ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ದುರಂತ ನೆನಪಿಸುವ ಘಟನೆ, ಆರೋಪಿ ಬಂಧನ

ಚಲಿಸುವ ವಾಹನದಲ್ಲಿ ಅತ್ಯಾಚಾರಕ್ಕೀಡಾಗಿ ದುರಂತ ಅಂತ್ಯ ಕಂಡ ನಿರ್ಭಯಾ ಪ್ರಕರಣವನ್ನು ನೆನಪಿಸುವ ಕಹಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಜರುಗಿದೆ.

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 16: ಚಲಿಸುವ ವಾಹನದಲ್ಲಿ ಅತ್ಯಾಚಾರಕ್ಕೀಡಾಗಿ ದುರಂತ ಅಂತ್ಯ ಕಂಡ ನಿರ್ಭಯಾ ಪ್ರಕರಣವನ್ನು ನೆನಪಿಸುವ ಕಹಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಜರುಗಿದೆ. ಎಎನ್ ಐ ವರದಿ ಪ್ರಕಾರ 20 ವರ್ಷ ವಯಸ್ಸಿನ ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ ನಡೆದಿದೆ. ಆರೋಪಿ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

ಗೃಹ ಸಚಿವಾಲಯದ ಫಲಕ (ಲಾಂಛನ) ಇದ್ದ ಮಾರುತಿ ಸುಜುಕಿ ಎಸ್ ಎಕ್ಸ್ 4 ಕಾರಿನಲ್ಲಿ ಈ ಘಟನೆ ನಡೆದಿತ್ತು, ದೆಹಲಿಯ ಮೋತಿ ಭಾಗ್ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಸಿಐಎಸ್‍ಎಫ್ ಮುಖ್ಯ ಪೇದೆಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Girl allegedly raped in Delhi, accused arrested

ನಾಲ್ಕು ವರ್ಷಗಳ ಹಿಂದೆ ಇದೇ ದಿನ ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಬರ್ಬರ ಲೈಂಗಿಕ ದಾಳಿಗೆ ತುತ್ತಾಗಿದ್ದ ನಿರ್ಭಯಾಳನ್ನು ಸಿಂಗಪುರ ಆಸ್ಪತ್ರೆಗೆ ಸೇರಿಸಿ ಉಳಿಸಿಕೊಳ್ಳಲು ಯತ್ನ ವಿಫಲವಾಗಿತ್ತು.[ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?]

ಈಗ ನೋಯ್ದಾ ಮೂಲದ 20 ವರ್ಷದ ಯುವತಿ ದೆಹಲಿಗೆ ಉದ್ಯೋಗಾರ್ಥಿಯಾಗಿ ಬಂದಿದ್ದಳು. ಎಐಐಎಂಎಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಆಕೆ ಕಾಯುತ್ತಿದ್ದಳು. ಆಗ ಗೃಹ ಸಚಿವಾಲಯದ ಫಲಕ ಇದ್ದ ಕಾರೊಂದು ಅಲ್ಲಿಗೆ ಬಂದಿತು. ಯುವತಿಗೆ ಡ್ರಾಪ್ ನೀಡುವುದಾಗಿ ಹೇಳಿ ಅಕೆಯನ್ನು ಕಾರಿನಲ್ಲಿ ಕರೆದೊಯ್ಯಲಾಯಿತು.

ಕಾರಿನಲ್ಲಿ ಚಾಲಕ ಮತ್ತು ಇನ್ನೊಬ್ಬ ಯುವಕ ಇದ್ದರು. ಕೆಲ ದೂರ ತೆರಳಿದ ನಂತರ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕಾರಿನಿಂದ ತಳ್ಳಿ ಪರಾರಿಯಾದರು. ಯುವತಿ ನೀಡಿದ ದೂರಿನ ಮೇಲೆ ಪೊಲೀಸರು ಅಮನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಈ ಕಾರು ಸಿಐಎಸ್‍ಎಫ್ ಹೆಡ್ ಕಾನ್ಸ್ ಟೇಬಲ್ ಗೆ ಸೇರಿದ ಈ ಕಾರಿನ ಚಾಲಕನನ್ನು ಬಂಧಿಸಿ ಐಪಿಸಿ ಸೆಕ್ಷನ್ 357 ಹಾಗೂ 376ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
A 20-year-old Noida woman was allegedly raped by a taxi driver in Moti Bagh, Delhi on Thursday. According to ANI reports, Police said that the victim was offered a lift by the cab driver, who then allegedly raped her in his car. The Delhi police have arrested the accused cab driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X