ವಿಷ ಹಾಕಿ, ಲಾರಿ ಹರಿಸಿ ಸಾಯಿಸುವ ಐಸಿಸ್ ನ ವಿಕೃತ ಯೋಜನೆ ಬಯಲು!
ನವದೆಹಲಿ, ನವೆಂಬರ್ 15: ವಾರ್ಷಿಕ ಧಾರ್ಮಿಕ ಉತ್ಸವಗಳಾದ ತ್ರಿಶೂರ್ ಪೂರಂ ಮತ್ತು ಕುಂಭ ಮೇಳ ಸೇರಿದಂತೆ ದೇಶದ ಹಲವೆಡೆ ದಾಳಿ ನಡೆಸಲು ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ) ಯೋಜನೆ ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯು ಐಸಿಸ್ ಬಿಡುಗಡೆಮಾಡಿದ ಆಡಿಯೋ ಒಂದರಿಂದ ಲಭ್ಯವಾಗಿದೆ.
ಮಲಯಾಳಿ ಭಾಷೆಯಲ್ಲಿರುವ ಈ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲೆಡೆ ಹಂಚಲ್ಪಡುತ್ತಿದೆ. ಈ ಧ್ವನಿ ಐಸಿಸ್ ಸೇರುವುದಕ್ಕೆಂದು ಭಾರತ ಬಿಟ್ಟು ತೆರಳಿದ ಕಾಸರಗೋಡಿನ ರಶಿದ್ ಅಬ್ದುಲ್ಲಾ ನದ್ದು ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಅಮೆರಿಕದ ಲಾಸ್ ವೆಗಾಸ್ ನಲ್ಲಿ ಸಂಗೀತ ಕಚೇರಿಯೊಂದರ ಮೇಲೆ ನಡೆದ ಒಂಟಿ ತೋಳ ಮಾದರಿಯ ದಾಳಿಯನ್ನೇ ಭಾರತದಲ್ಲೂ ಮುಂದುವರಿಸುವ ಬಗ್ಗೆ ಈ ಆಡಿಯೋದಲ್ಲಿ ಸೂಚನೆ ನೀಡಲಾಗಿದೆ.
ಇದರಲ್ಲಿ ಕುರಾನಿನ ಕೆಲವು ಸಾಲುಗಳನ್ನೂ ಉಚ್ಚರಿಸಲಾಗಿದೆ. ಅಲ್ಲದೆ, ತ್ರಿಶೂರ್ ಪೂರಂ ಮತ್ತು ಕುಂಭ ಮೇಳಗಳಲ್ಲಿ ಆಹಾರಕ್ಕೆ ವಿಷ ಸೇರಿಸಿ ಜನರನ್ನು ಕೊಲ್ಲುವ ಬಗ್ಗೆಯೂ ರಶಿದ್ ಅಬ್ದುಲ್ಲಾ ತನ್ನ ಶಿಷ್ಯರಿಗೆ ಆದೇಶ ನೀಡಿದ್ದಾನೆ. ನಂತರ ಈ ಧಾರ್ಮಿಕ ಉತ್ಸವಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಜನರ ಮೇಲೆ ಲಾರಿಗಳನ್ನು ಹರಿಸಿ ಸಾಯಿಸಿ ಎಂದೂ ಆತ ಆಡಿಯೋದಲ್ಲಿ ಹೇಳಿದ್ದಾನೆ.

