ದೆಹಲಿ ಹತ್ಯೆಗೆ ತಿರುವು : ಪತ್ನಿಯ ಕೊಂದಿದ್ದು ಗಂಡನೇ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 26 : ವಿವಾಹಿತ ಮಹಿಳೆಯೋರ್ವರನ್ನು ಅವರ ಗಂಡ ಮತ್ತು ಒಂದು ವರ್ಷದ ಮಗನೆದುರೇ ಹತ್ಯೆಗೈದಿದ್ದ ಪ್ರಕರಣ ಈಗ ಹೊಸ ತಿರುವನ್ನು ಪಡೆದುಕೊಂಡಿದೆ.

ದೆಹಲಿ: ಪತಿ ಮತ್ತು ಮಗನೆದುರೇ ಮಹಿಳೆಗೆ ಗುಂಡಿಕ್ಕಿ ಹತ್ಯೆ

ಆ ಮಹಿಳೆಯ ಗಂಡ ತಾನೇ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. 34 ವರ್ಷದ ಪ್ರಿಯಾ ಮೆಹ್ತಾರನ್ನು ಆಕೆಯ ಮುಖದ ಮತ್ತು ತಲೆಗೆ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.

Husband confesses of killing wife in Delhi

ಈ ಕೋಲ್ಡ್ ಬ್ಲಡೆಡ್ ಮರ್ಡರ್ ದೆಹಲಿಯನ್ನು ತಲ್ಲಣಗೊಳ್ಳುವಂತೆ ಮಾಡಿತ್ತು. ಆರಂಭದಲ್ಲಿ ಯಾರೋ ಆಗಂತುಕರು ತನ್ನ ಹೆಂಡತಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಗಂಡ ಪಂಕಜ್ ಮೆಹ್ತಾ ಆರೋಪಿಸಿದ್ದರು.

ತಾನು ಕೆಲವೊಬ್ಬರಿಂದ 40 ಲಕ್ಷ ರುಪಾಯಿ ಸಾಲ ಪಡೆದಿದ್ದು, ಅವರು ಹಣ ವಾಪಸ್ ನೀಡುವಂತೆ ತಮ್ಮನ್ನು ಹೆದರಿಸುತ್ತಿದ್ದಾರೆ ಎಂದು ಪಂಕಜ್ ಮೆಹ್ತಾ ಆರೋಪಿಸಿದ್ದರು. ಆಗಂತುಕರು ತಮ್ಮ ಕಾರಿನ ಗಾಜಿನ ಕಿಟಕಿಯನ್ನು ಒಡೆದು ಹತ್ಯೆಗೈಗಿದ್ದಾರೆ ಎಂದು ಪಂಕಜ್ ಮೆಹ್ತಾ ಪೊಲೀಸರಿಗೆ ದೂರು ನೀಡಿದ್ದರು.

ತನ್ನ ಹೆಂಡತಿಯನ್ನು ಆಗಂತುಕರು ಗುಂಡಿಟ್ಟು ಹತ್ಯೆಗೈಯುತ್ತಿದ್ದಂತೆ ತಾವು ಕಾರನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದೆ. ಅಲ್ಲಿಗೆ ಬಂದಾಗ ಹೆಂಡತಿ ಕೊನೆಯುಸಿರೆಳೆದಿದ್ದಳು ಎಂದು ಪಂಕಜ್ ಹೇಳಿದ್ದರು. ಪಂಕಜ್ ಅವರು ದೆಹಲಿಯಲ್ಲಿ ಹೋಟೆಲೊಂದನ್ನು ತೆರೆದಿದ್ದು, ಭಾರೀ ನಷ್ಟದಿಂದಾಗಿ ಅದನ್ನು ಬಂದ್ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The husband of a young woman who was shot dead in her car in Delhi while they were heading home with their young son has reportedly confessed to the crime. Priya Mehta was shot in the head in her car. Husband had stated that some money lenders were threatening him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