ಅತ್ಯಾಚಾರಿಗಳಿಗೆ ಗಲ್ಲು: ನಿರ್ಭಯಾ ಹಂತಕರ ಪರ ವಕೀಲ ಎಪಿ ಸಿಂಗ್ ಪ್ರತಿಕ್ರಿಯೆ
ನವದೆಹಲಿ, ಮಾರ್ಚ್ 20: ನಿರ್ಭಯಾ ಹಂತಕರನ್ನು ಮಾರ್ಚ್ 20ರಂದು ಬೆಳಗ್ಗೆ ಗಲ್ಲಿಗೇರಿಸಲಾಗಿದೆ. ಈ ಕುರಿತಂತೆ ಅಪರಾಧಿಗಳ ವಕೀಲರಾಗಿದ್ದ ಎಪಿ ಸಿಂಗ್ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಸಂವಿಧಾನ ಅನುಗುಣವಾಗಿ ಎಲ್ಲ ಕಾರ್ಯಗಳು ನಡೆಬೇಕಿತ್ತು. ಹಾಗಾಗಿ ರಾತ್ರಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ಹೋಗಿ ಜೀವ ಉಳಿಸಲು ಪ್ರಯತ್ನಿಸಿದ್ದೇನೆ ಎಂದರು.
ಇಂದು ಬೆಳಗ್ಗೆ 5.30ಕ್ಕೆ ಮ್ಯಾಜಿಸ್ಟ್ರೇಟ್ ಎದುರು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲ ಕಾನೂನು ತಂತ್ರಗಳು ನಡೆಸಿ ಕೊನೆಗೆ ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಕೊರಳೊಡ್ಡಿದರು.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಅವರ ಕುಟುಂಬಸ್ತರಿಗೆ ಹಸ್ತಾಂತರಿಸುವ ಮೊದಲು ಲಿಖಿತ ಸ್ಪಷ್ಟನೆಯನ್ನು ಪಡೆದುಕೊಳ್ಳಲಾಗುತ್ತದೆ.
ಮೃತದೇಹಗಳನ್ನು ಮಣ್ಣು ಮಾಡುವ ಸಂದರ್ಭ ಸಾರ್ವಜನಿಕ ಪ್ರದರ್ಶನಕ್ಕಿಡುವುದಿಲ್ಲ ಎಂಬ ಸ್ಪಷ್ಟನೆಯನ್ನು ಲಿಖಿತ ರೂಪದಲ್ಲಿ ನಾಲ್ಕು ಮನೆಯವರು ನೀಡಬೇಕು.

ಅಕ್ಷಯ್ ನನ್ನು ನೋಡಲು ಪುತ್ರನಿಗೆ ಅವಕಾಶ ನೀಡಬೇಕಿತ್ತು
ನ್ಯಾಯಾಲಯದ ಮುಂದೆ ನಾನು ಹೊಸ ವಾದವನ್ನೇ ಮಂಡಿಸಿದ್ದೇನೆ. ದೋಷಿ ಅಕ್ಷಯ್ ನನ್ನು ನೋಡಲು ಅವರ ಪುತ್ರ ಕಾಣಲು ಬಿಹಾರದಿಂದ ಬಂದಿದ್ದಾನೆ. ತಂದೆಯ ಭೇಟಿಗೆ ಅವಕಾಶ ನೀಡಬೇಕಿತ್ತು.

ಅಕ್ಷಯ್ ಕುಟುಂಬ ನಕ್ಸಲ್ ಪ್ರದೇಶದಲ್ಲಿದೆ
ಮುಖೇಶ್ ಕುಟುಂಬಸ್ಥರು ದೆಹಲಿಯ ನಿವಾಸಿಗಳು. ಆದರೆ ಅಕ್ಷಯ್ ಕುಟುಂಬ ಬಿಹಾರನ ನಕ್ಸಲ್ ಪೀಡಿತ ಪ್ರದೇಶದಲ್ಲಿದೆ. ಎಂಟು ವರ್ಷದ ಮಗನಿಗೆ ತಂದೆಯನ್ನ ನೋಡುವ ಅವಕಾಶ ಸಿಗಲಿಲ್ಲ.

ಇದು ಇತಿಹಾಸದಲ್ಲಿ ಇರಲಿದೆ
ಒಂದು ಮಗ ತಂದೆಯನ್ನ ನೋಡಿದ್ರೆ ಏನು ಆಗುತ್ತಿತ್ತು. ಮಗನಿಗೆ ತಂದೆಯ ಭೇಟಿಗೆ ಅವಕಾಶ ನೀಡದಿರೋದು ಇತಿಹಾಸದಲ್ಲಿ ಇರಲಿದೆ. ಇಂದು ಬಾಲ ವಿಕಾಸ ಇಲಾಖೆಗೆ ನಾಚಿಕೆ ಆಗಬೇಕು.

ಭೇಟಿ ಮಾಡಲು ಕೊರೊನಾ ನೆಪವೊಡ್ಡಿದ್ದರು
ನಿನ್ನೆ ಹೋದರೆ ಕೊರೊನಾ ಎಂದು ಹೇಳಿದರು. ಇಂದು ಕೋರ್ಟ್ ನತ್ತ ತಿರುಗಾಡುವ ಕೆಲಸವೇ ಆಯ್ತು. ಪವನ್ ತಾಯಿ ವಿಕಲಚೇತನರಾಗಿದ್ದು ಪುತ್ರನ ಭೇಟಿಗಾಗಿ ಕಾದಿದ್ದರು ಒಬ್ಬ ತಾಯಿಯ ನೋವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿ ಹಿಂದೆ ಎಲ್ಲರೂ ಓಡುತ್ತಿದ್ದಾರೆ. ಹಾಗಾದರೆ ಪವನ್ ತಾಯಿಗೆ ಯಾವುದೇ ಬೆಲೆ ಇಲ್ವಾ? ಎಂದು ಎಪಿ ಸಿಂಗ್ ಪ್ರಶ್ನಿಸಿದ್ದಾರೆ.

ಅಕ್ಷಯ್ ಪುತ್ರನ ತಪ್ಪೇನಿದೆ
ಅಕ್ಷಯ್ ನನ್ನು ನೀವು ಬಲತ್ಕಾರಿ, ಹಂತಕ ಎಂದು ಹೇಳುತ್ತೀರಿ. ಇಲ್ಲಿ ಆತನ ಪುತ್ರನ ತಪ್ಪೇನಿದೆ. ಮುಂದೊಂದು ದಿನ ಅಕ್ಷಯ್ ಪುತ್ರ ದೊಡ್ಡವನಾಗಿ ಸಂವಿಧಾನ ಓದಿದರೆ, ಈ ವ್ಯವಸ್ಥೆ, ಜೈಲು ನಿಯಮ, ಮಾಧ್ಯಮ ತಂದೆಯ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ ಎಂಬ ಭಾವನೆ ಮೂಡುತ್ತದೆ.












Click it and Unblock the Notifications