ಎಎನ್ 32 ವಿಮಾನಾಪಘಾತ ಸ್ಥಳದಿಂದ ಯೋಧರ ಶವ ಹೊರಕ್ಕೆ
ನವದೆಹಲಿ, ಜೂನ್ 20: ಜೂನ್ ಮೊದಲ ವಾರದಲ್ಲಿ ಅಪಘಾತಕ್ಕೀಡಾಗಿದ್ದ ವಾಯುಪಡೆಯ ಎಎನ್ 32 ವಿಮಾನದಲ್ಲಿದ್ದ 13 ಮಂದಿಯ ಮೃತದೇಹವನ್ನು ಘಟನಾ ಸ್ಥಳದಿಂದ ಹೊರತೆಗೆಯಲಾಗಿದೆ.
ಜೂನ್ 3ರಂದು ಮಧ್ಯಾಹ್ನ 12.35ರ ಸುಮಾರಿಗೆ ಅಸ್ಸಾಂನ ಜೊಹ್ರಾತ್ ನ ವಾಯುನೆಲೆಯಿಂದ ಚೀನಾ ಗಡಿಯಿಂದ ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಗೆ ಆಂಟೊನೊವ್ ಎಎನ್-32 ಸೇನಾ ಸಾರಿಗೆ ಯುದ್ಧ ವಿಮಾನ ಪ್ರಯಾಣ ಬೆಳೆಸಿತ್ತು. ಇದರಲ್ಲಿ 8 ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಟೇಕಾಫ್ ಆದ ಕೆಲವೇ ಸಮಯದಲ್ಲಿ ಕಣ್ಮರೆಯಾಗಿದ್ದ ಈ ವಿಮಾನದ ಅವಶೇಷಗಳು, ನಂತರ ಜೂನ್ 11 ರಂದು ಪತ್ತೆಯಾಗಿತ್ತು.
ವಿಮಾನಲ್ಲಿದ್ದ 13 ಜನರೂ ಸಾವಿಗೀಡಾಗಿದ್ದರಾದರೂ, ಅವರ ದೇಹವನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಶವಗಳನ್ನೂ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಎಸ್/ಎಲ್ ಎಚ್ ವಿನೋದ್, ಎಫ್/ಎಲ್ ಆರ್ ಥಾಪಾ, ಎಫ್/ಎಲ್ ಎ ತನ್ವಾರ್, ಎಫ್/ಎಲ್ ಎಸ್ ಮೊಹಾಂತಿ, ಎಫ್/ಎಲ್ ಎಂಕೆ ಗರ್ಗ್, ಡಬ್ಲ್ಯೂಒ ಕೆಕೆ ಮಿಶ್ರಾ, ಎಸ್‌ಜಿಟಿ ಅನೂಪ್ ಕುಮಾರ್, ಸಿಪಿಎಲ್ ಶೆರಿನ್, ಎಲ್‌ಎಸಿ ಎಸ್‌ಕೆ ಸಿಂಗ್, ಎಲ್‌ಎಸಿ ಪಂಕಜ್, ಎನ್‌ಸಿ (ಇ) ಪುಟಾಲಿ ಮತ್ತು ಎನ್‌ಸಿ (ಇ) ರಾಜೇಶ್ ಕುಮಾರ್ ಎಂಬುವವರೇ ಎನ್ನಲಾಗಿದೆ.












Click it and Unblock the Notifications