ಟೆಕ್ಕಿ ಗಿರೀಶ್ ಹತ್ಯೆ: ಶುಭಾಗೆ ಸುಪ್ರೀಂನಿಂದ ಜಾಮೀನು
ನವದೆಹಲಿ, ಆ.11: ಭಾವಿ ಪತಿಯನ್ನು ಕೊಲೆಗೈದ ಆರೋಪದ ಮೇಲೆ ಜೈಲು ಸೇರಿದ್ದ ಶುಭಾ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.ಇಂಟೆಲ್ ಸಂಸ್ಥೆ ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಅಪಾದಿತೆ ವಕೀಲೆ ಶುಭಾಗೆ ಜಾಮೀನು ಸಿಕ್ಕಿದೆ.
ಬಿ.ವಿ ಗಿರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಭಾ ಹಾಗೂ ನಾಲ್ವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೀವಾವಧಿ ಶಿಕ್ಷೆ ಪ್ರಶ್ನಿಸಿ ಶುಭಾ ಅವರ ವಕೀಲ ಸಿವಿ ನಾಗೇಶ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆದು, ಶುಭಾ ಅವರಿಗೆ ಜಾಮೀನು ದೊರೆತಿದೆ. ನ್ಯಾ.ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠ ಶುಭಾ ಅವರಿಗೆ ಜಾಮೀನು ನೀಡಿದೆ.[ಶುಭಾಗೆ ಜಾಮೀನು ಸಿಕ್ಕಿದ್ದೇಕೆ?]

ಕೇಸ್ ಹಿಸ್ಟರಿ: 2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಆದೇಶ ಹೊರಡಿಸಿತ್ತು.ಈ ಹಿಂದೆ ನವೆಂಬರ್ 11, 2011ರಲ್ಲಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಶುಭಾಗೆ ಬೇಲ್ ನೀಡಲು ನಿರಾಕರಿಸಿತ್ತು.
ಶುಭಾ ತನ್ನ ಪ್ರಿಯಕರ ಅರುಣ್ ನನ್ನು ವರಿಸಬೇಕಿದ್ದರೆ, ನಿಶ್ಚಿತಾರ್ಥ ನಂತರ ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ ಎನ್ನಬಹುದಿತ್ತು. ಆದರೆ, ಕೊಲೆ ಮಾಡಿದ್ದೇಕೆ? ಕೊಲೆ ಮಾಡಿದರೂ ಯಾವುದೇ ಭಾವನೆ ವ್ಯಕ್ತಪಡಿಸದೆ ಕಲ್ಲು ಮನಸ್ಸು ಮಾಡಿಕೊಂಡಿದ್ದ ಶುಭಾ ಇಷ್ಟು ವರ್ಷ ಜೈಲಿನಲ್ಲಿ ಪಾಪಪ್ರಜ್ಞೆಯಿಂದ ಕಾಲದೂಡಿದ್ದು ಎಂಬ ಕಾರಣದಿಂದ ಮಾನವೀಯತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.












Click it and Unblock the Notifications