ವಿಷ ಹಾಕಿ, ಲಾರಿ ಹರಿಸಿ..!
"ಮೊದಲು ನಿಮ್ಮ ಬುದ್ಧಿಯನ್ನು ಉಪಯೋಗಿಸುವುದನ್ನು ಕಲಿಯಿರಿ, ಲಾಸ್ ವೆಗಾಸ್ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ನಮ್ಮ ಬೆಂಬಲಿಗನೊಬ್ಬ ಹಲವರನ್ನು ಸಾಯಿಸಿದ. ಅದೇ ರೀತಿಯ ಒಂಟಿತೋಳ ಮಾದರಿಯ ದಾಳಿ ಆರಂಭಿಸಿ. ಕುಂಭಮೇಳ, ತ್ರಿಶೂರ್ ಪೂರಂ ಗಳಲ್ಲಿ ಮೊದಲು ಆಹಾರಕ್ಕೆ ವಿಷ ಹಾಕಿ, ನಂತರ ಅವರ ಮೇಲೆ ಲಾರಿಗಳನ್ನು ಹರಿಸಿ. ಜಗತ್ತಿನ ಹಲವು ಭಾಗಗಳ ಐಸಿಸ್ ಇದನ್ನೇ ಮಾಡುತ್ತಿದೆ" ಎಂದು ಈ ಆಡಿಯೋದಲ್ಲಿ ಹೇಳಲಾಗಿದೆ.

ಒಂದು ರೈಲನ್ನು ಹಳಿತಪ್ಪಿಸುವುದಕ್ಕೆ ಸಾಧ್ಯವಿಲ್ಲವೇ?!
"ಮೇಲಿನ ಯಾವ ಕೆಲಸವ ಆಗದಿದ್ದರೆ, ಕಡೆ ಪಕ್ಷ ಒಂದು ರೈಲನ್ನು ಹಳಿತಪ್ಪಿಸುವುದಕ್ಕಾದರೂ ನಿಮಗೆ ಸಾಧ್ಯವಿಲ್ಲವೇ? ಅಥವಾ ಒಂದು ಚಾಕುವನ್ನಾದರೂ ಉಪಯೋಗಿಸುವುದಕ್ಕೆ ಬರುವುದಿಲ್ಲವೆ" ಎಂದು ಕೇಳಿರುವ ರಶೀದ್, ಐಸಿಸ್ ಬೆಂಬಲಿಗರಲ್ಲಿ ಮತ್ತಷ್ಟು ವಿಕೃತ ಮನಸ್ಥಿತಿಯನ್ನು ಬಿತ್ತುವ ಪ್ರಯತ್ನ ಮಾಡಿದ್ದಾನೆ.

ಅಫ್ಘಾನಿಸ್ತಾನದಿಂದ ಹೊರಟ ಧ್ವನಿ!
ಈ ಆಡಿಯೋ ಕ್ಲಿಪ್ ನಲ್ಲಿರುವ ಧ್ವನಿಯ ಮೂಲ ಹುಡುಕಿದಾಗ, ಟೆಲಿಗ್ರಾಮ್ ಮೆಸೆಂಜರ್ ನಿಂದ್ ಅಫ್ಘಾನಿಸ್ಥಾನದಿಂದ ಈ ಧ್ವನಿಮುದ್ರಿತ ಸಂದೇಶ ಹೊರಟಿದೆ ಎಂಬುದನ್ನು ಕೇರಳ ಪೊಲೀಸರು ಪತ್ತೆ ಮಾಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆ ಸೇರಿರುವ ಕಾಸರಗೋಡಿನ ರಶೀದ್ ಅಬ್ದುಲ್ಲಾ ದನಿ ಇದು ಎಂಬುದು ಪತ್ತೆಯಾಗಿದೆ.

ಒಂಟಿತೋಳ ಮಾದರಿಯ ದಾಳಿ
ಕಳೆದ ಅಕ್ಟೋಬರ್ 1 ರಂದು ಲಾಸ್ ವೆಗಾಸ್ ನಲ್ಲಿ 22,000 ಕ್ಕೂ ಹೆಚ್ಚು ಜನ ಸೇರಿದ್ದ ಸಂಗೀತ ಕಚೇರಿಯೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 59 ಜನ ಬಲಿಯಾಗಿದ್ದರು. ಈ ದಾಳಿಯಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಯ ಕೈವಾಡವಿಲ್ಲ ಎಂದು ಅಮೆರಿಕ ಹೇಳಿದ್ದರೂ, ಈ ದಾಳಿ ನಡೆಸಿದ್ದು ತನ್ನ ಬೆಂಬಲಿಗ ಎಂದು ಐಸಿಸ್ ಹೇಳಿತ್ತು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications