ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ: ನಿಯಮ ಮೀರಿದರೆ ದಂಡ ಫಿಕ್ಸ್‌

|
Google Oneindia Kannada News

ನವದೆಹಲಿ ಅಕ್ಟೋಬರ್ 27: ಇತ್ತೀಚೆಗೆ ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಎಷ್ಟೇ ಸುರಕ್ಷಿತವಾಗಿ ವಾಹನ ಸವಾರಿ ಮಾಡಿದರೂ ಕೆಲವೊಮ್ಮೆ ತಮ್ಮದಲ್ಲದ ತಪ್ಪಿಗೆ ಎಷ್ಟೋ ಜನ ಪ್ರಾಣ ಕಳೆದುಕೊಂಡಿರೋದಿದೆ. ಕೆಲವೊಮ್ಮೆ ವಾಹನ ಸವಾರರು ಮಾಡುವ ತಪ್ಪಿಗೆ ಹಿಂಬದಿ ಸವಾರರೂ ಬಲಿಯಾಗಿರೋದಿದೆ. ಹೀಗಾಗಿ ರಸ್ತೆ ಅಪಘಾತಗಳಿಂದಾಗುವ ಪ್ರಾಣಹಾನಿಯನ್ನು ತಪ್ಪಿಸಲು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸದರಿಲು ಸೂಚನೆ ನೀಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಶಿಕ್ಷೆಗೆ ಅರ್ಹರಾಗುವ ಸಾಧ್ಯತೆಯೂ ಇದೆ. ಹೀಗೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕೆಲ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಇದರೊಂದಿಗೆ ಮಕ್ಕಳ ಹಿತದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ 1989 ರ ಮೋಟಾರು ವಾಹನ ಕಾಯ್ದೆಯನ್ನು ಹಲವಾರು ಕಠಿಣ ಕ್ರಮಗಳೊಂದಿಗೆ ಪರಿಷ್ಕರಿಸಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಠಿಣ ದಂಡದ ಕ್ರಮಗಳನ್ನು ವಿಧಿಸುವುದು ಇವುಗಳಲ್ಲಿ ಸೇರಿದೆ. ಜೊತೆಗೆ ಕೇಂದ್ರ ಸರ್ಕಾರ ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣ ಮಾಡುವ ಮಕ್ಕಳ ಸುರಕ್ಷತೆ ಬಗ್ಗೆ ಕೂಡ ಯೋಚಿಸಿದೆ.

ದ್ವಿಚಕ್ರ ವಾಹನ ಸವಾರಿ ಮಾಡುವಾಗ ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ಭಾರತ ಸರ್ಕಾರ ಮೋಟಾರು ವಾಹನ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಭಾರತೀಯ ರಸ್ತೆಗಳಲ್ಲಿ ಚಲಿಸುವ ಬಹುಪಾಲು ಮೋಟಾರು ವಾಹನಗಳಲ್ಲಿ ಮೋಟಾರು ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಹೆಚ್ಚಿವೆ. ಇದು ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಹೆಚ್ಚಿನ ರಸ್ತೆ ಅಪಘಾತಗಳು ದ್ವಿಚಕ್ರ ವಾಹನಗಳನ್ನು ಒಳಗೊಂಡಿರುತ್ತವೆ. ಅನೇಕ ಸಂದರ್ಭಗಳಲ್ಲಿ ಮಕ್ಕಳು ಈ ಅಪಘಾತಗಳಿಗೆ ಬಲಿಯಾಗುತ್ತಾರೆ.

 Helmets are mandatory for young children: Fine For Without Helmet

ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಹಲವು ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಮೋಟಾರು ವಾಹನ ಕಾಯಿದೆಯಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

1. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಈ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಒಮ್ಮೆ ಅನುಮೋದಿಸಿ ಮತ್ತು ಕಾನೂನಾಗಿ ಅಂಗೀಕರಿಸಿದ ನಂತರ, ಈ ನಿಯಮಗಳು 2022 ರಿಂದ ಅನ್ವಯವಾಗುತ್ತವೆ. ಅಲ್ಲದೆ, ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ತಮ್ಮ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು.

