• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಟ್ ಏರ್ವೇಸ್ ಗೆ ಮತ್ತೆ ಆಘಾತ: ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ

|

ನವದೆಹಲಿ, ಮೇ 14: ಒಂದರ ಮೇಲೊಂದು ಆಘಾತ ಎದುರಿಸುತ್ತಿರುವ ಜೆಟ್ ಏರ್ವೇಸ್ ಗೆ ಇದೀಗ ಮತ್ತೊಂದು ಕಹಿ ಸನ್ನಿವೇಶ ಎದುರಾಗಿದೆ. ಜೆಟ್ ಏರ್ವೇಸ್ ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಡೆಪ್ಯುಟಿ ಸಿಇಒ ಅಮಿತ್ ಅಗರ್ವಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2015 ರಿಂದಲೂ ಜೆಟ್ ಏರ್ವೇಸ್ ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮಿತ್ ಅಗರ್ವಾಲ್, ಸೋಮವಾರವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 'ವೈಯಕ್ತಿಕ ಕಾರಣಗಳಿಂದ ನಾನು ಸಂಸ್ಥೆಗೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಅಗರ್ವಾಲ್ ಹೇಳಿದ್ದಾರೆ.

ಜೆಟ್ ಏರ್‌ವೇಸ್ ಷೇರು ಮಾರಾಟ: ಖರೀದಿಗೆ ಭಾರತೀಯರ ನಿರಾಸಕ್ತಿ

ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ ನ ಷೇರುಗಳೂ ಮಕಾಡೆ ಮಲಗಿದ್ದು, ಸಿಬ್ಬಂದಿಗೆ ವೇತನ ನೀಡುವುದಕ್ಕೂ ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್

ಭಾರತದಲ್ಲಿ ಅತೀ ದೀರ್ಘಕಾಲ ವಿಮಾನಯಾನ ಸೇವೆ ಸಲ್ಲಿಸಿದ ಕೀರ್ತಿಯನ್ನು ಪಡೆದಿದ್ದ ಜೆಟ್ ಏರ್ವೇಸ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಇತ್ತೀಚೆಗೆ ಶೇ. 75 ರಷ್ಟು ಜೆಟ್ ಏರ್ವೇಸ್ ಷೇರುಗಳನ್ನು ಮಾರಾಟಕ್ಕಿಟ್ಟರೂ, ಕೊಳ್ಳಲು ಯಾರೂ ಆಸಕ್ತಿ ತೋರದಿರುವುದು ಸಂಸ್ಥೆಗೆ ಸಾಕಷ್ಟು ನೋವುಂಟು ಮಾಡಿತ್ತು.

English summary
Jet Airways Deputy Chief Executive Officer and Chief Financial Officer, Amit Agrawal has resigned due to personal reasons with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X