• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದ್ಯಪಾನದ ವಯೋಮಿತಿ 25 ರಿಂದ 21ಕ್ಕೆ ಇಳಿಕೆ: ಹೊಸ ಅಬಕಾರಿ ನೀತಿಗೆ ಅನುಮೋದನೆ

|

ನವದೆಹಲಿ, ಮಾರ್ಚ್ 22: ಇನ್ನು ಮುಂದೆ ದೇಶದ ರಾಜಧಾನಿ ದೆಹಲಿಯಲ್ಲಿ 'ಕುಡುಕರ ಹಾವಳಿ' ಜೋರಾದರೂ ಅಚ್ಚರಿಯಿಲ್ಲ. ಏಕೆಂದರೆ ಮದ್ಯಪಾನ ಮಾಡಲು ಇದ್ದ ಕಾನೂನು ಬದ್ಧ ವಯೋಮಿತಿಯನ್ನು ದೆಹಲಿ ಸರ್ಕಾರ 25 ರಿಂದ 21ಕ್ಕೆ ಇಳಿಸಿದೆ. ದೆಹಲಿ ಸಂಪುಟವು ನೂತನ ಅಬಕಾರಿ ನೀತಿಗೆ ಸೋಮವಾರ ಅನುಮೋದನೆ ನೀಡಿದೆ. ಈ ಮೂಲಕ ದೆಹಲಿಯಲ್ಲಿ ಮದ್ಯಪಾನದ ಕನಿಷ್ಠ ವಯೋಮಿತಿಯನ್ನು ಇಳಿಸಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಬಕಾರಿ ನೀತಿಯಲ್ಲಿನ ಈ ಬದಲಾವಣೆಗಳನ್ನು ಪ್ರಕಟಿಸಿದರು. ಪ್ರತಿ ಎರಡು ವರ್ಷಗಳಿಗೊಮ್ಮೆ ಲಾಟರಿ ವ್ಯವಸ್ಥೆ ಮೂಲಕ ರೀಟೇಲ್ ಲಿಕ್ಕರ್ ಪರವಾನಗಿಯನ್ನು ನೀಡಲಾಗುತ್ತದೆ.

ಒಂದಲ್ಲ, ಎರಡಲ್ಲ, 510 ಕೋಟಿ ರೂ.ಗೆ ಹರಾಜಾಯ್ತು 'ಎಣ್ಣೆ' ಅಂಗಡಿ!

ಮದ್ಯ ಸೇವನೆಗೆ ಇರುವ ವಯೋಮಿತಿಯನ್ನು ಕಡಿತಗೊಳಿಸುವುದರ ಜತೆಗೆ, ಮನೀಶ್ ಸಿಸೋಡಿಯಾ ಮತ್ತೊಂದು ಪ್ರಮುಖ ಬದಲಾವಣೆಯನ್ನು ಸಹ ಪ್ರಕಟಿಸಿದರು. ಇನ್ನು ಮುಂದೆ ದೆಹಲಿ ಸರ್ಕಾರವು ನಗರದಲ್ಲಿ ಮದ್ಯದಂಗಡಿಗಳನ್ನು ನಡೆಸುವುದಿಲ್ಲ. ಅಲ್ಲದೆ, ರಾಷ್ಟ್ರೀಯ ರಾಜಧಾನಿಯಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ. ಮುಂದೆ ಓದಿ.

ಸರ್ಕಾರದಿಂದ ಮದ್ಯದಂಗಡಿ ಇಲ್ಲ

ಸರ್ಕಾರದಿಂದ ಮದ್ಯದಂಗಡಿ ಇಲ್ಲ

'ಸಚಿವರ ಸಮೂಹದ ಶಿಫಾರಸುಗಳ ಆಧಾರದಲ್ಲಿ ಇಂದು ನೂತನ ಅಬಕಾರಿ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಇನ್ನು ಮುಂದೆ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲಾಗುವುದಿಲ್ಲ ಮತ್ತು ಸರ್ಕಾರವು ಯಾವುದೇ ಮದ್ಯದಂಗಡಿಗಳನ್ನು ನಡೆಸುವುದಿಲ್ಲ. ಪ್ರಸ್ತುತ ದೆಹಲಿ ಸರ್ಕಾರವು ಶೇ 60ರಷ್ಟು ಲಿಕ್ಕರ್ ಶಾಪ್‌ಗಳನ್ನು ನಡೆಸುತ್ತಿದೆ' ಎಂದು ಅವರು ತಿಳಿಸಿದರು.

