ಕಬಡ್ಡಿ ಆಟಗಾರನ ಪತ್ನಿ ಆತ್ಮಹತ್ಯೆ, ವಿಡಿಯೋ ಸಾಕ್ಷಿಯಲ್ಲಿ ಏನಿದೆ?

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 19: ಪ್ರೋ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ಪರ ಆಡುವ ರಾಷ್ಟೀಯ ಆಟಗಾರ ರೋಹಿತ್ ಕುಮಾರ್ ಅವರ ಪತ್ನಿ ಲಲಿತಾ ಅವರು ದೆಹಲಿಯ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

27 ವರ್ಷ ವಯಸ್ಸಿನ ಲಲಿತಾ ಅವರು ಸುಮಾರು ಎರಡೂವರೆ ಗಂಟೆ ಅವಧಿಯ ವಿಡಿಯೋ ಸಂದೇಶವನ್ನು ನೀಡಿ, ನಂತರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ರೋಹಿತ್ ರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದರ ಬಗ್ಗ್ಗೆ ವಿಡಿಯೋದಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.

Kabaddi Player Rohit Kumar Wife Commits Suicide Leaves Video

ರೋಹಿತ್ ಮನೆಯವರಿಂದ ವರದಕ್ಷಿಣೆ ಕಿರುಕುಳ ಇತ್ತು ಎಂದಿದ್ದಾರೆ. ಲಲಿತಾ ಅವರ ಮೊದಲ ಮದುವೆ ಕೂಡಾ ವರದಕ್ಷಿಣೆ ಪ್ರಕರಣಕ್ಕೆ ಸಿಲುಕಿ ಮುರಿದುಬಿದ್ದಿತ್ತು.

ಪಶ್ಚಿಮ ದೆಹಲಿಯ ನಂಗ್ಲೊಯಿಯಲ್ಲಿ ಲಲಿತಾ ಅವರು ನೆಲೆಸಿದ್ದರು. ರೋಹಿತ್ ಚಿಲ್ಲಾರ್ ಜತೆಗೆ ಇದು ಅವರ ಎರಡನೇ ಮದುವೆಯಾಗಿತ್ತು. ಲಲಿತಾ ಅವರು ಆತ್ಮಹತ್ಯೆಗೆ ಶರಣಾದ ವೇಳೆಯಲ್ಲಿ ರೋಹಿತ್ ಅವರು ಮುಂಬೈನಲ್ಲಿದ್ದರು.

26 ವರ್ಷ ವಯಸ್ಸಿನ ರೋಹಿತ್ ಅವರು 2009ರಲ್ಲಿ ಭಾರತೀಯ ಜಲ ಸೇನೆ ಸೇರಿ ಮುಂಬೈನಲ್ಲಿ ಕಾರ್ಯನಿರ್ವಹಿಸಿದಾರೆ. ಈಗ ಲಲಿತಾ ಅವರ ಸೂಸೈಡ್ ವಿಡಿಯೋ, ಪತ್ರ ಪರಿಶೀಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 27-year-old wife of a national Kabbadi champion allegedly hanged herself in her home in Delhi and left a two-hour long video in which she alleged "mental and physical harassment".
Please Wait while comments are loading...