ಜೆಎನ್‌ಯು ಗಲಭೆ; ಹಾಸ್ಟೆಲ್ ವಾರ್ಡನ್ ರಾಜೀನಾಮೆ
ನವದೆಹಲಿ, ಜನವರಿ 06 : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಬರಮತಿ ಹಾಸ್ಟೆಲ್ ವಾರ್ಡನ್ ರಾಜೀನಾಮೆ ನೀಡಿದರು. ಭಾನುವಾರ ರಾತ್ರಿ ಹಾಸ್ಟೆಲ್ ಆವರಣದಲ್ಲಿ ಗಲಭೆ ನಡೆದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು.
ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದೇವೆ ಎಂದು ವಾರ್ಡನ್ ಹೇಳಿದ್ದಾರೆ. ಜೆಎನ್ ಹಾಸ್ಟೆಲ್‌ನಲ್ಲಿನ ರೂಂಗಳಿಗೆ ನುಗ್ಗಿ ದಾಂಧಲೆ ನಡೆಸಿ, ಗಾಜುಗಳನ್ನು ಪುಡಿ ಮಾಡಲಾಗಿತ್ತು.
ರಾಮಾವಥಾರ್ ಮೀನಾ, ಪ್ರಕಾಶ್ ಚಂದ್ರ ಸಾಹೋ ಎಂಬ ಇಬ್ಬರು ವಾರ್ಡನ್ ರಾಜೀನಾಮೆ ನೀಡಿದ್ದಾರೆ. ಗಲಭೆ ಬಳಿಕ ವಿದ್ಯಾರ್ಥಿಗಳು ತಮ್ಮನ್ನು ಸುತ್ತುವರೆದು ರಕ್ಷಣೆ ಏಕೆ ನೀಡಲಿಲ್ಲ? ಎಂದು ಪ್ರಶ್ನಿಸಿದರು ಎಂದು ಇಬ್ಬರೂ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಭಾನುವಾರ ರಾತ್ರಿ ಮುಸುಕುಧಾರಿಗಳು ಹಾಸ್ಟೆಲ್ ಮೇಲೆ ದಾಳಿ ಮಾಡಿದ್ದರು. ವಾರ್ಡನ್‌ಗಳಿಗೆ ಅವರು ಬೆದರಿಕೆ ಹಾಕಿದ ಬಳಿಕ ಇಬ್ಬರು ಕ್ಯಾಂಪಸ್‌ಗೆ ಓಡಿದ್ದರು. ಮುಸುಕುಧಾರಿಗಳು ಹಾಸ್ಟೆಲ್ ರೂಂನಲ್ಲಿ ದಾಂಧಲೆ ಮಾಡಿದ್ದರು. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು.
ಜೆಎನ್‌ಯು ಆವರಣದಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ವಿವಿಗೆ ಬಿಗಿ ಪೊಲೀಸ್ ಬಂದೋಸ್ತ್ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.












Click it and Unblock the Notifications