ರಸ್ತೆಯತ್ತ ಕಿಟಕಿಯೂ ಇರುವಂತಿಲ್ಲ

ರಸ್ತೆಯತ್ತ ಕಿಟಕಿಯೂ ಇರುವಂತಿಲ್ಲ

ಮದ್ಯದಂಗಡಿಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಲಿಕ್ಕರ್ ಶಾಪ್‌ಗಳು ಗರಿಷ್ಠ 500 ಚದರ ಅಡಿ ವ್ಯಾಪ್ತಿಯಲ್ಲಿ ಇರಬೇಕು. ಅಂತಹ ಅಂಗಡಿಗಳ ಕಿಟಕಿಗಳು ರಸ್ತೆಯ ಕಡೆಗೆ ಮುಖಮಾಡುವಂತಿಲ್ಲ. ರಾಜಧಾನಿಯಲ್ಲಿ ಎಲ್ಲ ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳು ರಾತ್ರಿ 3 ಗಂಟೆಯವರೆಗೂ ಮದ್ಯ ಪೂರೈಸಲು ಅನುಮತಿ ನೀಡುವಂತೆ ಕಳೆದ ವರ್ಷ ಸರ್ಕಾರದ ಸಮಿತಿಯೊಂದು ಶಿಫಾರಸು ಮಾಡಿತ್ತು.

ಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿ

ಶೇ 20ರಷ್ಟು ಆದಾಯ

ಶೇ 20ರಷ್ಟು ಆದಾಯ

ಆತಿಥ್ಯ ಮತ್ತು ರೆಸ್ಟೋರೆಂಟ್ ವಲಯದಲ್ಲಿನ ಪರವಾನಗಿ ಶಿಫಾರಸು ವ್ಯವಸ್ಥೆಯನ್ನು ರದ್ದುಗೊಳಿಸಲು ಸಲಹೆಗಳನ್ನು ಸಲ್ಲಿಸಲಾಗಿದೆ. ತೆರಿಗೆ ವಂಚನೆಯಾಗದಂತೆ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೊಸ ಅಬಕಾರಿನೀತಿಯು ಶೇ 20ರಷ್ಟು ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಲಿಕ್ಕರ್ ಮಾಫಿಯಾಕ್ಕೆ ಕಡಿವಾಣ

ಲಿಕ್ಕರ್ ಮಾಫಿಯಾಕ್ಕೆ ಕಡಿವಾಣ

'ಮದ್ಯ ಮಳಿಗೆಗಳ ಸಮರ್ಪಕ ಹಂಚಿಕೆಯ ಮೇಲೆ ಸರ್ಕಾರ ಗಮನ ಹರಿಸಲಿದೆ. ಈ ಮೂಲಕ ಲಿಕ್ಕರ್ ಮಾಫಿಯಾವನ್ನು ವ್ಯಾಪಾರದಿಂದ ಹೊರಹಾಕಲಾಗುತ್ತದೆ. ಅಬಕಾರಿ ಇಲಾಖೆಯ ಸುಧಾರಣಾ ಕ್ರಮಗಳಿಂದ ಶೇ 20ರಷ್ಟು ಆದಾಯ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ' ಎಂದು ಮನೀಶ್ ಸಿಸೋಡಿಯಾ ಹೇಳಿದರು.

English summary
Delhi government cabinet approved a new excise policy with an announcement that the legal drinking age has been reduced from 25 to 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X