ರಾಹುಲ್ ಗಾಂಧಿ ಮುಂದೆ ಮತ್ತೆ ಅಳಲು ತೋಡಿಕೊಳ್ಳಲಿದ್ದಾರಾ ರಾಜ್ಯ ಕಾಂಗ್ರೆಸ್ಸಿಗರು?
ನವದೆಹಲಿ, ಜೂನ್ 18: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಬೆಂಕಿ ಬಿದ್ದಿದೆ!
ಆ ಉರಿ ಶಮನಕ್ಕೆ ಇದೀಗ ರಾಹುಲ್ ಗಾಂಧಿ ಹುಟ್ಟಿದ ದಿನ(ಜೂನ್ 19)ಕ್ಕೆ ಶುಭಕೋರುವ ನೆಪದಲ್ಲಿ ಹಲವು ಕಾಂಗ್ರೆಸ್ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.
ಜಲಸಂಪನ್ಮೂಲ ಮತ್ತು ವೈದ್ಯಕೀಯ ಖಾತೆ ಸಚಿವ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಅಜಯ್ ಸಿಂಗ್, ಎಚ್ ಕೆ ಪಾಟೀಲ್ ಮುಂತಾದವರು ದೆಹಲಿಗೆ ತೆರಳಿದ್ದಾರೆ.

ಅಲ್ಲಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಹುಟ್ಟು ಹಬ್ಬದ ಶುಭಕೋರಿ, ನಂತರ ರಾಜ್ಯ ರಾಜಕಾರಣದ ಬೆಳವಣಿಗೆಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ. ಸಚಿವ ಸಂಪುಟ ರಚನೆ ಸಮಯದಲ್ಲಿ, ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಉಂಟಾದ ಅತೃಪ್ತಿ ಮತ್ತು ಭಿನ್ನಾಭಿಪ್ರಾಯದ ಕುರಿತು ಮತ್ತೊಮ್ಮೆ ಚರ್ಚಿಸುವ ಸಂಭವವವಿದೆ.












Click it and Unblock the Notifications