ಕೊರೊನಾ ಲಸಿಕೆ ಬರಮಾಡಿಕೊಳ್ಳಲು ಸರ್ಕಾರ ಸಿದ್ಧವಾದಂತಿಲ್ಲ: ರಾಹುಲ್ ಗಾಂಧಿ
ನವದೆಹಲಿ, ಆಗಸ್ಟ್ 27: ಲಸಿಕೆಯನ್ನು ದೇಶಕ್ಕೆ ಬರಮಾಡಿಕೊಳ್ಳಲು ಸರ್ಕಾರ ಇನ್ನು ಸಿದ್ಧವಾದಂತೆ ಕಾಣುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Recommended Video
ಕೊರೊನಾ ಸೋಂಕು ನಿಯಂತ್ರಿಸಲು ಲಸಿಕೆ ರೂಪಿಸುವಲ್ಲಿ ವಿಫಲವಾದ ಕಾರಣ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ದೇಶದ ಜನತೆಯನ್ನು ಕೊರೊನಾದಿಂದ ರಕ್ಷಿಸಲು ನ್ಯಾಯಯುತ ಲಸಿಕೆ ತಂತ್ರವು ಈಗ ಜಾರಿಯಲ್ಲಿರಬೇಕು. ಆದರೆ ಅದರ ಯಾವುದೇ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ, ಸರ್ಕಾರ ಜನರಿಗೆ ಕೈಗೆಟುಕುವ ದರದಲ್ಲಿ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
A fair and inclusive Covid vaccine access strategy should have been in place by now.
— Rahul Gandhi (@RahulGandhi) August 27, 2020
But there are still no signs of it.
GOI’s unpreparedness is alarming. https://t.co/AUjumgGjGC
ಈ ವಿಷಯದಲ್ಲಿ ಸರ್ಕಾರದ ಪೂರ್ವಸಿದ್ಧತೆ ಆತಂಕಕಾರಿ ಎಂದು ರಾಹುಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಕಡಿಮೆಗೊಳಿಸಲು ಈ ವೇಳೆಗಾಗಲೇ ಲಸಿಕೆ ಲಭ್ಯವಿರಬೇಕಿತ್ತು. ಆದರೆ ಅದರ ಯಾವುದೇ ಲಕ್ಷಣಗಳು ಇನ್ನೂ ಇಲ್ಲ. ಈ ಸಂಬಂಧ ಭಾರತ ಸರ್ಕಾರದ ಪೂರ್ವಸಿದ್ಧತೆ ಆತಂಕಕಾರಿ ಎಂದು ಹೇಳಿದ್ದಾರೆ.

ಭಾರತ ಮೂರನೇ ಸ್ಥಾನದಲ್ಲಿದೆ
ಅತ್ಯಧಿಕ ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತವಿದೆ. ಹೀಗಿರುವಾಗಲೂ ಲಸಿಕೆಯ ಒಪ್ಪಿಗೆಗೆ ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.

ಇಷ್ಟೊತ್ತಿಗಾಗಲೇ ಲಸಿಕೆ ಭಾರತಕ್ಕೆ ಬರಬೇಕಿತ್ತು
ಇಷ್ಟೊತ್ತಿಗಾಗಲೇ ಲಸಿಕೆ ಭಾರತಕ್ಕೆ ಬರಬೇಕಿತ್ತು, ಭಾರತವೂ ಕೂಡ ಕೊವಿಡ್ ಲಸಿಕೆಯನ್ನು ತಯಾರಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಸರ್ಕಾರವು ಈ ಲಸಿಕೆಗಳಿಗೆ ಒಪ್ಪಿಗೆ ನೀಡಿ, ಎಲ್ಲರಿಗೂ ವಿತರಿಸುವಂತಹ ಕಾರ್ಯ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಒಂದು ತಿಂಗಳಲ್ಲಿ 10 ಲಕ್ಷ ಕೊರೊನಾ ಸೋಂಕಿತರು
ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದೆ. ಜುಲೈ 17 ರಂದು 10 ಲಕ್ಷ ಗಡಿ ದಾಟಿತ್ತು,ಆಗಸ್ಟ್ 10 ರಂದು ಒಂದೇ ತಿಂಗಳಲ್ಲಿ ಮತ್ತೆ 10 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಭಾರತದಲ್ಲಿ ಮತ್ತೆ 75,760 ಕೊರೊನಾ ಸೋಂಕಿತರು ಪತ್ತೆ
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಮತ್ತೆ 75,760 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 33,10,234 ಕೊರೊನಾ ಸೋಂಕಿತರಿದ್ದಾರೆ.












Click it and Unblock the Notifications