ಕಾನೂನಿಗೆ ಯಾರೂ ಅತೀತರಲ್ಲ: ಕಾರ್ತಿ ಬಂಧನಕ್ಕೆ ಬಿಜೆಪಿ ಪ್ರತಿಕ್ರಿಯೆ
ನವದೆಹಲಿ, ಫೆಬ್ರವರಿ 28: 'ಕಾನೂನಿಗೆ ಯಾರೂ ಅತೀತರಲ್ಲ. ಈ ದೇಶದಲ್ಲಿ ಭ್ರಷ್ಟಾಚಾರ ಮಾಡಿದ ಪ್ರತಿಯೊಬ್ಬರೂ ಜೈಲಿಗೆ ಹೋಗಲೇಬೇಕು" ಎಂದು ಬಿಜೆಪಿ ಹೇಳಿದೆ.
ವಿತ್ತ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, 'ತಾನು ಕಾನೂನಿಗಿಂತ ದೊಡ್ಡವನು ಎಂದು ಭಾರತದಲ್ಲಿ ಯಾರೂ ತಿಳಿಯುವಂತಿಲ್ಲ. ಭ್ರಷ್ಟಾಚಾರ ಮಾಡುವವರು ಕಾನೂನಿನ ಪ್ರಕಾರ ಜೈಲಿಗೆ ಹೋಗಲೇಬೇಕು ಎಂದು ಹೇಳಿದರು.
'ಕೆಲವರು ಇದನ್ನು ರಾಜಕೀಯ ಪಿತೂರಿ ಎನ್ನುತ್ತಿದ್ದಾರೆ. ಆದರೆ ಅವರು ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ. ಇದರಲ್ಲಿ ಪಿತೂರಿ ಏನು ಬಂತು' ಎಂದು ಅವರು ಪ್ರಶ್ನಿಸಿದ್ದಾರೆ.

ಐಎನ್ ಎಕ್ಸ್ ಮಿಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು, ಇಂದು ಬೆಳಿಗ್ಗೆ ಲಂಡನ್ನಿನಿಂದ ವಾಪಸ್ಸಾಗುತ್ತಿದ್ದ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.












Click it and Unblock the Notifications