ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು

Recommended Video

      ಬಿಜೆಪಿಗೆ ಚಾಲೆಂಜ್ ಮಾಡಿದ ಎಚ್ ಡಿ ದೇವೇಗೌಡ | Oneindia Kannada

      ನವದೆಹಲಿ, ಫೆಬ್ರವರಿ 7: ಬಿಜೆಪಿ ನಾಯಕರಿಗೆ ಶಕ್ತಿಯಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸವಾಲು ಹಾಕಿದ್ದಾರೆ.

      ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯವರು ಸುಮ್ಮನೆ ಹೇಳುತ್ತಲೇ ಇದ್ದಾರೆ. ಸಮ್ಮಿಶ್ರ ಸರ್ಕಾರದ ಭವಿಷ್ಯ ಸದನದಲ್ಲಿಯೇ ನಿರ್ಧಾರವಾಗಲಿ. ಬಿಜೆಪಿ ಮುಖಂಡರ ನಡವಳಿಕೆ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಅದೇನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಸರ್ಕಾರಕ್ಕೆ ಬಹುಮತದ ಕೊರತೆಯುಂಟಾಗಿ ಅಲ್ಪ ಮತಕ್ಕೆ ಕುಸಿಯುವಂತಹ ಸ್ಥಿತಿ ಎದುರಾಗಿದ್ದರೆ ಅದನ್ನು ಸದನದಲ್ಲಿ ಅವರು ಸಾಬೀತು ಮಾಡಲಿ ಎಂದು ಸವಾಲು ಒಡ್ಡಿದರು.

      ಅವಿಶ್ವಾಸ ಗೊತ್ತುವಳಿ ಮಂಡಿಸುವುದನ್ನು ನಾನು ಬೇಡ ಎನ್ನುವುದಿಲ್ಲ. ಪ್ರತಿ ಶಾಸಕರಿಗೂ ಒಂದಲ್ಲ ಒಂದು ಕೆಲಸಗಳಿರುತ್ತವೆ. ಆ ಕಾರಣದಿಂದ ಅವರು ಕಲಾಪಕ್ಕೆ ಗೈರು ಹಾಜರಾಗಿರುತ್ತಾರೆ. ಸರ್ಕಾರದ ವಿರುದ್ಧದ ಸಿಟ್ಟಿನಿಂದ ಅವರು ಸದನಕ್ಕೆ ಬಂದಿಲ್ಲ, ಸರ್ಕಾರಕ್ಕೆ ಅವರ ಬೆಂಬಲ ಇಲ್ಲ ಎಂಬ ಅನುಮಾನ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದರು.

      JDS chief HD Deve Gowda challenged bjp on no confidence motion against coalition government

      ಕೆಲವು ಶಾಸಕರು ಅಧಿವೇಶನದಲ್ಲಿ ಭಾಗವಹಿಸಿಲ್ಲ ಎಂಬ ಮಾತ್ರಕ್ಕೆ ಅವರು ಅತೃಪ್ತಿ ಹೊಂದಿದ್ದಾರೆ ಎಂದರ್ಥವಲ್ಲ ಎಂದು ಹೇಳಿದರು.

      ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಇನ್ನೂ ಮಾತುಕತೆ ನಡೆದಿಲ್ಲ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+