• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗತ್ತಿನಾದ್ಯಂತ ಕೊವಿಡ್ ಸಾವಿನ ಸಂಖ್ಯೆ 6 ಲಕ್ಷ, ಟಾಪ್ 5 ದೇಶ ಯಾವುದು?

|

ದೆಹಲಿ, ಜುಲೈ 20: ಜಗತ್ತಿನಾದ್ಯಂತ ಕೊರೊನಾ ವೈರಸ್ ಪ್ರಕರಣ ಸಂಖ್ಯೆ 1.4 ಕೋಟಿಗಿಂತ ಹೆಚ್ಚು ದಾಖಲಾಗಿದೆ. ಅದರಲ್ಲಿ 6 ಲಕ್ಷ ಮಂದಿ ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ.

ಇದುವರೆಗೂ ಪ್ರಪಂಚಾದ್ಯಂತ 608,942 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಅದರಲ್ಲಿ ಅಮೆರಿಕ ದೇಶದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ವರದಿಗಳ ಪ್ರಕಾರ ಯುಎಸ್‌ನಲ್ಲಿ 143,289 ಮಂದಿ ಮೃತಪಟ್ಟಿದ್ದಾರೆ. ಕಳೆದ ಗಂಟೆಯಲ್ಲಿ 412 ಜನರು ಅಮೆರಿಕದಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಭಾರತದಲ್ಲಿ 24 ಗಂಟೆಯಲ್ಲಿ 40,425 ಹೊಸ ಕೋವಿಡ್ ಪ್ರಕರಣಗಳು!

ಅಮೆರಿಕ ಬಿಟ್ಟರೆ ಬ್ರೆಜಿಲ್ ದೇಶದಲ್ಲಿ ಅತಿ ಹೆಚ್ಚು ಕೊವಿಡ್ ಸಾವು ಆಗಿದೆ. ಬ್ರೆಜಿಲ್‌ನಲ್ಲಿ ಒಟ್ಟು 79,533 ಜನರು ಸಾವನ್ನಪ್ಪಿದ್ದಾರೆ. ಕಳೆದ ಗಂಟೆಯಲ್ಲಿ 716 ಮಂದಿ ಮೃತಪಟ್ಟಿದ್ದಾರೆ.

ನಂತರದ ಸ್ಥಾನದಲ್ಲಿ ಯುಕೆ ಇದೆ. ಯುನೈಟೆಡ ಕಿಂಗ್‌ಡಮ್‌ನಲ್ಲಿ 45300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೆಕ್ಸಿಕೋದಲ್ಲಿ 38888 ಮಂದಿ ಸಾವನ್ನಪ್ಪಿದ್ದರೆ, ಇಟಲಿಯಲ್ಲಿ 35045 ಜನರು ಮೃತಪಟ್ಟಿದ್ದಾರೆ.

ಫ್ರಾನ್ಸ್ ದೇಶದಲ್ಲಿ 30152 ಜನರು ಕೊವಿಡ್‌ಗೆ ಬಲಿಯಾಗಿದ್ದಾರೆ. ಸ್ಪೇನ್‌ನಲ್ಲಿ 28420 ಜನರು ಹಾಗೂ ಭಾರತದಲ್ಲಿ ಇದುವರೆಗೂ 27,497 ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ 14,645,947 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಅಮೆರಿಕದಲ್ಲಿ 3,898,550 ಕೇಸ್, ಬ್ರೆಜಿಲ್‌ನಲ್ಲಿ 2,099,896 ಕೇಸ್ ಹಾಗೂ ಭಾರತದಲ್ಲಿ 11,18,043 ಜನರಿಗೆ ಕೊವಿಡ್ ತಗುಲಿದೆ.

English summary
Global coronavirus cases to reach one and a half crore and death toll surpass 6 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X