ಟೀನಾ ದಬಿ, ಅಮೀರ್ ನಿಶ್ಚಿತಾರ್ಥ ಲವ್ ಜಿಹಾದ್ ಎಂದ ಹಿಂದೂ ಮಹಾಸಭಾ

Posted By:
Subscribe to Oneindia Kannada

ನವದೆಹಲಿ, ನವೆಂಬರ್, 29: ಕೇಂದ್ರ ಲೋಕಾಸೇವಾ ಆಯೋಗದ ಪರಿಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದು ಉತ್ತೀರ್ಣರಾದ ಟೀನಾ ದಬಿ ಮತ್ತು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಾರಾದ ಅಮೀರ್ ಉಲ್ ಶಫಿ ಮದುವೆಯನ್ನು ಹಿಂದು ಮಹಾಸಭಾ ವಿರೋಧಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಸಮಹಾಸಭಾ, " ಯುಪಿಎಸ್ ಪರೀಕ್ಷೆಯಲ್ಲಿ ಟೀನಾ ದಬಿ ಅವರು ಪ್ರಥಮ ಶ್ರೇಣಿ ಪಡೆದಿರುವುದು ಹೆಮ್ಮೆಯ ಸಂಗತಿ ಆದರೆ ಅವರು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದೆ.[ಫಸ್ಟ್ Rank ರಾಣಿಗೆ ಒಲಿದ ಸೆಕೆಂಡ್ Rank ರಾಜು!]

Hindu Mahasabha calls Tina Dabi’s engagement to Aamir ‘love jihad’

ಟೀನಾದಬಿ ಅವರು ಅತರ್ ಜತೆ ವಿವಾಹವಾಗುತ್ತಿರುವುದು ಲವ್ ಜಿಹಾದ್ ಆಗಿದೆ ಎಂದು ಹಿಂದು ಬಲಪಂಥೀಯ ಬಣದ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ ಟೀನಾ ದಬಿ ತಾಯಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಅತರ್ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮನವೊಲಿಸಬೇಕೆಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Hindu Mahasabha calls Tina Dabi’s engagement to Aamir ‘love jihad’

ಮದುವೆಗೂ ಮುನ್ನ ಸರಿಯಾಗಿ ಯೋಚಿಸುವಂತೆ ಮತ್ತು ಪಿತೂರಿ ನಡೆಸುವವರ ವಿರುದ್ಧ ಹೋರಾಡಲು ಕೈ ಜೋಡಿಸುವಂತೆ ಅವರು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.

ಕಳೆದ ಮೇ 11ರಂದು ಸನ್ಮಾನ ಸಮಾರಂಭವೊಂದರಲ್ಲಿ ನಾವು ಭೇಟಿಯಾಗಿದ್ದೆವು. ಸಂಜೆ ಹೊತ್ತಿಗೆ ಅತರ್ ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದರು. ಅವರಿಗೆ ನನ್ನ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು ಎಂದು ಟೀನಾ ತಮ್ಮ ಪ್ರೇಮದ ಕುರಿತು ತಿಳಿಸಿದ್ದರು.

ಮದೆವೆ ಕುರಿತು ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಟೀನಾ ಅವರು " ನಮ್ಮ ಪ್ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ವಿರೋಧಗಳು ಕೇಳಿಬಂದಾಗ ತುಂಬಾ ನೋವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲಾ ಸಾಮಾನ್ಯ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following IAS topper Tina Dabi’s announcement of engagement to the 2nd rank holder Athar Aamir-ul-Shafi a couple of weeks ago, the Akhil Bhartiya Hindu Mahasabha wrote a letter to her parents calling her relationship with Athar, ‘love jihad’.
Please Wait while comments are loading...