IRCTC ಹಗರಣ: ರಾಬ್ರಿ, ತೇಜಸ್ವಿ ಯಾದವ್ ಗೆ ಜಾಮೀನು
ನವದೆಹಲಿ, ಆಗಸ್ಟ್ 31: ಐಆರ್ ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಆರ್ ಜೆಡಿ ಮುಖಂಡರಾದ ರಾಬ್ರಿದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ದೆಹಲಿ ನ್ಯಾಯಾಲಯವೊಂದು ಜಾಮೀನು ನೀಡಿದೆ.
2006 ರಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೋರೇಶನ್ ಹೊಟೇಲ್ ಗಳಿಗೆ ಟೆಂಡರ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿತ್ತು.
ಈ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ, ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ, ರಾಬ್ರಿ ದೇವಿ ಅವರ ಪತಿ ಲಾಲೂ ಪ್ರಸಾದ್ ಅವರ ಹೆಸರೂ ಕೇಳಿಬಂದಿತ್ತು.

2004-2009 ರ ವರ ಅವಧಿಯಲ್ಲಿ, ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿ ಐಆರ್ ಸಿಟಿಸಿ ಹೊಟೇಲ್ ನಿರ್ವಹಣೆಯ ಹೊಣೆಯನ್ನು ಖಾಸಗಿಕಂಪನಿಗಳಿಗೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಹುಕೋಟಿ ಅವ್ಯವಹಾರ ನಡೆದಿತ್ತು.
ಮೇವು ಹಗರಣದ ಆರೋಪಿಯಾಗಿರುವ ಲಾಲೂ ಪ್ರಸಾದ್ ಯಾದವ್ ಅವರು ಈ ಪ್ರಕರಣದ ಆರೋಪಿಯಾಗಿದ್ದು, ಅವರಿಗೂ ಜಾಮೀನು ದೊರೆತಿದೆ. ಆದರೆ ಮೇವು ಹಗರಣದಲ್ಲಿ ದೋಷಿಯಾಗಿರುವ ಅವರು ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.












Click it and Unblock the Notifications