ವಿಡಿಯೋ : ತನ್ನ ಮಗುವನ್ನೇ ಮೆಟ್ಟಿಲ ಮೇಲಿಂದ ಬಿಸಾಕಿದ ತಾಯಿ

Posted By:
Subscribe to Oneindia Kannada

ನವದೆಹಲಿ, ಜನವರಿ 27 : ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಎಂಬುದು ಹಳೆಯ ಗಾದೆ. ಈ ಗಾದೆಯನ್ನು ನಿಜ ಮಾಡಲೋ ಎಂಬಂತೆ ನಿರ್ದಯಿ ತಾಯಿಯೊಬ್ಬಳು ತನ್ನ ಮಗುವನ್ನು ಅಟ್ಟದ ಮೇಲಿಂದ ಬಿಸಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ಹೃದಯ ಹಿಂಡಿ ಹಿಪ್ಪೆ ಮಾಡುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೀಕ್ಷಕರನ್ನು ಬೆಚ್ಚಿ ಬೀಳಿಸುವಂತಿದೆ. ಗಂಡನ ಜೊತೆ ಶರಂಪರ ಜಗಳವಾಡುತ್ತಿದ್ದ ತಾಯಿ ಸಿಟ್ಟಿನ ಭರದಲ್ಲಿ ತನ್ನ ಮಗುವನ್ನೆತ್ತಿಕೊಂಡು ಮೆಟ್ಟಿಲಿಂದ ತಳ್ಳಿಬಿಟ್ಟಿದ್ದಾಳೆ.

Horrifying video : Mother flings her own child down the stairs

ಎರಡೂವರೆ ವರ್ಷದ ಮಗುವನ್ನು ಮೆಟ್ಟಿಲ ಮೇಲಿಂದ ಎಸೆದು ಹತ್ಯೆ ಮಾಡಲು ಯತ್ನಿಸಿದ್ದಾಳೆಂದು ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದು, ತಾಯಿಯ ವಿರುದ್ಧ ಕೊಲೆಗೆ ಯತ್ನಿಸಿದ ಕೇಸನ್ನು ದಾಖಲಿಸಲಾಗಿದೆ.

ಮಗುವನ್ನು ಏಮ್ಸ್ ಆಸ್ಪತ್ರೆಗೆ ದಾಖಿಲಸಾಗಿದ್ದು, ಮುಖದ ಮೇಲೆ ಗಂಭೀರ ರೂಪದ ಗಾಯಗಳಾಗಿವೆ. ಮಗುವಿಗೆ ಸಂಬಂಧಿಸಿದ ಹಾಗೆ ಗಂಡ ಹೆಂಡತಿಯ ನಡುವೆ ಭಾರೀ ಜಗಳಗಳಾಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ತಾಯಿ ಈರೀತಿ ನಿರ್ದಯತೆಯಿಂದ ವರ್ತಿಸಲು ಪ್ರೇರೇಪಿಸಿದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಕುಟುಂಬದ ಇತರ ಸದಸ್ಯರನ್ನು ಕೂಡ ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಗಂಡ ಹೆಂಡತಿಯರ ನಡುವೆ ಜಗಳಗಳಾಗುವುದು ಸಹಜ. ಆದರೆ, ಮಗುವನ್ನು ಎತ್ತಿ ಬಿಸಾಕುವಷ್ಟು ವ್ಯತಿರಿಕ್ತಕ್ಕೆ ಹೋಗಬೇಕೆ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 26 year old mother was seen flinging her child down a flight of stairs of their residence in a video that emerged on Friday. The child's father has filed a complaint in this regard. The incident is said to have taken place 12 days ago.
Please Wait while comments are loading...