Get Updates
Get notified of breaking news, exclusive insights, and must-see stories!

ಮೂರು ತಿಂಗಳಿನಿಂದ ಸಂಬಳವಿಲ್ಲ: ಸಂಕಷ್ಟದಲ್ಲಿ ಜೆಟ್ ಏರ್‌ವೇಸ್

ಮುಂಬೈ, ಮಾರ್ಚ್ 19: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್‌ವೆಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ವೈಮಾನಿಕ ಹಾರಾಟದ ವೆಚ್ಚವನ್ನು ಭರಿಸಲಾಗದೆ ಏರ್‌ಲೈನ್ಸ್ ತತ್ತರಿಸಿದ್ದು, ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈಗಾಗಲೇ ಸಂಸ್ಥೆ ಸುಮಾರು 41 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತದ ಸಾಲದಲ್ಲಿ ಕಂಪೆನಿ ಸಿಲುಕಿದ್ದು, ಬ್ಯಾಂಕುಗಳು, ಪೂರೈಕೆದಾರರು, ಪೈಲಟ್‌ಗಳು ಮತ್ತು ಇತರೆ ಸಿಬ್ಬಂದಿಗೆ ಹಣ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಈ ನಡುವೆ ಸಂಸ್ಥೆಯನ್ನು ಉಳಿಸಲು ಮಧ್ಯಪ್ರವೇಶಿಸಿರುವ ಕೇಂದ್ರ ಸರ್ಕಾರ, ಸಂಸ್ಥೆಗೆ ಆರ್ಥಿಕ ಸಹಾಯ ಮಾಡಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಲಹೆ ನೀಡಿದೆ.

Jet airways salary due 41 flights forced to ground

ವೇತನ ನೀಡದೆ ಇರುವುದು ಸಿಬ್ಬಂದಿಯ ಮಾನಸಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದರಿಂದ ವಿಮಾನಗಳ ಕಾರ್ಯಾಚರಣೆಗೆ ಅಪಾಯ ಎದುರಾಗಿದೆ ಎಂದು ನೌಕರರ ಒಕ್ಕೂಟ ಹೇಳಿದೆ.

ಇದುವರೆಗೂ ಮೂರು ತಿಂಗಳ ಸಂಬಳ ಬಾಕಿ ಉಳಿದುಕೊಂಡಿದೆ ಎಂದು ಕಂಪೆನಿಯ ನಿರ್ವಹಣಾ ಎಂಜಿನಿಯರ್‌ಗಳ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರದಲ್ಲಿ ಆರೋಪಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+