ಸಂಸತ್ತಿನಲ್ಲಿ ಕುಸಿದು ಬಿದ್ದ ಮಾಜಿ ಸಚಿವ ಇ ಅಹ್ಮದ್

Posted By:
Subscribe to Oneindia Kannada

ನವದೆಹಲಿ, ಜನವರಿ 31: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಯುಪಿಎ ಸರ್ಕಾರದ ಮಾಜಿ ಸಚಿವ ಇ ಅಹ್ಮದ್ ಅವರು ಕುಸಿದು ಬಿದ್ದರು. ಅಹ್ಮದ್ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.

ಇ ಅಹ್ಮದ್ ಅವರು ಡಾ. ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

Former Minister E Ahamed Collapses In Parliament, Rushed To Hospital

ಮಂಗಳವಾರ ಬಜೆಟ್ ಆಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬಜೆಟ್ ಭಾಷಣ ಮಾಡುವ ವೇಳೆಗೆ ಈ ಘಟನೆ ಸಂಭವಿಸಿದೆ.

78 ವರ್ಷ ವಯಸ್ಸಿನ ಅಹ್ಮದ್ ಅವರು ಇಂಡಿಯನ್ ಮುಸ್ಲಿಂ ಲೀಗ್ ನ ಅಧ್ಯಕ್ಷರಾಗಿದ್ದಾರೆ. ಕೇರಳದ ಮಲ್ಲಪುರಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಹ್ಮದ್ ಅವರ ಅರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು ವಿಚಾರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lok Sabha member and former Union Minister E. Ahamed was on Tuesday taken ill in Parliament.
Please Wait while comments are loading...