ನನ್ನ ಗಂಡನನ್ನು ಹುಡುಕಿಕೊಡಿ.. ತೇಜ್ ಬಹದ್ದೂರ್ ಪತ್ನಿಯ ಅಳಲು

Subscribe to Oneindia Kannada

ನವದೆಹಲಿ, ಫೆಬ್ರವರಿ 9: ನನ್ನ ಗಂಡನನ್ನು ಹುಡುಕಿಕೊಡಿ ಪ್ಲೀಸ್.. ಅಂತ ತೇಜ್ ಬಹದ್ದೂರ್ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಎಸ್ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ತಿಂಗಳ ಹಿಂದೆ ದೇಶದ ಸೈನಿಕರ ಸಮಸ್ಯೆ ಬಗ್ಗೆ ಪೇಸ್ ಬುಕ್ಕಿನಲ್ಲಿ ವಿಡಿಯೋ ಪೋಸ್ಟ್ ಹಾಕಿ ದೇಶದಾದ್ಯಂತ ಸುದ್ದಿಯಾಗಿದ್ದರು.

ಬಿಎಸ್ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ಪತ್ನಿ ಶರ್ಮಿಳಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನನ್ನ ಗಂಡನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹುಡುಕಿಕೊಡಿ ಎಂದು ಆಕೆ ಮೊರೆ ಇಟ್ಟಿದ್ದಾರೆ. ದೆಹಲಿ ಹೈಕೋರ್ಟಿನಲ್ಲಿ 'ಹೇಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸಿರುವ ಆಕೆ ಗಂಡನನ್ನು ಹುಡುಕಿಕೊಡಿ ಎಂದು ಕೋರ್ಟ್ ಬಳಿ ಕೇಳಿಕೊಂಡಿದ್ದಾರೆ.[ಸೇನೆ ಮಾಹಿತಿ ಸಂಗ್ರಹಿಸುತ್ತಿದ್ದ ಪಾಕ್ ಗೂಢಚಾರ ಬಂಧನ]

Help find my husband, BSF jawan's wife who uploaded video tells Delhi HC

ತೇಜ್ ಬಹದ್ದೂರ್ ವೀಡಿಯೋ ಪೋಸ್ಟ್ ಮಾಡಿದ ನಂತರ ತನಿಖೆಗೆ ಆದೇಶ ನೀಡಲಾಗಿತ್ತು. ಆದಾದ ನಂತರ ತಮಗ್ಯಾರಿಗೂ ತೇಜ್ ಬಹದ್ದೂರ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಅವರ ಹೆಂಡತಿ ಅರ್ಜಿಯಲ್ಲಿ ಹೇಳಿದ್ದಾರೆ. ಈಗಾಗಲೇ ಬಿಎಸ್ಎಫ್ ಗೆ ಎರಡು ಪತ್ರಗಳನ್ನೂ ಬರೆದಿದ್ದೇನೆ ಅದಕ್ಕೂ ಉತ್ತರ ಬಂದಿಲ್ಲ. ಆತ ನನ್ನ ಪೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ, ಒಂದೊಮ್ಮೆ ಸ್ವೀಕರಿಸಿದರೂ ಕರೆ ಹೋಲ್ಡ್ ನಲ್ಲಿ ಇರುತ್ತದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.[ಯೋಧನ ರುಂಡ ಕತ್ತರಿಸಿದ ಉಗ್ರರಿಗೆ ತಕ್ಕ ಉತ್ತರ ಸಿಗಲಿದೆ: ಸೇನೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wife of BSF jawan Tej Bahadur Yadav has moved the Delhi High Court stating that she is unable to trace her husband. Yadav created a stir across the nation after he uploaded a video on his social media account in which he complained about the poor quality of food served to jawans.
Please Wait while comments are loading...