ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಸಂಸತ್ ಭವನದ ಎದುರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಬಂಧನ

|
Google Oneindia Kannada News

ನವದೆಹಲಿ, ಆಗಸ್ಟ್ 26: ದೆಹಲಿಯ ಸಂಸತ್ ಭವನದ ಎದುರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಿಆರ್‌ಪಿಎಫ್ ಯೋಧರು ಬಂಧಿಸಿದ್ದಾರೆ.

ಆತ ಜಮ್ಮು-ಕಾಶ್ಮೀರದ ವ್ಯಕ್ತಿ ಎಂದು ತಿಳಿದುಬಂದಿದೆ. ದೆಹಲಿಯ ವಿಜಯ್ ಚೌಕ್ ಬಳಿ ಆತನನ್ನು ಬಂಧಿಸಲಾಗಿದೆ. ಆತನ ಬಳಿ ಎರಡು ಗುರುತಿನ ಚೀಟಿಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು; ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸದಸ್ಯನ ಬಂಧನ ಬೆಂಗಳೂರು; ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸದಸ್ಯನ ಬಂಧನ

ಎರಡೂ ಐಡಿಗಳಲ್ಲಿ ಬೇರೆ ಬೇರೆ ಹೆಸರಿದ್ದು, ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದರುವುದು ಮತ್ತಷ್ಟು ಅನುಮಾನಕ್ಕೀಡು ಮಾಡಿದೆ. ದೆಹಲಿ ಪೊಲೀಸರಿಗೆ ಈತನನ್ನು ಹಸ್ತಾಂತರಿಸಲಾಗಿದೆ.

Jammu And Kashmir Man Arrested By CRPF Near Parliament Building

ವರದಿಗಳ ಪ್ರಕಾರ ಬಂಧಿತ ವ್ಯಕ್ತಿ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನಾಗಿದ್ದಾನೆ. ಸಂಸತ್ ಭವನದ ಎದುರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕರ್ತವ್ಯ ನಿರತ ಸಿಆರ್ ಪಿಎಫ್ ಸಿಬ್ಬಂದಿ ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ ಪೊಲೀಸರಿಗೆ ಈ ವ್ಯಕ್ತಿ ತನ್ನ ಬಗ್ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆ. ಆತನಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೋಡ್ ವರ್ಡ್ ಗಳನ್ನು ಹೊಂದಿದ ಮಾಹಿತಿಯೊಂದು ಲಭ್ಯವಾಗಿದೆ.

ಬಂಧಿತ ವ್ಯಕ್ತಿಯಿಂದ ಎರಡು ಐಡಿ ಕಾರ್ಡ್ ಗಳು- ಒಂದು ಆಧಾರ್ ಕಾರ್ಡ್ ಹಾಗೂ ವಾಹನ ಚಾಲನೆ ಪರವಾನಗಿಯನ್ನೂ ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 14ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ, ಅಕ್ಟೋಬರ್ 1ರವರೆಗೆ ಇರಲಿದೆ, ಶನಿವಾರ ಭಾನುವಾರ ಕೂಡ ರಜೆ ಇರುವುದಿಲ್ಲ, ದಿನಕ್ಕೆ 4 ಗಂಟೆಗಳು ಮಾತ್ರ ಕಲಾಪ ನಡೆಯಲಿದ.

English summary
The Central Reserve Police Force (CRPF) has arrested a suspicious person from Delhi's Vijay Chowk, sources said on Wednesday (August 26, 2020).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X