ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ದಿನದಲ್ಲಿ 6 ರಾಜ್ಯ ದಾಟಿ 2700 ಕಿಮೀ ಸಾಗಿ ಮಗನನ್ನು ಸೇರಿದ ತಾಯಿ

|
Google Oneindia Kannada News

ನವ ದೆಹಲಿ, ಏಪ್ರಿಲ್ 17: ಕೇರಳದ 50 ವರ್ಷದ ಮಹಿಳೆಯೊಬ್ಬರು 3 ದಿನದಲ್ಲಿ 6 ರಾಜ್ಯ ದಾಟಿ 2700 ಕಿಮೀ ಪ್ರಯಾಣ ಮಾಡಿ ಅನಾರೋಗ್ಯವಾಗಿರುವ ತಮ್ಮ ಮಗನನ್ನು ಭೇಟಿ ಮಾಡಿದ್ದಾರೆ. ಮಗನಿಗಾಗಿ ಕೇರಳದಿಂದ ರಾಜಸ್ಥಾನಕ್ಕೆ ಈ ಮಹಿಳೆ ಹೋಗಿದ್ದಾರೆ.

ಮಹಿಳೆಯ ಮಗ ಬಾರ್ಡರ್ ಸೆಕ್ಯುರಿಟಿ ಫೋರ್ಸ್‌(BSF)ನಲ್ಲಿ ಕೆಲಸ ಮಾಡುತ್ತಿದ್ದು, ಆತನನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಕುಮಾರ್ ತಮ್ಮ ಕುಟುಂಬವನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಅವರ ತಾಯಿ ತನ್ನ ಸೊಸೆ ಜೊತೆಗೆ ಕೇರಳದಿಂದ ರಾಜಸ್ಥಾನಕ್ಕೆ ತೆರಳಿದ್ದಾರೆ.

ಆಟೋ ತಡೆದ ಪೊಲೀಸರು, ತಂದೆಯನ್ನು ಹೊತ್ತುಕೊಂಡೇ ಹೋದ ಮಗ ಆಟೋ ತಡೆದ ಪೊಲೀಸರು, ತಂದೆಯನ್ನು ಹೊತ್ತುಕೊಂಡೇ ಹೋದ ಮಗ

ತಾಯಿಯ ಪರಿಸ್ಥಿತಿ ಕಂಡು ಕೇರಳ ಸರ್ಕಾರ ಕೇಂದ್ರ ಸಚಿವ ಮುರಳಿಧರನ್‌ರಿಂದ ಸೂಕ್ತ ಪಾಸ್‌ ವ್ಯವಸ್ಥೆ ಮಾಡಿದೆ. ಆಕೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಮಾರ್ಗವಾಗಿ ರಾಜಸ್ಥಾನ ಸೇರಿದ್ದಾರೆ. ಯಾವುದೇ ಹಣ ಪಡೆಯದೆ ಕಾರ್‌ನಲ್ಲಿ ಅವರನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಲಾಗಿದೆ.

Kerala Woman Travels To Rajasthan To Meet Ailing Son

ಫೆಬ್ರವರಿ ತಿಂಗಳಿನಲ್ಲಿ ಅರುಣ್ ತಮ್ಮ ಊರಿಗೆ ಬಂದಿದ್ದು, ಕೆಲಸ ಇರುವ ಕಾರಣ ಮತ್ತೆ ರಾಜಸ್ಥಾನಕ್ಕೆ ವಾಪಸ್ಸಾಗಿದ್ದರು. ಇದೀಗ ಕೊನೆಗೂ ಮಗನನ್ನು ಭೇಟಿಯಾದ ತಾಯಿ ಇದಕ್ಕೆ ಸಹಾಯ ಮಾಡಿದ ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚಿಗೆ, ಇದೇ ರೀತಿ ಘಟನೆ ತೆಲಂಗಾಣದಲ್ಲಿಯೂ ನಡೆದಿತ್ತು. ಮಹಿಳೆಯೊಬ್ಬರು ತಮ್ಮ ಮಗನಿಗಾಗಿ ತೆಲಂಗಾಣದಿಂದ ಆಂಧ್ರ ಪ್ರದೇಶದಲ್ಲಿ 1400 ಕಿಲೋ ಮೀಟರ್ ಪ್ರಯಾಣ ಮಾಡಿದ್ದರು.

English summary
Kerala to Rajasthan, a woman travels 2700KM to meet ailing son, a BSF personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X