿಕಾಶ್ ಪುರಿ
ಬಂಧನಕ್ಕೆ ಕಾರಣ: ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಸರಕಾರೀ ನೌಕರರಿಗೆ ಕೆಲಸಕ್ಕೆ ಕಿರುಕುಳ ಆರೋಪದಡಿ ಜೂನ್ 29ರಂದು ದೆಹಲಿ ಪೊಲೀಸರಿಂದ ಬಂಧನ. ಜೂನ್ 30ರಂದು ದೆಹಲಿ ಕೋರ್ಟಿನಿಂದ ಬೇಲ್.

8. ಅಖಿಲೇಶ್ ಪತಿ ತ್ರಿಪಾಠಿ

8. ಅಖಿಲೇಶ್ ಪತಿ ತ್ರಿಪಾಠಿ

ಪ್ರತಿನಿಧಿಸುವ ಕ್ಷೇತ್ರ : ಮಾಡೆಲ್ ಟೌನ್
ಬಂಧನಕ್ಕೆ ಕಾರಣ: 2013ರಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಖುದ್ದು ಹಾಜರಾಗುವಂತೆ ನೀಡಿದ ಆದೇಶ ಉಲ್ಲಂಘನೆ ಕಾರಣಕ್ಕಾಗಿ ನವೆಂಬರ್ 27ರಂದು ಬಂಧನ. ಡಿಸೆಂಬರ್ ಐದರಂದು ದೆಹಲಿ ಕೋರ್ಟ್ ಕೇಸನ್ನು ಅನೂರ್ಜಿತಗೊಳಿಸಿತು.

9. ಜಿತೇಂದ್ರ ತೋಮರ್

9. ಜಿತೇಂದ್ರ ತೋಮರ್

ಪ್ರತಿನಿಧಿಸುವ ಕ್ಷೇತ್ರ : ತ್ರಿನಗರ (ಚಾಂದ್ನಿ ಚೌಕ್)
ಬಂಧನಕ್ಕೆ ಕಾರಣ: ಕಾನೂನು ಸಚಿವರಾಗಿ 'ಕಾನೂನು'ಪದವೀಧರ ಎಂದು ಸುಳ್ಳು ಪ್ರಮಾಣಪತ್ರಿಕೆ ನೀಡಿದ ಆರೋಪದಡಿ ದೆಹಲಿ ಪೊಲೀಸರಿಂದ ಜೂನ್ ಹತ್ತರಂದು ಬಂಧನ. ಜುಲೈ 23ರಂದು ಸಾಕೇತ್ ಕೋರ್ಟಿನಿಂದ ಬೇಲ್.

10. ಕಮಾಂಡೋ ಸುರೇಂದ್ರ ಸಿಂಗ್

10. ಕಮಾಂಡೋ ಸುರೇಂದ್ರ ಸಿಂಗ್

ಪ್ರತಿನಿಧಿಸುವ ಕ್ಷೇತ್ರ : ದೆಹಲಿ ಕಂಟೋನ್ಮೆಂಟ್
ಬಂಧನಕ್ಕೆ ಕಾರಣ: ದೆಹಲಿ ನಗರಾಡಳಿತ ಕಾರ್ಪೋರೇಷನ್ ಸಿಬ್ಬಂದಿಯನ್ನು ಹಿಂದುಳಿದ ಸಮಾಜದವನೆಂದು ಅವಮಾನಿಸಿದ ಘಟನೆ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಆಗಸ್ಟ್ 21ರಂದು ಬಂಧನ, ಬಿಡುಗಡೆ.

11. ಶರದ್ ಚೌಹಾಣ್

11. ಶರದ್ ಚೌಹಾಣ್

ಪ್ರತಿನಿಧಿಸುವ ಕ್ಷೇತ್ರ : ನರೇಲಾ
ಬಂಧನಕ್ಕೆ ಕಾರಣ: ಪಕ್ಷದ ಕಾರ್ಯಕರ್ತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರಿಂದ ಜುಲೈ 31ರಂದು ಬಂಧನ.

12. ಸೋಮನಾಥ್ ಭಾರ್ತಿ

12. ಸೋಮನಾಥ್ ಭಾರ್ತಿ

ಪ್ರತಿನಿಧಿಸುವ ಕ್ಷೇತ್ರ : ಮಾಳವೀಯ ನಗರ
ಬಂಧನಕ್ಕೆ ಕಾರಣ: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ದೆಹಲಿ ನೈರುತ್ಯ ಪೊಲೀಸರಿಂದ ಸೆ. 29ರಂದು ಬಂಧನ. ಅಕ್ಟೋಬರ್ ಎಂಟರಂದು ದ್ವಾರಕಾ ಕೋರ್ಟಿನಿಂದ ಬೇಲ್.

English summary
List of twelve Delhi AAP MLAs arrested in criminal, domestic violence cases so far since February 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X