'ನಾರಿಮನ್ ಕರ್ನಾಟಕ ಪರ ವಾದ ಮಾಡಲ್ಲ ಎಂದು ಹೇಳಿಲ್ಲ!'

Posted By:
Subscribe to Oneindia Kannada

ನವದೆಹಲಿ, ಸೆ. 30: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಆದೇಶಗಳನ್ನು ಸತತವಾಗಿ ವಿಳಂಬ ಮಾಡುವ ಮೂಲಕ ಪರೋಕ್ಷವಾಗಿ ನ್ಯಾಯಾಂಗದ ವಿರುದ್ಧ ನಿಂತಿರುವ ಕರ್ನಾಟಕ ಸರ್ಕಾರದ ಕ್ರಮದಿಂದ ವಕೀಲ ಫಾಲಿ ಎಸ್ ನಾರಿಮನ್ ಬೇಸತ್ತಿದ್ದಾರೆ. ಕರ್ನಾಟಕದ ಪರ ಇನ್ಮುಂದೆ ವಾದ ಮಂಡಿಸುವುದಿಲ್ಲ ಎಂದು ಮುನಿಸಿಕೊಂಡು ಹೊರ ನಡೆದಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾತು ಎಂದು ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ.

ಇಲ್ಲಿ ತನಕ ನಾರಿಮನ್ ಹಾಗೂ ಅವರ ವಕೀಲರ ತಂಡ ಮಂಡಿಸಿದ ವಾದವನ್ನು ಕರ್ನಾಟಕ ಸರ್ಕಾರ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಮರ್ಥಿಸಿಕೊಂಡು ಬಂದಿದ್ದರು. [ತ್ವರಿತವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕರ್ನಾಟಕಕ್ಕೆ ಆಘಾತ]

Cauvery Issue: Karnataka clarifies that Nariman has not withdrawn as counsel

ಆದರೆ, ಸುಪ್ರೀಂ ಕೋರ್ಟಿನಲ್ಲಿ ಶುಕ್ರವಾರದಂದು ನಡೆದ ವಿಚಾರಣೆ ವೇಳೆ ಕರ್ನಾಟಕದ ಪರ ವಕೀಲರು ಸರಿಯಾದ ವಾದ ಮಂಡಿಸದ ಕಾರಣ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.[ಅ.1ರಿಂದ 6ರವರೆಗೆ ಕಾವೇರಿ ನೀರು ಹರಿಸಿ : ಸುಪ್ರೀಂ ಕೋರ್ಟ್]

Fali S Nariman

* ಸುಪ್ರೀಂ ಆದೇಶದಿಂದಾಗಿ ಈಗ ತಮಿಳುನಾಡಿಗೆ ನೀರು ಬಿಡಲೇಬೇಕು, ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಅರ್ಜಿ ಹಾಕಿಲ್ಲ, ಆದರೆ, ಅರ್ಜಿ ಹಾಕಬಹುದು. ಆದರೆ, ಕಾಲಾವಕಾಶವೇ ಇಲ್ಲ.
* ಉಮಾ ಭಾರತಿ ನೇತೃತ್ವದ ಸಭೆ ವಿಫಲವಾದ ಬಗ್ಗೆ ಅಟಾರ್ನಿ ಜನರಲ್ ಅವರು ಸುಪ್ರೀಂಗೆ ವರದಿ ನೀಡಿದ್ದು, ಈ ಬಗ್ಗೆ ಕೋರ್ಟ್ ಪರಿಶೀಲಿಸುವಂತೆ ಕೋರಬಹುದಾಗಿತ್ತು.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಕರ್ನಾಟಕ ವಕೀಲರ ಆಯೋಗದ ಮುಖ್ಯಸ್ಥರಾದ ಫಾಲಿ ಎಸ್ ನಾರಿಮನ್ ಅವರನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Cauvery Issue: Karnataka clarifies that Nariman has not withdrawn as counsel

ಆದರೆ, ಜಲವಿವಾದದ ವಿಷಯದಲ್ಲಿ ನಾರಿಮನ್ ಅವರು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರು ಮಂಡಿಸಿದ ವಾದ ಸಮರ್ಥವಾಗಿದೆ. ಅವರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ಸದ್ಯಕ್ಕೆ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಶನಿವಾರದಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka clarifies that Nariman has not withdrawn as counsel. He only refrained from making submissions today as Karnataka was not complying with order
Please Wait while comments are loading...