ಜನವರಿ 1 ರಂದು ದಾಖಲೆ ಬರೆದ ಭಾರತ: ಯಾವುದರಲ್ಲಿ ಗೊತ್ತಾ?

ನವದೆಹಲಿ, ಜನವರಿ 02: ಭಾರತವು ಹೊಸ ವರ್ಷದ ದಿನವಾದ ಜನವರಿ 01 ರಂದು ಹೊಸ ದಾಖಲೆ ಬರೆದಿದೆ, ಅದು ವಿಶ್ವದಲ್ಲೇ ಅತ್ಯಧಿಕ ಶಿಶುಗಳ ಜನನದಲ್ಲಿ ಚೀನಾವನ್ನೂ ಹಿಂದಿಕ್ಕಿ ದಾಖಲೆ ನಿರ್ಮಿಸಿದೆ.

ಹೌದು, ಹೊಸ ವರ್ಷದ ಮೊದಲ ದಿನವಾದ ಜನವರಿ 01 ರಂದು ಭಾರತದಲ್ಲಿ ಒಟ್ಟು 67,385 ಶಿಶುಗಳು ಜನಿಸಿವೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ನಿಧಿ(ಯುನಿಸೆಫ್) ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ದೊರೆತಿದೆ.

67,385 ಇಷ್ಟೊಂದು ಸಂಖ್ಯೆಯ ಶಿಶುಗಳನ್ನು ಬರಮಾಡಿಕೊಂಡಿರುವ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ ಲಬಿಸಿದೆ. ಚೀನಾ (46,299) ನಂತರದ ಸ್ಥಾನದಲ್ಲಿದೆ. ನೈಜೀರಿಯಾ(26,639) ಮೂರನೆಯ ಸ್ಥಾನ, ಪಾಕಿಸ್ತಾನ(16,787), ಇಂಡೋನೇಷಿಯಾ(13,020) ಹಾಗೂ ಅಮೆರಿಕ(10,450) ನಂತರದ ಸ್ಥಾನದಲ್ಲಿವೆ ಎಂದು ಯುನೆಸೆಫ್ ಹೇಳಿದೆ.

India Wrote a Record On January 1: Do You Know What?

೨೦೨೦ ರ ಜಮವರಿ ಒಂದರಂದು ಪೆಸಿಫಿಕ್ ದ್ವೀಪರಾಷ್ಟ್ರದ ಫಿಜಿಯಲ್ಲಿ ಮೊದಲ ಶಿಶು ಜನಿಸಿದೆ. ಅದೇ ದಿನದ ಕೊನೆಯ ಮಗು ಅಮೆರಿಕದಲ್ಲಿ ಜನಿಸಿದೆ. ಭಾರತದ ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಹಚ್ಚು ಮಕ್ಕಳು ಜನಿಸಿವೆ.

ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ ಜನವರಿ ಒಂದರಂದೇ ಬಹುತೇಕ ಗರ್ಭವತಿ ಮಹಿಳೆಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಮ್ಮ ಮಕ್ಕಳು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸಿಜೇರಿಯನ್ ಮಾಡಿಸಿಕೊಳ್ಳಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+