2. ಒಂಬತ್ತು ತಿಂಗಳಿಂದ ನಾಲ್ಕು ವರ್ಷದೊಳಗಿನ ಮಕ್ಕಳು, ಮೋಟರ್‌ಸೈಕಲ್ ಅಥವಾ ಸ್ಕೂಟರ್‌ಗಳ ಮೇಲೆ ಪ್ರಯಾಣಿಸುವಾಗ ಮೋಆರ್‌ಟಿಎಚ್(MoRTH) ಮಾಡಿದ ಪ್ರಸ್ತಾಪದ ಪ್ರಕಾರ ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತಾರೆ.

3. ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಮಕ್ಕಳು ಐಎಸ್‌ಐ ಅನುಮೋದಿಸಿದ ಹೆಲ್ಮೆಟ್‌ಗಳನ್ನು ಧರಿಸಬೇಕು. ಇಲ್ಲದಿದ್ದರೆ ವಾಹನ ಸವಾರನ ಮೇಲೆ ದಂಡನಾತ್ಮಕ ಕ್ರಮಗಳನ್ನು ವಿಧಿಸಲಾಗುತ್ತದೆ. ಮಗುವಿನ ತಲೆಗೆ ಸರಿಯಾಗಿ ಹೊಂದಿಕೊಳ್ಳುವ ಮತ್ತು ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಮಾನದಂಡಗಳಿಗೆ ಅನುಗುಣವಾಗಿ ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಅನ್ನು ಧರಿಸಬೇಕು.

4. ಒಂದು ವೇಳೆ ದ್ವಿಚಕ್ರ ವಾಹನದಲ್ಲಿ ಮಗು ಸವಾರಿ ಮಾಡುತ್ತಿದ್ದರೆ, MoRTH ಪ್ರಸ್ತಾಪಿಸಿದಂತೆ ವೇಗವು 40 kmph ಅನ್ನು ದಾಟಬಾರದು. ಉಲ್ಲಂಘಿಸಿದರೆ, ದ್ವಿಚಕ್ರವಾಹನ ಸವಾರನಿಗೆ ₹1000 ದಂಡ ವಿಧಿಸಲಾಗುತ್ತದೆ. ಅಲ್ಲದೆ, ದ್ವಿಚಕ್ರವಾಹನ ಸವಾರರ ಚಾಲನಾ ಪರವಾನಗಿಯನ್ನು ಮೂರು ತಿಂಗಳವರೆಗೆ ಶಿಕ್ಷೆಯಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

Recommended Video

Pakistan ಗದ್ದಾಗ ಸಂಭ್ರಮಿಸಿದ ಭಾರತೀಯರಿಗೆ ಸಂಕಷ್ಟ | Oneindia Kannada

5. ಮಕ್ಕಳ ಸವಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೋಟರ್ ಸೈಕಲಿಸ್ಟ್ ಗಳು ಸುರಕ್ಷತಾ ಸರಂಜಾಮುಗಳನ್ನು ಬಳಸಬೇಕಾಗುತ್ತದೆ. ರಕ್ಷಣಾತ್ಮಕ ಗೇರ್ ಜೊತೆಗೆ ಸುರಕ್ಷತಾ ಸರಂಜಾಮು ಬಾಳಿಕೆ ಬರುವ, ಹಗುರವಾದ, ಹೊಂದಾಣಿಕೆ ಮತ್ತು ಜಲನಿರೋಧಕವಾಗಿರಬೇಕು. ಸುರಕ್ಷತಾ ಸರಂಜಾಮು ಹೆಚ್ಚಿನ ಸಾಂದ್ರತೆಯ ಫೋಮ್‌ನಿಂದ ಮಾಡಲ್ಪಟ್ಟ ಬಹು-ತಂತು ನೈಲಾನ್‌ನಂತಹ ವಸ್ತುಗಳಿಂದ ಮಾಡಲ್ಪಟ್ಟಿದೆ. ವೆಸ್ಟ್ 30 ಕೆಜಿ ವರೆಗೆ ತೂಕವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು.

English summary
The children riding a two-wheeler will have to wear helmets approved by ISI. Or else, the guardian will be charged with punitive measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X